Bollywood Hungama: ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿ ಬಾಲಿವುಡ್‌ನಲ್ಲಿ ಖ್ಯಾತಿ ಗಳಿಸಿದವರು!

Bollywood Child actors: ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಇವರು ಇಂದು ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪ್ರೇಕ್ಷಕರ ಮೇಲೆ ಶಾಶ್ವತ ಪ್ರಭಾವವನ್ನು ಬೀರಿದ್ದಾರೆ. ಈ ನಟರು ತಮ್ಮ ಅಭಿನಯದ ಪ್ರತಿಭೆಯ ಮೂಲಕ ಸಿನಿಮಾ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ.

ನವದೆಹಲಿ: ಬಾಲಿವುಡ್‍ನ ಇಂದಿನ ಅನೇಕ ಖ್ಯಾತ ನಟರು ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಇವರು ಇಂದು ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪ್ರೇಕ್ಷಕರ ಮೇಲೆ ಶಾಶ್ವತ ಪ್ರಭಾವವನ್ನು ಬೀರಿದ್ದಾರೆ. ಈ ನಟರು ತಮ್ಮ ಅಭಿನಯದ ಪ್ರತಿಭೆಯ ಮೂಲಕ ಸಿನಿಮಾ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟರು ನಿರ್ಮಾಪಕರ ಪಾಲಿನ ಡಾರ್ಲಿಂಗ್ ಆಗಿದ್ದಾರೆ. ಪ್ರತಿಭೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಸಾಧನೆ ಮಾಡಿರುವ ಈ ನಟರ ಚಿತ್ರಗಳು ಬಿಡುಗಡೆಯಾದರೆ ಸಾಕು ಅಭಿಮಾನಿಗಳು ಮುಗಿಬಿದ್ದು ನೋಡುತ್ತಾರೆ. ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿ ಇಂದಿಗೂ ಬಾಲಿವುಡ್ ಆಡಳುತ್ತಿರುವ ಖ್ಯಾತ ನಟರ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಬಾಲ ನಟರಾಗಿಯೇ ಚಿತ್ರರಂಗ ಪ್ರವೇಶಿಸಿದ್ದರು. ಕೇವಲ 6 ವರ್ಷದವರಾಗಿದ್ದಾಗ 1980ರಲ್ಲಿ 'ಆಶಾ' ಚಿತ್ರದಲ್ಲಿ ಬಾಲ ಕಲಾವಿದರಾಗಿ ಬಣ್ಣಹಚ್ಚುವ ಮೂಲಕ ಅವರು ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಬಾಲ್ಯದಲ್ಲಿ ಅವರು 'ಭಗವಾನ್ ದಾದಾ' ಮತ್ತು 'ಆಪ್ ಕೆ ದೀವಾನೆ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2 /5

ಶಾಹಿದ್ ಕಪೂರ್ ನಟನೆಯ 'ಐ ಆಮ್ ಎ ಕಾಂಪ್ಲಾನ್ ಬಾಯ್' ಜಾಹೀರಾತು ಇಂದಿಗೂ ಸ್ಮರಣೀಯವಾಗಿದೆ. ಅನೇಕ ಜನರು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಶಾಹಿದ್ ಬಾಲ ಕಲಾವಿದರಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇಂದು ಅವರು ಬಹುಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಕೋಂಪ್ಲಾನ್ ಜಾಹೀರಾತಿನಲ್ಲಿ ಬಾಲನಟನಾಗಿ ಬಾಲಿವುಡ್‌ನ ಪ್ರಸಿದ್ಧ ನಟನಾಗುವವರೆಗಿನ ಅವರ ಪ್ರಯಾಣವು ನಿಜಕ್ಕೂ ಗಮನಾರ್ಹವಾಗಿದೆ.

3 /5

1973ರಲ್ಲಿ ಚಿಕ್ಕಪ್ಪ ನಾಸಿರ್ ಹುಸೇನ್ ನಿರ್ದೇಶಿಸಿದ ಅವರ ಚೊಚ್ಚಲ ಚಿತ್ರ 'ಯಾದೋನ್ ಕಿ ಬಾರಾತ್'ನೊಂದಿಗೆ ಅಮೀರ್ ಖಾನ್ ಬಾಲಿವುಡ್ ಪ್ರಯಾಣ ಪ್ರಾರಂಭವಾಯಿತು. 1988ರ 'ಖಯಾಮತ್ ಸೆ ಕಯಾಮತ್ ತಕ್' ಚಿತ್ರದಲ್ಲಿನ ಅದ್ಭುತ ಪಾತ್ರದಿಂದ ಅಮಿರ್ ವ್ಯಾಪಕ ಮನ್ನಣೆ ಮತ್ತು ಮೆಚ್ಚುಗೆ ಗಳಿಸಿದರು. ಕಲೆಗೆ ಅವರು ನೀಡುವ ಗೌರವ ಮತ್ತು ಸಮರ್ಪಣೆ, ಸಾಮಾಜಿಕ ಕಾರಣಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆ, ಅರ್ಥಪೂರ್ಣ ಸಿನಿಮಾ ನಿರ್ಮಿಸುವ ಸಾಮರ್ಥ್ಯದಿಂದ ಅಮಿರ್ ಬಾಲಿವುಡ್‌ನ ಅತ್ಯಂತ ಗೌರವಾನ್ವಿತ ಮತ್ತು ಪ್ರಭಾವಿ ನಟರಲ್ಲಿ ಒಬ್ಬರಾಗಿ ಖ್ಯಾತಿ ಗಳಿಸಿದ್ದಾರೆ.  

4 /5

ಸಂಜಯ್ ದತ್ ಅವರ ನಟನಾ ವೃತ್ತಿಜೀವನವು ಹಲವಾರು ದಶಕಗಳನ್ನು ವ್ಯಾಪಿಸಿದೆ. ಅವರು ತಮ್ಮ ಚಿತ್ರಗಳ ಉದ್ದಕ್ಕೂ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತಮ್ಮ ಆಕ್ಷನ್-ಪ್ಯಾಕ್ಡ್ ಮತ್ತು ಹಾಸ್ಯ ಪಾತ್ರಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಚಿತ್ರೋದ್ಯಮದಲ್ಲಿ ಅವರ ಪ್ರಯಾಣವು 1981ರ ಚಲನಚಿತ್ರ 'ರಾಕಿ'ನಲ್ಲಿ ಚೊಚ್ಚಲ ಚಿತ್ರಕ್ಕಿಂತ ಮುಂಚೆಯೇ ಪ್ರಾರಂಭವಾಯಿತು. ಸಂಜಯ್ ದತ್ ತಮ್ಮ ತಂದೆ ಸುನಿಲ್ ದತ್ ನಿರ್ದೇಶಿಸಿದ 1971ರ 'ರೇಷ್ಮಾ ಔರ್ ಶೇರಾ' ಚಿತ್ರದಲ್ಲಿ ಬಾಲ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ್ದರು.

5 /5

ನೀಲ್ ನಿತಿನ್ ಮುಖೇಶ್ ಅವರು ‘ವಿಜಯ್’ (1988) ಮತ್ತು 'ಜೈಸಿ ಕರ್ನಿ ವೈಸಿ ಭರ್ನಿ' (1989) ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದರು. ಈ ಚಿತ್ರಗಳು ಅವರ ವೃತ್ತಿಜೀವನಕ್ಕೆ ಅಡಿಪಾಯ ಹಾಕಿದವು. ವಾಣಿಜ್ಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ನೀಲ್ ನಿತಿನ್ ಮುಖೇಶ್ 2007ರ 'ಜಾನಿ ಗದ್ದಾರ್' ಚಿತ್ರದಲ್ಲಿ ಪೂರ್ಣಪ್ರಮಾಣದ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.