Team India Challenges: ‘ಮಿಷನ್ ವರ್ಲ್ಡ್ ಕಪ್’ ತಯಾರಿಯಲ್ಲಿರುವ ರೋಹಿತ್-ದ್ರಾವಿಡ್ ಮುಂದಿದೆ ಈ ದೊಡ್ಡ ಸವಾಲುಗಳು

India vs Sri Lanka ODI Series: ಶಿಖರ್ ಧವನ್‌ಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ. ಇನ್ನೊಂದೆಡೆ ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಇವರಲ್ಲಿ ಒಬ್ಬರು ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ರೋಹಿತ್ ಶರ್ಮಾಗೆ ಆರಂಭಿಕ ಜೊತೆಗಾರ ಯಾರು ಎಂಬುದನ್ನು ತಂಡದ ಆಡಳಿತ ಮಂಡಳಿ ನಿರ್ಧರಿಸಬೇಕು.

Written by - Bhavishya Shetty | Last Updated : Jan 9, 2023, 10:00 AM IST
    • ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಟೀಂ ಇಂಡಿಯಾ 2023 ರ ಏಕದಿನ ವಿಶ್ವಕಪ್‌ಗೆ ತಯಾರಿ ಪ್ರಾರಂಭ
    • ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 10ರಂದು ನಡೆಯಲಿದೆ
    • ಟೀಂ ಇಂಡಿಯಾದ ಮುಂದೆ ಹಲವು ದೊಡ್ಡ ಸವಾಲುಗಳಿದ್ದು ಕೋಚ್ ಮತ್ತು ನಾಯಕ ಒಟ್ಟಾಗಿ ಪರಿಹರಿಸಿಕೊಳ್ಳಬೇಕಿದೆ
Team India Challenges: ‘ಮಿಷನ್ ವರ್ಲ್ಡ್ ಕಪ್’ ತಯಾರಿಯಲ್ಲಿರುವ ರೋಹಿತ್-ದ್ರಾವಿಡ್ ಮುಂದಿದೆ ಈ ದೊಡ್ಡ ಸವಾಲುಗಳು title=
India Sri Lanka ODI

India vs Sri Lanka ODI Series: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಏಕದಿನ ಸರಣಿಯ ಮೊದಲ ಪಂದ್ಯ ಗುವಾಹಟಿ ಮೈದಾನದಲ್ಲಿ ಜನವರಿ 10ರಂದು ನಡೆಯಲಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಟೀಂ ಇಂಡಿಯಾ 2023 ರ ಏಕದಿನ ವಿಶ್ವಕಪ್‌ಗೆ ತಯಾರಿಯನ್ನು ಪ್ರಾರಂಭಿಸಲಿದೆ. ಭಾರತ ಎರಡು ಬಾರಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿದೆ. ಇದೀಗ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲಲು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ತಂಡದ ಸಂಯೋಜನೆಯನ್ನು ಕಂಡುಕೊಳ್ಳಲು ಇಂದಿನಿಂದಲೇ ಪ್ರಯತ್ನಿಸುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಟೀಂ ಇಂಡಿಯಾದ ಮುಂದೆ ಹಲವು ದೊಡ್ಡ ಸವಾಲುಗಳಿದ್ದು, ಕೋಚ್ ಮತ್ತು ನಾಯಕ ಒಟ್ಟಾಗಿ ಪರಿಹರಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ವಿಶ್ವಕಪ್‌ನಲ್ಲಿ ಈ ತಪ್ಪುಗಳಿಂದ ಭಾರೀ ಸಮಸ್ಯೆ ಎದುರಿಸಬೇಕಾದೀತು.

ಇದನ್ನೂ ಓದಿ: IND vs SL : ಟೀಂ ಇಂಡಿಯಾಗೆ ಮರಳಿದ ಈ 3 ದಿಗ್ಗಜ ಆಟಗಾರರು!

ರೋಹಿತ್‌ಗೆ ಆರಂಭಿಕ ಜೋಡಿ ಯಾರು?

ಶಿಖರ್ ಧವನ್‌ಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ. ಇನ್ನೊಂದೆಡೆ ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಇವರಲ್ಲಿ ಒಬ್ಬರು ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ರೋಹಿತ್ ಶರ್ಮಾಗೆ ಆರಂಭಿಕ ಜೊತೆಗಾರ ಯಾರು ಎಂಬುದನ್ನು ತಂಡದ ಆಡಳಿತ ಮಂಡಳಿ ನಿರ್ಧರಿಸಬೇಕು. ರಾಹುಲ್ ಕಳೆದ ಕೆಲವು ಸಮಯದಿಂದ ಕಳಪೆ ಫಾರ್ಮ್‌ನಲ್ಲಿ ಆಟವಾಡುತ್ತಿದ್ದಾರೆ. ಆದರೆ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

ಏಷ್ಯಾಕಪ್ 2022 ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬೌಲರ್‌ಗಳು ಎದುರಾಳಿ ತಂಡಕ್ಕೆ ತಮ್ಮ ಕಳಪೆ ಬೌಲಿಂಗ್ ನಿಂದ ರನ್ ಕಲೆ ಹಾಕಲು ಸಹಾಯ ಮಾಡಿದ್ದಾರೆ. ಟಿ20 ಅಥವಾ ಏಕದಿನ ಯಾವುದೇ ಫಾರ್ಮೆಟ್ ಆಗಿರಲಿ ಡೆತ್ ಓವರ್‌ಗಳಲ್ಲಿ ಟೀಂ ಇಂಡಿಯಾದ ಬೌಲರ್‌ಗಳು ಸಾಕಷ್ಟು ರನ್ ನೀಡಿದ್ದಾರೆ. ಮತ್ತೊಂದೆಡೆ ಜಸ್ಪ್ರೀತ್ ಬುಮ್ರಾ ಏಕದಿನ ಸರಣಿಗೆ ಮರಳುತ್ತಿದ್ದಾರೆ. ಅವರಿಗೆ ಬೆಂಬಲ ನೀಡಲು ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಕೂಡ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಈ ದೊಡ್ಡ ಸಮಸ್ಯೆಯಿಂದ ಪಾರಾಗಬೇಕಿದೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದಲ್ಲಿ ಯುಜುವೇಂದ್ರ ಚಹಾಲ್ ಮತ್ತು ಕುಲ್ದೀಪ್ ಯಾದವ್ ಅವಕಾಶ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕೂಡ ಸಾಲಿನಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದ ಪಿಚ್‌ಗಳು ಯಾವಾಗಲೂ ಸ್ಪಿನ್ನರ್‌ಗಳಿಗೆ ಸಹಾಯಕವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸರಿಯಾದ ಸ್ಪಿನ್ ಜೋಡಿಯ ಆಯ್ಕೆಯು ಟೀಂ ಇಂಡಿಯಾವನ್ನು ಏಕದಿನ ವಿಶ್ವಕಪ್‌ನ ಟ್ರೋಫಿಗೆ ಕೊಂಡೊಯ್ಯಬಹುದು.

ಇದನ್ನೂ ಓದಿ: IND vs SL: ಕೆಎಲ್ ರಾಹುಲ್ ಅಥವಾ ಇಶಾನ್ ಕಿಶನ್? ODI ಸರಣಿಯಲ್ಲಿ ವಿಕೆಟ್ ಕೀಪಿಂಗ್ ಮಾಡೋದು ಈ ಆಟಗಾರ

ಭಾರತದಲ್ಲಿ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ಒಟ್ಟು 51 ಪಂದ್ಯಗಳನ್ನು ಆಡಿದೆ. ಈ ಪೈಕಿ ಶ್ರೀಲಂಕಾ ತಂಡ ಕೇವಲ 12 ಬಾರಿ ಗೆದ್ದಿದ್ದರೆ, 36 ಬಾರಿ ಸೋಲು ಅನುಭವಿಸಬೇಕಾಯಿತು. ಕಳೆದ 37 ವರ್ಷಗಳಿಂದ ಶ್ರೀಲಂಕಾ ತಂಡ ಭಾರತದಲ್ಲಿ ಏಕದಿನ ಸರಣಿ ಗೆದ್ದಿರಲಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News