ಕುಡಿಯುವ ನೀರಿಗೆ ಕೊಹ್ಲಿ ಖರ್ಚು ಮಾಡುವ ಹಣ ಬರೋಬ್ಬರಿ 8 ಲಕ್ಷ !ಅದೆಂಥಾ ನೀರು ಕುಡಿತಾರೆ ಈ ಕಿಂಗ್?

 Virat Kohli Fitness : ವಿರಾಟ್ ಕೊಹ್ಲಿ ಫಿಟ್ ನೆಸ್ ಪ್ಲಾನ್ ಏಕ್ ದಮ್ ಪಕ್ಕಾ. ತನ್ನ ಡಯೆಟ್ ಪ್ಲಾನ್ ನಲ್ಲಿ ಸ್ವಲ್ಪವೂ ಏರುಪೇರಾಗುವುದಕ್ಕೆ ಅವಕಾಶವೇ ನೀಡುವುದಿಲ್ಲ. ಎಲ್ಲಿಯೇ ಹೋದರೂ ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು, ಯಾವ ಪಾನೀಯ ಕುಡಿಯಬೇಕು ಎಲ್ಲವೂ ಪೂರ್ವ ನಿರ್ಧರಿತ.

Virat Kohli Drinking Water :  ಯಾವುದೇ ಆಟಗಾರ ಇರಲಿ ಕಣದಲ್ಲಿ ಮಿಂಚ ಬೇಕಾದರೆ ಆರೋಗ್ಯವನ್ನು ಕಾಪಾಡಿ ಕೊಳ್ಳಲೇ ಬೇಕು. ಆರೋಗ್ಯ ಸರಿಯಾಗಿದ್ದರೆ ಎಲ್ಲವೂ ಸರಿ. ವಿರಾಟ್ ಕೊಹ್ಲಿ ಆಟದಲ್ಲಿ ಮಾತ್ರ ಕಿಂಗ್ ಅಲ್ಲ ನಿಜ ಜೀವನದಲ್ಲಿಯೂ ಕಿಂಗ್ ರೀತಿಯೇ ಬದುಕುತ್ತಾರೆ. ಕೊಹ್ಲಿ ಅವರದ್ದು ಬಹಳ ಸ್ಟೈಲಿಶ್ ಬದುಕು. ಆದರೂ ಕೆಲವು ನೀತಿ ನಿಯಮಗಳನ್ನು ಮೀರುವುದಿಲ್ಲ. ಆರೋಗ್ಯದ ವಿಚಾರದಲ್ಲಿ ಅವರದ್ದು ರಫ್ ಅಂಡ್ ಟಫ್ ನಿಲುವು. ಯಾವುದೇ ಕಾರಣಕ್ಕೂ ನಿಯಮ ಮೀರಿ ನಡೆಯುವುದೇ ಇಲ್ಲ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ವಿರಾಟ್ ಕೊಹ್ಲಿ ಫಿಟ್ ನೆಸ್ ಪ್ಲಾನ್ ಏಕ್ ದಮ್ ಪಕ್ಕಾ. ತನ್ನ ಡಯೆಟ್ ಪ್ಲಾನ್ ನಲ್ಲಿ ಸ್ವಲ್ಪವೂ ಏರುಪೇರಾಗುವುದಕ್ಕೆ ಅವಕಾಶವೇ ನೀಡುವುದಿಲ್ಲ. ಎಲ್ಲಿಯೇ ಹೋದರೂ ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು, ಯಾವ ಪಾನೀಯ ಕುಡಿಯಬೇಕು ಎಲ್ಲವೂ ಪೂರ್ವ ನಿರ್ಧರಿತ.  

2 /8

ವಿರಾಟ್ ಕೊಹ್ಲಿ ಕುಡಿಯುವ ನೀರು ಕೂಡಾ ಬಹಳ ವಿಶೇಷವಾದದ್ದು. ಅವರು ಸಾಮಾನ್ಯ ನೀರನ್ನು ಕುಡಿಯುವುದೇ ಇಲ್ಲ. ಹಾಗಾಗಿಯೇ ಅವರು ಇಷ್ಟೊಂದು ಫಿಟ್ ಎನ್ನಲಾಗುತ್ತದೆ. 

3 /8

ಅಂದ ಹಾಗೆ ವಿರಾಟ್ ಕುಡಿಯುವ ನೀರಿಗೆ ಪ್ರತಿ ಲೀಟರ್ ಗೆ 700 ರೂಪಾಯಿಯಂತೆ. ಅಂದರೆ ಕೊಹ್ಲಿ ವರ್ಷಕ್ಕೆ ಸುಮಾರು 8 ಲಕ್ಷವನ್ನು ನೀರಿನ ಮೇಲೆ ಹರಿಸುತ್ತಾರೆ. 

4 /8

ಇಷ್ಟಿದ್ದ ಮೇಲೆ ಕೊಹ್ಲಿ ಕುಡಿಯುವ ನೀರಿನಲ್ಲಿ ಅಂಥದ್ದೇನಿದೆ ಎನ್ನುವ ಕುತೂಹಲ ಕಾಡದೇ ಇರದು. ಹೌದು ಇದು ಸಾಮಾನ್ಯ ನೀರಲ್ಲ. ಇದೊಂದು ವಿಶೇಷ ಬ್ರಾಂಡ್ ನ ನೀರು. 

5 /8

ವಿರಾಟ್ ಕೊಹ್ಲಿ ಫ್ರಾನ್ಸ್‌ನಿಂದ ಬರುವ ಇವಿಯನ್ ನ್ಯಾಚುರಲ್ ಮಿನರಲ್ ವಾಟರ್ ಅನ್ನು ಕುಡಿಯುತ್ತಾರೆ. ವಿರಾಟ್ ಕೊಹ್ಲಿ ಎಲ್ಲಿಗೆ ಹೋಗಬೇಕಾದರೂ ಈ ನೀರನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗುತ್ತಾರಂತೆ.

6 /8

ಈ ನೀರನ್ನು ಎವಿಯನ್-ಲೆಸ್-ಬೈನ್ಸ್ ಪ್ರದೇಶದಿಂದ ತೆಗೆದುಕೊಳ್ಳಲಾಗಿದೆ. ಇದನ್ನು ರಾಸಾಯನಿಕವಾಗಿ ಸಂಸ್ಕರಿಸಲಾಗುವುದಿಲ್ಲ.ಇವಿಯನ್ ನೀರು ಜಗತ್ತಿನಾದ್ಯಂತ ಅತ್ಯಂತ ಖನಿಜಯುಕ್ತ ನೀರಿನಲ್ಲಿ ಒಂದಾಗಿದೆ.ಅದರ ನೈಸರ್ಗಿಕ ಗುಣಲಕ್ಷಣಗಳನ್ನು 100% ಉಳಿಸಿಕೊಂಡಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಕ್ಲೋರೈಡ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸೋಡಿಯಂ ಅಂಶವು ಸಾಮಾನ್ಯ ನೀರಿಗಿಂತ ಉತ್ತಮ ಪ್ರಮಾಣದಲ್ಲಿರುತ್ತದೆ.

7 /8

ಕೃತಕ ಮತ್ತು ಸಂಸ್ಕರಿಸಿದ ನೀರಿನಿಂದ ತುಂಬಿರುವ ಜಗತ್ತಿನಲ್ಲಿ, ಇವಿಯನ್‌ನಷ್ಟು ಶುದ್ಧವಾದ ನೀರು ಅಪರೂಪ. ಈ ಕಾರಣಕಾಗಿಯೇ ಇವಿಯನ್ ವಾಟರ್ ತುಂಬಾ ದುಬಾರಿ. ಕೊಹ್ಲಿ, ಫಿಟ್‌ನೆಸ್ ಫ್ರೀಕ್ ಆಗಿದ್ದು,  ಈ ನೈಸರ್ಗಿಕ ನೀರಿಗೆ ಆದ್ಯತೆ ನೀಡುತ್ತಾರೆ.

8 /8

ಹೆಚ್ಚುವರಿಯಾಗಿ, ಎವಿಯನ್ ಬಾಟಲಿಗಳನ್ನು ತಯಾರಿಸಲು ಪ್ಲಾಸ್ಟಿಕ್ ಬದಲಿಗೆ ಪಾಲಿಥಿಲೀನ್ ಟೆರೆಫ್ತಾಲೇಟ್ ಅನ್ನು ಬಳಸಲಾಗುತ್ತದೆ. ಇದು  ಜಗತ್ತಿನಾದ್ಯಂತ ಮರುಬಳಕೆ ಮಾಡಬಹುದಾದ ಬಾಟಲಿಯಾಗಿದೆ. Evian ನೀರಿನ ಬಾಟಲಿ ದುಬಾರಿಯಾಗಲು ಇದು ಕೂಡಾ ಒಂದು ಕಾರಣ.