ಫಿಂಗರ್‌ಪ್ರಿಂಟ್‌ನಂತೆ ಕಾಣುವ ದ್ವೀಪವನ್ನು ಎಂದಾದರೂ ನೋಡಿದ್ದೀರಾ..! ಇಲ್ಲಿದೆ ನೋಡಿ..

Fingerprint Island : ಭಗವಂತ ಈ ಜಗತ್ತನ್ನು ಅತ್ಯಂತ ಸುಂದರ ಮತ್ತು ಅನನ್ಯವಾಗಿ ಸೃಷ್ಟಿಸಿದ್ದಾನೆ. ಪ್ರಕೃತಿಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಸುಂದರ ಸ್ಥಳಗಳನ್ನು ನೋಡಲು ಜನರು ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಅನೇಕ ವಿಸ್ಮಯಕಾರಿ ದ್ವೀಪಗಳಿವೆ. ಅದರಂತೆ ನೀವು ಎಂದಾದರು ಫಿಂಗರ್‌ಪ್ರಿಂಟ್‌ನಂತೆ ಕಾಣುವ ದ್ವೀಪವನ್ನು ನೋಡಿದ್ದೀರಾ..? ಈ ಕುರಿತ ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..
 

Croatian Fingerprint Island : ಭಗವಂತ ಈ ಇಡೀ ಬ್ರಹ್ಮಾಂಡವನ್ನು ಅದ್ಭುತವಾಗಿ ಸೃಷ್ಟಿಸಿದ್ದಾನೆ. ಪ್ರಕೃತಿಯಲ್ಲಿ ಜನರ ಕಣ್ಣಿಗೆ ಕಾಣದ ಅನೇಕ ನೈಸರ್ಗಿಕವಾಗಿ ರೂಪುಗೊಂಡ ಅದ್ಭತ ಸ್ಥಳಗಳಿವೆ. ಅವರುಗಳನ್ನು ನೋಡಲು ಮಾನವ ಸದಾ ಇಷ್ಟ ಪಡುತ್ತಾನೆ. ಹಾಗೆಯೇ ಅನೇಕ ವಿಸ್ಮಯಕಾರಿ ದ್ವೀಪಗಳಿವೆ. ಈ ಪೈಕಿ ಫಿಂಗರ್‌ಪ್ರಿಂಟ್‌ನಂತೆ ಕಾಣುವ ದ್ವೀಪವನ್ನು ನೀವು ಎಂದಾದರು ನೋಡಿದ್ದೀರಾ.. ಬನ್ನಿ.. ಇಲ್ಲಿದೆ ನೋಡಿ..
 

1 /5

ಕ್ರೊಯೇಷಿಯಾದಲ್ಲಿ (Croatian fingerprint island) ಕಾಣ ಸಿಗುವ ಈ ದ್ವೀಪವನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈ ದ್ವೀಪದ ವೈಮಾನಿಕ ನೋಟವು ಅದ್ಭುತವಾಗಿದೆ.   

2 /5

ಈ ದ್ವೀಪದ ಮೇಲ್ಮೈ ವಿಸ್ತೀರ್ಣ ಕೇವಲ 0.14 ಚದರ ಕಿಲೋಮೀಟರ್. ಈ ದ್ವೀಪದ ಉದ್ದ ಕೇವಲ 1.43 ಕಿ.ಮೀ. ಅಂದರೆ ಕಾಲ್ನಡಿಗೆಯ ಮೂಲಕ ಮಾತ್ರ ದ್ವೀಪವನ್ನು ದಾಟಬಹುದು. ಇಲ್ಲಿ ಯಾರೂ ವಾಸಿಸುವುದಿಲ್ಲ.  

3 /5

ಈ ದ್ವೀಪದ ಅಂಡಾಕಾರದ ಆಕಾರವು ಸ್ವಾಭಾವಿಕವಾಗಿ ಸೃಷ್ಟಿಯಾಗಿದೆ. ಸ್ಥಳೀಯರು ತಮ್ಮ ಮನೆ ಮತ್ತು ಬೆಳೆಗಳನ್ನು ಬಲವಾದ ಗಾಳಿಯಿಂದ ರಕ್ಷಿಸಲು ಬಲವಾದ ಗೋಡೆಗಳನ್ನು ನಿರ್ಮಿಸಿದ್ದರಿಂದ ಈ ದ್ವೀಪವನ್ನು ಮೇಲಿನಿಂದ ನೋಡಿದರೆ ಬೆರಳಿನ ಮುದ್ರೆಯಂತಿದೆ. ಅದಕ್ಕಾಗಿಯೇ ಈ ದ್ವೀಪವನ್ನು ಬೆರಳಚ್ಚು ದ್ವೀಪ ಎಂದು ಕರೆಯಲಾಗುತ್ತದೆ.  

4 /5

ಬಾಲ್ಜೆನಾಕ್ ದ್ವೀಪವು ಆಡ್ರಿಯಾಟಿಕ್ ಸಮುದ್ರದಲ್ಲಿರುವ ಶಿಬೆನಿಕ್ ದ್ವೀಪಸಮೂಹದ ಭಾಗವಾಗಿದೆ. ಇದು ಅಂಡಾಕಾರದ ಆಕಾರದಲ್ಲಿದೆ. ಸ್ಪಷ್ಟವಾಗಿ ಫಿಂಗರ್‌ಪ್ರಿಂಟ್‌ನ ಆಕಾರ. ಆದ್ದರಿಂದ ಇದನ್ನು ಫಿಂಗರ್‌ಪ್ರಿಂಟ್ ದ್ವೀಪ ಎಂದು ಕರೆಯಲಾಗುತ್ತದೆ  

5 /5

ಈ ಸಣ್ಣ ದ್ವೀಪವು ಯುರೋಪಿನ ಕ್ರೊಯೇಷಿಯಾದ ಕರಾವಳಿಯಲ್ಲಿದೆ. ಈ ದ್ವೀಪದ ಹೆಸರು ಬಾಲ್ಗೆನಾಕ್. ನೀವು ಈ ದ್ವೀಪವನ್ನು ಮೇಲಿನಿಂದ ಅಂದರೆ ಡ್ರೋನ್ ಅಥವಾ ಹೆಲಿಕಾಪ್ಟರ್‌ನಿಂದ ನೋಡಿದರೆ, ಫಿಂಗರ್ ಪ್ರಿಂಟ್‌ನಂತೆ ಕಾಣುತ್ತದೆ.