Vastu Tips: ಬೆಳ್ಳುಳ್ಳಿಯ ಸಣ್ಣ ಟ್ರಿಕ್ ನಿಮ್ಮ ಅದೃಷ್ಟನ್ನೇ ಬದಲಿಸುತ್ತೆ, ಹಣದ ಮಳೆಯೇ ಸುರಿಯುವುದು!

Garlic for good luck: ವಾಸ್ತು ಶಾಸ್ತ್ರದಲ್ಲಿ ಬೆಳ್ಳುಳ್ಳಿಯ ಅನೇಕ ಪರಿಹಾರಗಳಿವೆ. ಇದನ್ನು ಮಾಡುವುದರಿಂದ ನೀವು ವೃತ್ತಿಜೀವನದ ಮತ್ತು ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಬಹುದು. 

Written by - Chetana Devarmani | Last Updated : Jun 16, 2023, 06:29 PM IST
  • ಬೆಳ್ಳುಳ್ಳಿಯ ಸಣ್ಣ ಟ್ರಿಕ್ ನಿಮ್ಮ ಅದೃಷ್ಟನ್ನೇ ಬದಲಿಸುತ್ತೆ
  • ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ ಬೆಳ್ಳುಳ್ಳಿಯ ಈ ಸಣ್ಣ ಟ್ರಿಕ್
  • ವಾಸ್ತು ಶಾಸ್ತ್ರದಲ್ಲಿ ಬೆಳ್ಳುಳ್ಳಿಯ ಅನೇಕ ಪರಿಹಾರಗಳಿವೆ
Vastu Tips: ಬೆಳ್ಳುಳ್ಳಿಯ ಸಣ್ಣ ಟ್ರಿಕ್ ನಿಮ್ಮ ಅದೃಷ್ಟನ್ನೇ ಬದಲಿಸುತ್ತೆ, ಹಣದ ಮಳೆಯೇ ಸುರಿಯುವುದು!   title=

Garlic remedies in Vastu Shastra: ಬೆಳ್ಳುಳ್ಳಿ ಪ್ರತಿ ಭಾರತೀಯರ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ. ಅದು ಇಲ್ಲದೆ ಆಹಾರದ ರುಚಿ ಅಪೂರ್ಣ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದರ ಜೊತೆಗೆ ಬೆಳ್ಳುಳ್ಳಿಯನ್ನು ಬಳಸಿ ಮಾಡುವ ಹಲವಾರು ಜ್ಯೋತಿಷ್ಯ ಪರಿಹಾರಗಳಿವೆ. ಇದನ್ನು ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನೀವು ತೊಡೆದುಹಾಕಬಹುದು. ವೃತ್ತಿಜೀವನದಿಂದ ಹಿಡಿದು ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಬಹುದು.

ಬೆಳ್ಳುಳ್ಳಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ 

ನೀವು ಕಷ್ಟಪಟ್ಟು ಕೆಲಸ ಮಾಡಿದರೂ ಬಯಸಿದ ಫಲಿತಾಂಶವನ್ನು ಪಡೆಯದಿದ್ದರೆ, ಶನಿವಾರದಂದು ಪರ್ಸ್ ಅಥವಾ ಹಣದ ಚೀಲದಲ್ಲಿ ಬೆಳ್ಳುಳ್ಳಿಯ ಎಸಳನ್ನು ಇರಿಸಿ. ಈ ಉಪಾಯವನ್ನು ಮಾಡುವುದರಿಂದ, ನೀವು ಆರ್ಥಿಕ ಚೇತರಿಕೆ ಕಾಣುವಿರಿ.

ಇದನ್ನೂ ಓದಿ: Shukra Gochar: ಈ ರಾಶಿಯವರ ಹಣೆ ಬರಹವನ್ನೇ ಬದಲಿಸುವ ಶುಕ್ರ.. ಅಪಾರ ಧನಾಗಮನ, ವೈಭವದ ಜೀವನ

ಕೌಟುಂಬಿಕ ಸಮಸ್ಯೆಗಳು ದೂರವಾಗುತ್ತವೆ 

ಸಂಸಾರದಲ್ಲಿ ಸದಾ ಜಗಳ ನಡೆಯುತ್ತಿದ್ದರೆ ಅದಕ್ಕೂ ಬೆಳ್ಳುಳ್ಳಿಯಲ್ಲಿ ಪರಿಹಾರವಿದೆ. ಪತಿ - ಪತ್ನಿಯರ ನಡುವೆ ಮನಸ್ತಾಪ ಉಂಟಾದರೆ ಏಳು ಬೆಳ್ಳುಳ್ಳಿ ಮೊಗ್ಗುಗಳನ್ನು ತೆಳ್ಳಗಿನ ಕಡ್ಡಿಯಲ್ಲಿ ಸಿಗಿಸಿ ಮನೆಯ ಛಾವಣಿಯ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕತೆ ದೂರವಾಗಿ, ಶಾಂತಿ ನೆಲೆಸುತ್ತದೆ.

ಉದ್ಯೋಗದಲ್ಲಿ ಬಡ್ತಿ ದೊರೆಯಲು 

ಸತತ ಪರಿಶ್ರಮದ ನಂತರವೂ ಯಶಸ್ಸನ್ನು ಸಾಧಿಸಲು ಆಗದಿದ್ದರೆ ಈ ಉಪಾಯವನ್ನು ಮಾಡಬೇಕು. ನಿಮ್ಮ ಕಚೇರಿ ಅಥವಾ ವ್ಯಾಪಾರದ ಸ್ಥಳದಲ್ಲಿ ಗೇಟ್‌ನಲ್ಲಿ ನೀವು ಐದುಬೆಳ್ಳುಳ್ಳಿ ಎಸಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನೇತು ಹಾಕಬೇಕು. ಹೀಗೆ ಮಾಡುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ: Long hair tips: ಉದ್ದ, ದಪ್ಪ ಕೂದಲಿಗಾಗಿ ಈ ಎಣ್ಣೆಯನ್ನು ಬಳಸಿ, ಹೇರ್‌ ಫಾಲ್‌ ಕೂಡ ನಿಲ್ಲುತ್ತೆ!

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News