ಆತನ ಬ್ಯಾಟಿಂಗ್ ನೋಡಿದ್ರೆ ಭಯವಾಗುತ್ತೆ, ಆತನಿಗೆ ಬೌಲಿಂಗ್ ಮಾಡಲು ಬಯಸಲ್ಲ! ಪ್ಯಾಟ್ ಕಮಿನ್ಸ್’ಗೆ ಭಯ ಹುಟ್ಟಿಸಿದ ಆ ಭಾರತೀಯ ಯಾರು?

Pat Cummins about Abhishek Sharma: ಸನ್‌’ರೈಸರ್ಸ್ ಹೈದರಾಬಾದ್ ನಾಯಕ ಮತ್ತು ಅನುಭವಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಕೂಡ ಇವರ ಬಗ್ಗೆ ಮಾತನಾಡಿದ್ದು, “ಈ ಸ್ಫೋಟಕ ಬ್ಯಾಟ್ಸ್‌ಮನ್‌’ಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ. ಸಾಕಷ್ಟು ಭಯವಾಗುತ್ತೆ” ಎಂದಿದ್ದಾರೆ.

Written by - Bhavishya Shetty | Last Updated : May 20, 2024, 02:23 PM IST
    • ಸನ್‌’ರೈಸರ್ಸ್ ಹೈದರಾಬಾದ್ ನಾಯಕ ಮತ್ತು ಅನುಭವಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್
    • ಸ್ಫೋಟಕ ಬ್ಯಾಟ್ಸ್‌ಮನ್‌’ಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ ಎಂದ ಪ್ಯಾಟ್ ಕಮ್ಮಿನ್ಸ್
    • ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಹೈದರಾಬಾದ್ ನಾಯಕ
ಆತನ ಬ್ಯಾಟಿಂಗ್ ನೋಡಿದ್ರೆ ಭಯವಾಗುತ್ತೆ, ಆತನಿಗೆ ಬೌಲಿಂಗ್ ಮಾಡಲು ಬಯಸಲ್ಲ! ಪ್ಯಾಟ್ ಕಮಿನ್ಸ್’ಗೆ ಭಯ ಹುಟ್ಟಿಸಿದ ಆ ಭಾರತೀಯ ಯಾರು? title=
Pat Cummins

Pat Cummins about Abhishek Sharma: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಕ್ತ ಋತುವಿನಲ್ಲಿ 209.41 ಸ್ಟ್ರೈಕ್ ರೇಟ್‌’ನಲ್ಲಿ ಬ್ಯಾಟ್ ಮಾಡುವ ಅಭಿಷೇಕ್ ಶರ್ಮಾರನ್ನು ಅನೇಕ ದಿಗ್ಗಜರು ಈಗಾಗಲೇ ಶ್ಲಾಘಿಸಿದ್ದಾರೆ. ಇದೀಗ ಸನ್‌’ರೈಸರ್ಸ್ ಹೈದರಾಬಾದ್ ನಾಯಕ ಮತ್ತು ಅನುಭವಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಕೂಡ ಇವರ ಬಗ್ಗೆ ಮಾತನಾಡಿದ್ದು, “ಈ ಸ್ಫೋಟಕ ಬ್ಯಾಟ್ಸ್‌ಮನ್‌’ಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ. ಸಾಕಷ್ಟು ಭಯವಾಗುತ್ತೆ” ಎಂದಿದ್ದಾರೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ಮಾಡುವ ಈ ತಪ್ಪೇ ನಿಮ್ಮ ಬಡತನಕ್ಕೆ ಕಾರಣವಾಗಬಹುದು ! 

ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಕಮ್ಮಿನ್ಸ್, “ಅಭಿಷೇಕ್ ಅದ್ಭುತ. ನಾನು ಅವನಿಗೆ ಬೌಲ್ ಮಾಡಲು ಇಷ್ಟಪಡುವುದಿಲ್ಲ. ವೇಗದ ಬೌಲರ್‌’ಗಳು ಮತ್ತು ಸ್ಪಿನ್ನರ್‌’ಗಳ ವಿರುದ್ಧ ಭಯವಿಲ್ಲದೆ ಆಡುವ ಕಾರಣ, ಆತನಿಗೆ ಬೌಲಿಂಗ್ ಮಾಡಲು ಭಯವಾಗುತ್ತೆ. ಇನ್ನು ನಿತೀಶ್ ಕೂಡ ಒಬ್ಬ ಕ್ಲಾಸ್ ಪ್ಲೇಯರ್, ಅವರ ವಯಸ್ಸಿಗಿಂತ ಹೆಚ್ಚು ಪ್ರಬುದ್ಧರಾಗಿದ್ದಾರೆ. ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ನಮ್ಮ ಅಗ್ರ ಕ್ರಮಾಂಕಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ” ಎಂದಿದ್ದಾರೆ.

ಇದನ್ನೂ ಓದಿ: 'ಹೆಪಟೈಟಿಸ್ ಎ'ಗೆ 12 ಬಲಿ, ಈ ಮಾರಣಾಂತಿಕ ಕಾಯಿಲೆಯ ಲಕ್ಷಣಗಳಿವು!

ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ 28 ಎಸೆತಗಳಲ್ಲಿ 66 ರನ್ ಗಳಿಸಿದ ಅಭಿಷೇಕ್, ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್ ಮತ್ತು ಐದು ಬೌಂಡರಿ ಬಾರಿಸಿದ್ದಾರೆ. ಈ ಕಾರಣದಿಂದಾಗಿ ತಂಡವು ಐದು ಎಸೆತಗಳು ಬಾಕಿ ಇರುವಂತೆಯೇ 215 ರನ್‌’ಗಳ ಗುರಿಯನ್ನು ಸಾಧಿಸಿತ್ತು. ದೇಶೀಯ ಕ್ರಿಕೆಟ್‌’ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ 23 ವರ್ಷದ ಅಭಿಷೇಕ್ ಈ ಐಪಿಎಲ್ ಋತುವಿನಲ್ಲಿ 210ರ ಸ್ಟ್ರೈಕ್ ರೇಟ್‌ನಲ್ಲಿ 13 ಪಂದ್ಯಗಳಲ್ಲಿ 467 ರನ್ ಗಳಿಸಿದ್ದಾರೆ. ಇದರಲ್ಲಿ 41 ಸಿಕ್ಸರ್ ಮತ್ತು 35 ಬೌಂಡರಿಗಳು ಸೇರಿವೆ. ಇನ್ನು ಈ ಐಪಿಎಲ್ ಸೀಸನ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News