Hair Care: ಗಟ್ಟಿಮುಟ್ಟಾದ ಉದ್ದನೆಯ ಕೂದಲಿಗೆ ಈ ಚಿಕ್ಕ ಪದಾರ್ಥವೇ ವರದಾನ! ಆದರೆ ಹೀಗೆ ಬಳಸಿ!!

Fenugreek seeds To Hair: ಪ್ರತಿಯೊಬ್ಬ ಮಹಿಳೆಯು ಬಲವಾದ, ದಪ್ಪ ಮತ್ತು ಉದ್ದನೆಯ ಕೂದಲನ್ನು ಹೊಂದಬೇಕೆಂದು ಕನಸು ಕಾಣುತ್ತಾರೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಶ್ಯಾಂಪೂಗಳು, ಎಣ್ಣೆಗಳು ಮತ್ತು ಕಂಡಿಷನರ್ಗಳನ್ನು ಹೆಚ್ಚಾಗಿ ಬಳಸುತ್ತಾರೆ.. ಆದರೆ ಅದಕ್ಕೆ ತಕ್ಕ ಪ್ರಲಿತಾಂಶ ಸಿಗುವುದಿಲ್ಲ.. ಹೀಗಾಗಿ ಇಂತಹ ಸಮಸ್ಯೆಗಳಿಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಬೇಕು.. 

1 /6

 ಮೆಂತ್ಯ ಬೀಜಗಳು ನಿಮ್ಮ ಕೂದಲಿಗೆ ವರದಾನಕ್ಕಿಂತ ಕಡಿಮೆಯಿಲ್ಲ, ಅವು ಪ್ರೋಟೀನ್, ಕಬ್ಬಿಣ, ಜೀವಸತ್ವಗಳು ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಅದರ ಸಹಾಯದಿಂದ ನೀವು ನಿಮ್ಮ ಕೂದಲನ್ನು ಕಪ್ಪು, ದಪ್ಪ ಮತ್ತು ಬಲವಾಗಿ ಮಾಡಬಹುದು.  

2 /6

ಮೆಂತ್ಯ ಬೀಜದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ... ಈ ಬೀಜಗಳು ಕೂದಲಿನ ಹಾನಿಯನ್ನು ತಡೆದು ಹೊಸಹೊಳಪನ್ನು ನೀಡುತ್ತವೆ.. ಇದು ಹೇರಳ ಪ್ರೋಟೀನ್ಗಳು ಮತ್ತು ವಿಟಮಿನ್ಗಳನ್ನು ಹೊಂದಿದ್ದು ಇದರಿಂದ ಕೂದಲಿನ ಬೆಳವಣಿಗೆಯು ಹೆಚ್ಚಾಗುತ್ತದೆ..  

3 /6

ಮೆಂತ್ಯ ಬೀಜಗಳನ್ನು ಕೂದಲಿನ ಎಲ್ಲಾ ಸಮಸ್ಯೆಗೆ ರಾಮಬಾಣ ಎಂದು ಹೇಳಲಾಗುತ್ತದೆ. ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ನಂತರ ಅದನ್ನು ಪೇಸ್ಟ್ ಮಾಡಿ, ಅದನ್ನು ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ನಂತರ ನಿಮ್ಮ ಕೂದಲನ್ನು ತೊಳೆದುಕೊಳ್ಳಿ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಬಹುದು.  

4 /6

 ಅಲ್ಲದೇ ಮೆಂತ್ಯವನ್ನು ಎಣ್ಣೆಯಲ್ಲಿ ಬಿಸಿ ಮಾಡಿ, ತಣ್ಣಗಾಗಿಸಿ, ಆ ಎಣ್ಣೆಯಿಂದ ನಿಮ್ಮ ಕೂದಲು ಮತ್ತು ನೆತ್ತಿಗೆ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಟ್ಟು ಮರುದಿನ ಬೆಳಿಗ್ಗೆ ನಿಮ್ಮ ಕೂದಲನ್ನು ತೊಳೆಯಿರಿ.  

5 /6

ಇನ್ನೊಂದು ವಿಧಾನವೆಂದರೆ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಮರುದಿನ ಅದರ ಪೇಸ್ಟ್‌ನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.. ಹೀಗೆ ಮಾಡುವುದರಿಂದ ಕೂದಲು ಕೂಡ ಸ್ಟ್ರಾಂಗ್ ಆಗುತ್ತದೆ.  

6 /6

ಇಲ್ಲಿ ನೀಡಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದರು. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸಿಲ್ಲ.