FIFA World Cup 2022: ಪೆನಾಲ್ಟಿ ಕಿಕ್ ನಲ್ಲಿ ಕ್ರೊಯೇಷಿಯಾ ಪರಾಕ್ರಮ, ಬ್ರೆಜಿಲ್ ತಂಡದ ಕನಸು ನುಚ್ಚು ನೂರು..!

ಎರಡು ದಿನಗಳ ವಿರಾಮದ ನಂತರ ನಡೆದ ಫಿಫಾ ವಿಶ್ವಕಪ್ ನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವು ದೈತ್ಯ ಬ್ರೆಜಿಲ್ ತಂಡಕ್ಕೆ ಆಘಾತ ನೀಡಿದೆ.

Written by - Zee Kannada News Desk | Last Updated : Dec 10, 2022, 12:28 AM IST
  • ಇನ್ನೊಂದೆಡೆಗೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಬ್ರೆಜಿಲ್ ಕನಸು ನುಚ್ಚುನೂರಾಗಿದೆ
  • ಮಿಸ್ಲಾವ್ ಓರ್ಸಿಕ್, ಲೊವ್ರೊ ಮಜರ್ ಮತ್ತು ಲುಕಾ ಮೊಡ್ರಿಕ್ ಅವರು ಗೋಲ್ ಗಳನ್ನು ಗಳಿಸಿದರು
  • ಬ್ರೆಜಿಲ್ ತಂಡದ ಈ ಸಂತಸವು ಬಹಳ ಹೊತ್ತೇನು ಇರಲಿಲ್ಲ
FIFA World Cup 2022: ಪೆನಾಲ್ಟಿ ಕಿಕ್ ನಲ್ಲಿ ಕ್ರೊಯೇಷಿಯಾ ಪರಾಕ್ರಮ, ಬ್ರೆಜಿಲ್ ತಂಡದ ಕನಸು ನುಚ್ಚು ನೂರು..! title=

ನವದೆಹಲಿ: ಎರಡು ದಿನಗಳ ವಿರಾಮದ ನಂತರ ನಡೆದ ಫಿಫಾ ವಿಶ್ವಕಪ್ ನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ತಂಡವು ದೈತ್ಯ ಬ್ರೆಜಿಲ್ ತಂಡಕ್ಕೆ ಆಘಾತ ನೀಡಿದೆ.

ಕತಾರದಲ್ಲಿ ನಡೆದ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸುಮಾರು 90 ನಿಮಿಷಗಳಲ್ಲಿ ಬ್ರೆಜಿಲ್ ತಂಡವು ಗೋಲ್ ಗಳಿಸುವ ಯತ್ನಕ್ಕೆ ತಡೆಯೊಡ್ದುವಲ್ಲಿ ಕ್ರೊಯೇಷಿಯಾ ತಂಡವು ಯಶಸ್ವಿಯಾಗಿತ್ತು,ಆದರೆ ಅಂತಿಮವಾಗಿ ಹೆಚ್ಚುವರಿ ಸಮಯದ ಮೊದಲ ಸೆಷನ್‌ನಲ್ಲಿ ನೆಯ್ಮಾರ್ ಗೋಲ್ ಗಳಿಸುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು.ಬ್ರೆಜಿಲ್ ತಂಡದ ಈ ಸಂತಸವು ಬಹಳ ಹೊತ್ತೇನು ಇರಲಿಲ್ಲ, ಹೆಚ್ಚುವರಿ ಸಮಯದ ಅಂತಿಮ ನಿಮಿಷಗಳಲ್ಲಿ, ಬ್ರೂನೋ ಪೆಟ್ಕೊವಿಕ್ ಗೋಲು ಗಳಿಸಿದ್ದರಿಂದಾಗಿ ಪಂದ್ಯವು ಟೈಗೆ ತಲುಪಿದ್ದರಿಂದಾಗಿ ಅಂತಿಮವಾಗಿ ಪೆನಾಲ್ಟಿಗೆ ಮೊರೆ ಹೋಗಬೇಕಾಯಿತು.

ಪೆನಾಲ್ಟಿ ಕಿಕ್‌ಗಳಲ್ಲಿ ಕ್ರೊವೇಷಿಯಾ ಪರವಾಗಿ ನಿಕೋಲಾ ವ್ಲಾಸಿಕ್, ಮಿಸ್ಲಾವ್ ಓರ್ಸಿಕ್, ಲೊವ್ರೊ ಮಜರ್ ಮತ್ತು ಲುಕಾ ಮೊಡ್ರಿಕ್ ಅವರು ಗೋಲ್ ಗಳನ್ನು ಗಳಿಸಿದರು.ಇನ್ನೊಂದೆಡೆಗೆ ಬ್ರೆಜಿಲ್ ಕೇವಲ ಎರಡು ಪೆನಾಲ್ಟಿ ಗೊಲಗಳನ್ನು ಗಳಿಸಿದ್ದರಿಂದಾಗಿ ಅಂತಿಮವಾಗಿ ಕ್ರೊಯೇಶಿಯಾ ತಂಡವು 4-2 ಅಂತರದಿಂದ ಪೆನಾಲ್ಟಿ ಗೋಲ್ ನಲ್ಲಿ ಮುನ್ನಡೆ ಸಾಧಿಸಿದ್ದರಿಂದಾಗಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.ಇನ್ನೊಂದೆಡೆಗೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಬ್ರೆಜಿಲ್ ಕನಸು ನುಚ್ಚು ನೂರಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

Trending News