ಬೆಳಗಿನ ಉಪಾಹಾರಕ್ಕಾಗಿ 6 ಬಗೆಯ ಆರೋಗ್ಯಕರ ಚಟ್ನಿಗಳು!

                       

ಬೆಳಗಿನ ಉಪಹಾರ ರುಚಿಕರವಾಗಿದ್ದರೆ ಆಹಾ... ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇವೆ. ಆದರೆ, ಸ್ವಲ್ಪ ವ್ಯತ್ಯಾಸವಾದರೂ ಬೆಳಿಗ್ಗೆಯಿಂದಲೇ ಕಿರಿ-ಕಿರಿಯೂ ಆರಂಭವಾಗುತ್ತದೆ. ಕೆಲವರು ಎಷ್ಟೇ ತರಕಾರಿ ಹಾಕಿ  ಏನೇ ಮಾಡಿದರೂ ಸೈಡ್ ಅಲ್ಲಿ ನೆಂಚಿಕೊಳ್ಳೋಕೆ ಒಂದು ಚಟ್ನಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಾರೆ. ಆದರೆ ದಿನ ಯಾವ ಚಟ್ನಿ ಮಾಡೋದು ಎಂಬುದು ಮಹಿಳೆಯರ ಚಿಂತೆ. ನಿಮ್ಮ ಈ ಚಿಂತೆಗೆ ನಾವು ಪರಿಹಾರವನ್ನು ತಂದಿದ್ದೇವೆ. ಬೆಳಗಿನ ಉಪಹಾರದಲ್ಲಿ ಎಲ್ಲರಿಗೂ ಇಷ್ಟವಾಗುವ ಆರೋಗ್ಯಕರವಾದ ಚಟ್ನಿಗಳ ಬಗ್ಗೆ ಇಲ್ಲಿದೆ ಮಾಹಿತಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಕರಿಬೇವಿನ ಸೊಪ್ಪಿನಿಂದ ತಯಾರಿಸಿದ ಚಟ್ನಿಯಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಇದಲ್ಲದೆ, ಕ್ಯಾಲ್ಸಿಯಂ ಮತ್ತು ಅನೇಕ ಜೀವಸತ್ವಗಳ ಪ್ರಮಾಣವೂ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ಕೂದಲು ಕಪ್ಪು, ದಪ್ಪ ಮತ್ತು ಬಲವಾಗಿ ಉಳಿಯುತ್ತದೆ. ಈ ಚಟ್ನಿಯನ್ನು ಸೇವಿಸುವುದರಿಂದ ನಿಮ್ಮ ದೇಹವು ರಕ್ತಹೀನತೆ, ಅಧಿಕ ಬಿಪಿ ಮತ್ತು ಮಧುಮೇಹದಂತಹ ಸಮಸ್ಯೆಗಳಿಂದ ದೂರವಿರುತ್ತದೆ.

2 /6

ಬೇಸಿಗೆ ಕಾಲದಲ್ಲಿ ಪುದೀನಾ ಚಟ್ನಿ ತುಂಬಾ ಇಷ್ಟವಾಗುತ್ತದೆ, ಏಕೆಂದರೆ ಇದರ ಪರಿಣಾಮ ತಂಪಾಗಿರುತ್ತದೆ. ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿರುತ್ತವೆ, ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

3 /6

ಕೊತ್ತಂಬರಿ ಸೊಪ್ಪಿನ ಚಟ್ನಿ ಬಹುತೇಕ ಎಲ್ಲ ಮನೆಯಲ್ಲೂ ಇಷ್ಟವಾಗುತ್ತದೆ. ಇದರಲ್ಲಿ ವಿಟಮಿನ್-ಸಿ ಮತ್ತು ಪ್ರೊಟೀನ್ ಅಧಿಕವಾಗಿದೆ. ಬೆಳಗಿನ ಉಪಹಾರದಲ್ಲಿ ಈ ಚಟ್ನಿ ಸೇವನೆಯಿಂದ ಮಧುಮೇಹದಂತಹ ಸಮಸ್ಯೆ ದೂರವಾಗುತ್ತದೆ. ಕೊತ್ತಂಬರಿ ಸೊಪ್ಪಿನ ಜೊತೆಗೆ ಶುಂಠಿ ಮತ್ತು ಬೆಳ್ಳುಳ್ಳಿ ಬೆರೆಸಿ ತಯಾರಿಸಿದ ಚಟ್ನಿ ತಿನ್ನುವುದರಿಂದ ಕರುಳಿನ ಸಮಸ್ಯೆ, ಜ್ವರ, ಭೇದಿ ಮುಂತಾದ ರೋಗಗಳು ಬರುವುದಿಲ್ಲ.

4 /6

ಆಮ್ಲಾ ಅಥವಾ ನೆಲ್ಲಿಕಾಯಿ ಚಟ್ನಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ನಿಮ್ಮ ದೇಹವನ್ನು ಎಲ್ಲಾ ಸಮಸ್ಯೆಗಳಿಂದ ದೂರವಿಡುತ್ತವೆ. ಅಲ್ಲದೆ, ಈ ಚಟ್ನಿಯಲ್ಲಿ ಶುಂಠಿ ಮತ್ತು ನಿಂಬೆ ಬೆರೆಸಿ ಸೇವಿಸುವುದರಿಂದ ಹೃದ್ರೋಗ ದೂರವಾಗುತ್ತದೆ.

5 /6

ಬೆಳ್ಳುಳ್ಳಿ ಪ್ರಬಲವಾದ ನೈಸರ್ಗಿಕ ಪ್ರತಿಜೀವಕ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಮೂಲಿಕೆಯಾಗಿದೆ. ವಯಸ್ಸಾದಂತೆ ಉಂಟಾಗುವ ದೈಹಿಕ ಬದಲಾವಣೆಗಳನ್ನು ಕಡಿಮೆ ಮಾಡಲು ಮತ್ತು ಹಲವು ಬಗೆಯ ರೋಗಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ.

6 /6

ಟೊಮೆಟೊದಲ್ಲಿ ವಿಟಮಿನ್ ಸಿ, ಲೈಕೋಪೀನ್, ವಿಟಮಿನ್ ಕೆ, ಪೊಟ್ಯಾಸಿಯಮ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದರೊಂದಿಗೆ, ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಅಂಶಗಳು ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ಚಟ್ನಿ ತಿನ್ನುವುದು ತುಂಬಾ ಪ್ರಯೋಜನಕಾರಿ.