AUS ವಿರುದ್ಧದ ಮೊದಲ T20ಯಲ್ಲಿ ಇವರೇ ಟೀಮ್ ಇಂಡಿಯಾದ ಒಪನರ್ಸ್ ! ಇಲ್ಲಿದೆ ಪ್ಲೇಯಿಂಗ್ 11

Ruturaj Gaikwad-Yashasvi Jaiswal: ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಈ ಹಿಂದೆಯೂ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದಾರೆ ಅನ್ನುವುದು ಗಮನಾರ್ಹ ಸಂಗತಿ.  

Written by - Ranjitha R K | Last Updated : Nov 23, 2023, 02:45 PM IST
  • ಓಪನರ್ ಆಗಿ ಬರಲಿದ್ದಾರೆ ಇವರು
  • ಸಿಕ್ಸ್ ಬಾರಿಸುವುದರಲ್ಲಿ ಎತ್ತಿದ ಕೈ
  • ಜೈಸ್ವಾಲ್ ಕೂಡಾ ಅದ್ಭುತ ಆಟಗಾರ
AUS ವಿರುದ್ಧದ ಮೊದಲ T20ಯಲ್ಲಿ  ಇವರೇ ಟೀಮ್ ಇಂಡಿಯಾದ  ಒಪನರ್ಸ್ ! ಇಲ್ಲಿದೆ ಪ್ಲೇಯಿಂಗ್ 11  title=

Ruturaj Gaikwad-Yashasvi Jaiswal : ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ವಿಶಾಖಪಟ್ಟಣದಲ್ಲಿ  ಆಡಲಿದೆ. ಸೂರ್ಯಕುಮಾರ್ ಯಾದವ್ ಮೊದಲ ಬಾರಿಗೆ ಟೀಂ ಇಂಡಿಯಾ  ಸಾರಥ್ಯ ವಹಿಸಲಿದ್ದಾರೆ. ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವುದರಲ್ಲಿ ನಿಪುಣರಾಗಿರುವ ಇಬ್ಬರು ಆರಂಭಿಕರೊಂದಿಗೆ ಭಾರತ ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಈ ಹಿಂದೆಯೂ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದಾರೆ ಅನ್ನುವುದು ಗಮನಾರ್ಹ ಸಂಗತಿ.  

ಓಪನರ್ ಆಗಿ ಬರಲಿದ್ದಾರೆ ಇವರು : 
ಮೊದಲ ಟಿ20 ಪಂದ್ಯ ನವೆಂಬರ್ 23 ರಂದು ಅಂದರೆ ಇಂದು ವಿಶಾಖಪಟ್ಟಣಂ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಜೆ 7 ರಿಂದ ನಡೆಯಲಿದೆ. ಈ ಪಂದ್ಯದಲ್ಲಿ ರಿತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಓಪನರ್ ಆಗಿ ಮೈದಾನಕ್ಕೆ ಕಳುಹಿಸುವ ಎಲ್ಲಾ ಸಾಧ್ಯತೆ ಇದೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಈ ಹಿಂದೆ ಲೀಗ್ ಪಂದ್ಯಗಳಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದಾರೆ. ಇನ್ನು, ಯಶಸ್ವಿ ಜೈಸ್ವಾಲ್ ವಿಶ್ವಕಪ್‌ಗೆ ಮೊದಲು ನಡೆದ ಏಷ್ಯನ್ ಗೇಮ್ಸ್ 2023 ರಲ್ಲಿ ತಂಡದ ಆರಂಭಿಕ ಆಟಗಾರರಾಗಿದ್ದರು.

ಇದನ್ನೂ ಓದಿ :T20 Series Postponed: ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್, ಈ ಟಿ20 ಸರಣಿ ಮುಂದೂಡಿಕೆ

ಸಿಕ್ಸ್ ಬಾರಿಸುವುದರಲ್ಲಿ ಎತ್ತಿದ ಕೈ : 
ರಿತುರಾಜ್ ಗಾಯಕ್ವಾಡ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವುದರಲ್ಲಿ  ಎತ್ತಿದ ಕೈ.  ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವಾಗ ಅವರು  ಹಲವು ಬಾರಿ ತಮ್ಮ ಚಾಕ ಚಕ್ಯತೆ ತೋರಿದ್ದಾರೆ. ಇಂದು ನಡೆಯಲಿರುವ ಪಂದ್ಯದಲ್ಲಿ ಅವರಿಗೆ ಓಪನಿಂಗ್ ಅವಕಾಶ ನೀಡಬಹುದು. ರಿತುರಾಜ್ ಅವರ ಅಂಕಿಅಂಶಗಳ ಕುರಿತು ಮಾತನಾಡುವುದಾದರೆ, ಇದುವರೆಗೆ ಅವರು ಭಾರತಕ್ಕಾಗಿ 14 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 27.70 ಸರಾಸರಿಯಲ್ಲಿ 277 ರನ್ ಬಾರಿಸಿ 127.64 ಸ್ಟ್ರೈಕ್ ರೇಟ್‌ಗಳನ್ನು ಗಳಿಸಲು ಸಮರ್ಥರಾಗಿದ್ದಾರೆ. ಅಲ್ಲದೆ ಟಿ20ಯಲ್ಲಿ 2 ಅರ್ಧಶತಕ ಬಾರಿಸಿದ್ದಾರೆ. ರಿತುರಾಜ್ ಐಪಿಎಲ್‌ನಲ್ಲಿ 52 ಪಂದ್ಯಗಳ 51 ಇನ್ನಿಂಗ್ಸ್‌ಗಳಲ್ಲಿ 1797 ರನ್ ಗಳಿಸಿದ್ದಾರೆ.

ಜೈಸ್ವಾಲ್ ಕೂಡಾ ಅದ್ಭುತ ಆಟಗಾರ : 
ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಐಪಿಎಲ್ 2023 ರಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇದಾದ ಬಳಿಕ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ತಮ್ಮ  ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲೂ ಅವರು ಸಾಕಷ್ಟು ರನ್ ಗಳಿಸಿದ್ದಾರೆ. ಐಪಿಎಲ್ 2023 ರಲ್ಲಿ  ರಾಜಸ್ಥಾನ್ ರಾಯಲ್ಸ್‌ಗಾಗಿ ಅನೇಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳನ್ನು ಆಡಿದರು. 21 ವರ್ಷದ ಯಶಸ್ವಿ ಇದುವರೆಗೆ 31 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ತಮ್ಮ ಬ್ಯಾಟ್‌ನಿಂದ 1172 ರನ್ ಗಳಿಸಿದ್ದಾರೆ. 

ಇದನ್ನೂ ಓದಿ :ಈ ಡೆಡ್ಲಿ ಬ್ಯಾಟರ್ ಆಸೀಸ್ ವಿರುದ್ಧ ಆಡೋದು ಖಚಿತ! ಸೂರ್ಯಕುಮಾರ್ ಸುದ್ದಿಗೋಷ್ಠಿ ಬಳಿಕ ಹೊರಬಿತ್ತು ಭಾರತದ ಪ್ಲೇಯಿಂಗ್ 11

ಟೀಮ್ ಇಂಡಿಯಾ ಸಂಭವನೀಯ ಪ್ಲೇಯಿಂಗ್-11  : 
ರಿತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಮುಖೇಶ್ ಕುಮಾರ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News