Upendra: ವಿಶ್ವದ ಬೆಸ್ಟ್ ಡೈರೆಕ್ಟರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ರಿಯಲ್ ಸ್ಟಾರ್!

Real Star Upendra: ವಿಶ್ವದ ಅತ್ಯುತ್ತಮ ನಿರ್ದೇಶಕರ ಬಗ್ಗೆ ವಿವರಗಳನ್ನು ಸಂಗ್ರಹಿಸಿರುವ IMDb, ವಿಶ್ವದ ಟಾಪ್ 50 ನಿರ್ದೇಶಕರ ಹೆಸರನ್ನು ಬಿಡುಗಡೆ ಮಾಡಿದೆ. IMDb ವಿಶ್ವದ 50 ಅತ್ಯುತ್ತಮ ಚಲನಚಿತ್ರ ನಿರ್ದೇಶಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಿರ್ದೇಶಕರ ಪಟ್ಟಿಯಲ್ಲಿ ಸೆನ್ಸೇಷನಲ್ ಡೈರೆಕ್ಟರ್ ಹಾಗೂ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಸ್ಥಾನ ಪಡೆದಿದ್ದಾರೆ.
 

1 /5

ವಿಶ್ವದ 50 ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಹಾಲಿವುಡ್ ಮತ್ತು ಬಾಲಿವುಡ್‌ನ ದೊಡ್ಡ ನಿರ್ದೇಶಕರು ಸೇರಿದ್ದಾರೆ. ಅದರಲ್ಲಿ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಹೆಸರೂ ಇದೆ. ಇದರಲ್ಲಿ ಉಪೇಂದ್ರ 8ನೇ ಸ್ಥಾನ ಪಡೆದಿದ್ದರಿಂದ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.  

2 /5

 ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಮೊದಲ ಸ್ಥಾನದಲ್ಲಿದ್ದರೆ, ಬಾಲಿವುಡ್ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಎರಡನೇ ಸ್ಥಾನದಲ್ಲಿದ್ದಾರೆ.   

3 /5

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಸರು ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು.. ಉಪೇಂದ್ರ ಇದುವರೆಗೆ 10 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದಾರೆ.   

4 /5

ಉಪೇಂದ್ರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲೂ ನಾಯಕ ಉಪೇಂದ್ರ ಅವರಿಗೆ ಒಳ್ಳೆಯ ಮನ್ನಣೆ ಸಿಕ್ಕಿತ್ತು.. ಸಿನಿಮಾಗಳ  ನಟನೆ ಜತೆಗೆ ನಿರ್ದೇಶನದಲ್ಲೂ ವಿಶೇಷ ಛಾಪು ಮೂಡಿಸಿದವರು ಉಪೇಂದ್ರ.  

5 /5

ಓಂ, ಶ್, ಎ, ಮುಂತಾದ ಚಿತ್ರಗಳನ್ನು ತುಂಬಾ ವಿಭಿನ್ನವಾಗಿ ನಿರ್ದೇಶಿಸಿದ ಉಪೇಂದ್ರ ಅವರ ಎಲ್ಲ ಚಿತ್ರಗಳು ಇಡೀ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿವೆ.