Anchor Anushree: ಅನುಶ್ರೀ ಚಟಪಟ ಮಾತನಾಡುವುದನ್ನು ಕಲಿತದ್ದು ಇವರಿಂದಲೇ!! ಮೊದಲ ಬಾರಿಗೆ ʼಆʼ ವ್ಯಕ್ತಿ ಬಗ್ಗೆ ಮಾತನಾಡಿದ ಖ್ಯಾತ ನಿರೂಪಕಿ!

Anchor Anushree father: ಪಟ ಪಟ ಪಟಾಕಿಯಂತೆ ಮಾತನಾಡುವ ಮೂಲಕ ಎಲ್ಲರಿಗೂ ಮೋಡಿ ಮಾಡಿದ ಕನ್ನಡದ ಚೆಲುವೆ ಆಂಕರ್‌ ಅನುಶ್ರೀ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಇತ್ತೀಚೆಗೆ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ..
 

1 /5

ಕರಾವಳಿ ಬೆಡಗಿ ನಟಿ, ಆಂಕರ್‌ ಅನುಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿರುವ ಚೆಲುವೆ ಈಕೆ.. ಸ್ಟಾರ್‌ ಹಿರೋಯಿನ್‌ಗಳ ರೇಂಜ್‌ಗೆ ಕ್ರೇಜ್‌ ಪಡೆದುಕೊಂಡ ಜನಪ್ರಿಯ ನಿರೂಪಕಿ ಅನುಶ್ರೀ ಎಂದರೇ ತಪ್ಪಾಗುವುದಿಲ್ಲ..   

2 /5

ನಿರೂಪಕಿ ಅನುಶ್ರೀ ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿದ್ದಾರೆ.. ಅನೇಕ ಸಿನಿಮಾಗಳ ಆಡಿಯೋ ಲಾಂಚ್‌, ಫ್ರೀ ರಿಲೀಸ್‌ ಈವೆಂಟ್‌, ಹೀಗೆ ಹಲವಾರು ವೇದಿಕೆಗಳಲ್ಲಿ ತಮ್ಮ ಮಾತಿನಿಂದಲೇ ಎಲ್ಲರಿಗೂ ಮೋಡಿ ಮಾಡುತ್ತಿದ್ದಾರೆ..   

3 /5

ಇನ್ನು ನಟಿ, ಆಂಕರ್‌ ಅನುಶ್ರೀ ಯಾವುದೇ ಸಂದರ್ಶನಗಳಲ್ಲಿ ಭಾಗವಹಿಸುತ್ತಿರಲಿಲ್ಲ.. ಇತ್ತೀಚೆಗೆ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಅನುಶ್ರೀ ಭಾಗವಹಿಸಿದ್ದು ತಮ್ಮ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್‌ ವಿಚಾರಗಳನ್ನು ಹಂಚಿಕೊಂಡಿದ್ದಾರೆ..  

4 /5

ಸಂದರ್ಶನದಲ್ಲಿ ನೀವು ಹೆಚ್ಚು ಮಾತನಾಡುವುದನ್ನು ಕಲಿತದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಅನುಶ್ರೀ ನನ್ನಪ್ಪನಿಂದ ಬಂದ ಒಂದೇ ಬಳುವಳಿ ಎಂದರೇ ಅದು ಹೆಚ್ಚು ಮಾತನಾಡುವುದು.. ನಾನು ಜಾಸ್ತಿ ಮಾತನಾಡುವುದನ್ನು ಕಲಿತದ್ದು ನನ್ನ ತಂದೆಯಿಂದ.. ಅವರು ಕಂಪನಿಯ ಮಾರ್ಕೆಟಿಂಗ್‌ನಲ್ಲಿ ಗೋಲ್ಡ್‌ ಮೆಡಲಿಸ್ಟ್‌ ಆಗಿದ್ದರು ಹೀಗಾಗಿ ಮಾತನಾಡುವ ಕಲೆ ಅವರಿಂದ ಒಲಿದಿದೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ..  

5 /5

ಈ ಹಿಂದೆಂದೂ ಎಲ್ಲಿಯೂ ಅನುಶ್ರೀ ತಮ್ಮ ತಂದೆಯ ಬಗ್ಗೆ ಮಾತನಾಡಿರಲಿಲ್ಲ.. ಅವರು ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ..