ಮಾನವರು ಮಂಗಳವನ್ನು ಯಾವಾಗ ತಲುಪುತ್ತಾರೆ? 500 ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್ ಭವಿಷ್ಯ!

ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯ ಪ್ರಕಾರ, 2023ರಲ್ಲಿಯೇ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಕಾರ್ಯಾಚರಣೆಯಲ್ಲಿ ಯಶಸ್ಸನ್ನು ಸಾಧಿಸಬಹುದಂತೆ.

Written by - Puttaraj K Alur | Last Updated : Sep 20, 2022, 03:30 PM IST
  • ಫ್ರೆಂಚ್ ಪ್ರವಾದಿ ನಾಸ್ಟ್ರಾಡಾಮಸ್‍ರ ಭವಿಷ್ಯವಾಣಿಗಳು ಬಹಳ ಪ್ರಸಿದ್ಧವಾಗಿವೆ
  • ನಾಸ್ಟ್ರಾಡಾಮಸ್‍ ಅವರು ಹೇಳಿದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ
  • ಮಾನವರು ಮಂಗಳ ಗ್ರಹಕ್ಕೆ ಕಾಲಿಡುವ ಬಗ್ಗೆ ನಾಸ್ಟ್ರಾಡಾಮಸ್‍ ಭವಿಷ್ಯ ನುಡಿದಿದ್ದಾರೆ
ಮಾನವರು ಮಂಗಳವನ್ನು ಯಾವಾಗ ತಲುಪುತ್ತಾರೆ? 500 ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್ ಭವಿಷ್ಯ! title=
ನಾಸ್ಟ್ರಾಡಾಮಸ್‍ರ ಭವಿಷ್ಯವಾಣಿಗಳು

ನವದೆಹಲಿ: ಫ್ರೆಂಚ್ ಪ್ರವಾದಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳು ಬಹಳ ಪ್ರಸಿದ್ಧವಾಗಿವೆ. ಇಲ್ಲಿಯವರೆಗೆ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. 1566ರಲ್ಲಿ ಅವರ ನಿಧನಕ್ಕೂ ಮೊದಲು ನಾಸ್ಟ್ರಾಡಾಮಸ್ 6338 ಭವಿಷ್ಯವಾಣಿಗಳನ್ನು ಬರೆದಿದ್ದರಂತೆ. ಇದರಲ್ಲಿ ಅವರು ಮಂಗಳ ಗ್ರಹದ ಮೇಲೆ ಮಾನವರು ಹೆಜ್ಜೆ ಇಡುವ ದಿನ ಮತ್ತು  ಪ್ರಪಂಚದ ಅಂತ್ಯದ ಬಗ್ಗೆಯೂ ಉಲ್ಲೇಖಿಸಿದ್ದಾರಂತೆ.  

2023ರ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳು

ನಾಸ್ಟ್ರಾಡಾಮಸ್ 14 ಡಿಸೆಂಬರ್ 1503ರಂದು ಜರ್ಮನಿಯಲ್ಲಿ ಜನಿಸಿದರು.   1566ರ ಜುಲೈ 2ರಂದು ಅವರು ನಿಧನರಾದರು. ವಿಭಿನ್ನ ಭವಿಷ್ಯವಾಣಿಗಳನ್ನು ಹೇಳಿರುವ ಅವರು 2023ರ ವರ್ಷಕ್ಕೆ ಅನೇಕ ಅಪಾಯಕಾರಿ ಮುನ್ಸೂಚನೆಗಳನ್ನು ನೀಡಿದ್ದಾರೆ. ಹಿಟ್ಲರನ ಆಡಳಿತ, ವಿಶ್ವ ಸಮರ II, 9/11 ಭಯೋತ್ಪಾದನಾ ದಾಳಿ ಮತ್ತು ಫ್ರೆಂಚ್ ಕ್ರಾಂತಿಯ ಬಗ್ಗೆ ಅವರು ನುಡಿದ ಭವಿಷ್ಯವಾಣಿಗಳು ನಿಜವಾಗಿದೆ.

ಇದನ್ನೂ ಓದಿ: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನೀಶ್ವರ

ಮನುಷ್ಯರು ಮಂಗಳ ಗ್ರಹಕ್ಕೆ ಯಾವಾಗ ಹೋಗುತ್ತಾರೆ?

ಮಂಗಳ ಗ್ರಹಕ್ಕೆ ಮಾನವರು ಹೋಗುವ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯ ಪ್ರಕಾರ, 2023ರಲ್ಲಿಯೇ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಕಾರ್ಯಾಚರಣೆಯಲ್ಲಿ ಯಶಸ್ಸನ್ನು ಸಾಧಿಸಬಹುದಂತೆ. ಇದನ್ನು ನೋಡಿದ್ರೆ ಸ್ಪೇಸ್‌ಎಕ್ಸ್‌ನ ಸಿಇಒ ಎಲೋನ್ ಮಸ್ಕ್ ಅವರು ಕೆಂಪು ಗ್ರಹದಲ್ಲಿ ಮಾನವ ನೆಲೆಸುವ ಬಗ್ಗೆ ಮಾತನಾಡಿದ್ದಾರೆ. 2029ರ ವೇಳೆಗೆ ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸಲು ಮಸ್ಕ್ ಯೋಜನೆ ರೂಪಿಸಿದ್ದಾರೆ. ನಾಸ್ಟ್ರಾಡಾಮಸ್ ಭವಿಷ್ಯವಾಣಿಯಂತೆ 2023ರಲ್ಲಿ ಎಲೋನ್ ಮಸ್ಕ್ ಮಂಗಳ ಗ್ರಹಕ್ಕೆ ಸಂಬಂಧಿಸಿದ ಕಾರ್ಯಾಚರಣೆಯ ಬಗ್ಗೆ ಅಧಿಕೃತ ಘೋಷಣೆ ಮಾಡಬಹುದು ಎನ್ನಲಾಗಿದೆ.

3ನೇ ಮಹಾಯುದ್ಧದ ಬಗ್ಗೆ ಭವಿಷ್ಯವಾಣಿ

ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಯಲ್ಲಿ ಮಹಾಯುದ್ಧದ ಬಗ್ಗೆ ಉಲ್ಲೇಖಿಸಿದ್ದಾರೆ. 7 ತಿಂಗಳು ನಡೆಯಲಿರುವ ಈ ಮಹಾಯುದ್ಧದಲ್ಲಿ ಅನೇಕರು ಸಾವನ್ನಪ್ಪುತ್ತಾರೆಂದು ಉಲ್ಲೇಖಿಸಿದ್ದಾರೆ. ಅನೇಕರು ಇದನ್ನು 3ನೇ ಮಹಾಯುದ್ಧದ ಭವಿಷ್ಯವಾಣಿಯೆಂದು ಪರಿಗಣಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವು 2023ರ ವೇಳೆಗೆ 3ನೇ ಮಹಾಯುದ್ಧವಾಗಿ ಬದಲಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Astro Tips: ಈ ದಿನ ಕೂದಲಿಗೆ ಎಣ್ಣೆ ಹಚ್ಚಿದರೆ ಶನಿ ದೋಷ ನಿವಾರಣೆಯಾಗುತ್ತೆ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News