IND vs AFG: ಪಂದ್ಯದ ವೇಳೆ ಅಂಪೈರ್‌ಗೆ ಕಿಚಾಯಿಸಿದ ರೋಹಿತ್ ಶರ್ಮಾ, ವಿಡಿಯೋ ವೈರಲ್!

IND vs AFG: ಈ ಪಂದ್ಯದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾರಿಗೆ ಕಿಚಾಯಿಸಿದ ಪ್ರಸಂಗ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Written by - Puttaraj K Alur | Last Updated : Jan 18, 2024, 02:33 PM IST
  • ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾರಿಗೆ ಕಿಚಾಯಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ
  • ಪಂದ್ಯದ 2ನೇ ಓವರ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಎಸೆತಕ್ಕೆ ಲೆಗ್-ಬೈ ನೀಡಿದ್ದ ಅಂಪೈರ್
  • ಈಗಾಗಲೇ ನಾನು 2 ಬಾರಿ ಸೊನ್ನೆ ಸುತ್ತಿದ್ದೇನೆ, ಸ್ವಲ್ಪ ನೋಡಿ ಕೊಡು ಎಂದ ರೋಹಿತ್ ಶರ್ಮಾ
IND vs AFG: ಪಂದ್ಯದ ವೇಳೆ ಅಂಪೈರ್‌ಗೆ ಕಿಚಾಯಿಸಿದ ರೋಹಿತ್ ಶರ್ಮಾ, ವಿಡಿಯೋ ವೈರಲ್! title=
ಆನ್-ಫೀಲ್ಡ್ ಅಂಪೈರ್ ಕಿಚಾಯಿಸಿದ ರೋಹಿತ್ ಶರ್ಮಾ!

ಬೆಂಗಳೂರು: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ-20 ಪಂದ್ಯವು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು. ಅಫ್ಘನ್ ಬೌಲರ್‍ಗಳ ಬೆಂಡೆತ್ತಿದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಈ ಪಂದ್ಯ ಟೈ ಆಗುವ ಮೂಲಕ 2 ಸೂಪರ್ ಓವರ್ ನಡೆಯಬೇಕಾಯಿತು. ಅಂತಿಮವಾಗಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಸುವ ಮೂಲಕ 3-0ರಿಂದ ಸರಣಿ ಕ್ಲೀನ್ ಸ್ವೀಪ್ ಸಾಧಿಸಿತು.  

ಈ ಪಂದ್ಯದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾರಿಗೆ ಕಿಚಾಯಿಸಿದ ಪ್ರಸಂಗ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಂದ್ಯದ 2ನೇ ಓವರ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಎಸೆದ ಬಾಲ್ ಪ್ಯಾಡ್‌ಗೆ ತಾಗುವ ಮೊದಲು ರೋಹಿತ್ ಅವರ ಬ್ಯಾಟ್‌ನ ಒಳ ಅಂಚನ್ನು ಸ್ಪರ್ಶಿಸಿತು. ಈ ವೇಳೆ ರೋಹಿತ್ ಸಿಂಗಲ್ ರನ್ ತೆಗೆದುಕೊಂಡಿದ್ದರು. ಆದರೆ ಅಂಪೈರ್ ಅದಕ್ಕೆ ಲೆಗ್-ಬೈ ನೀಡಿದರು.

ಇದನ್ನೂ ಓದಿ: T20 World Cup: ಅಫ್ಘನ್ ವಿರುದ್ಧ ಅಬ್ಬರಿಸಿದ ಈ ಆಟಗಾರನಿಗೆ ಟಿ20 ವಿಶ್ವಕಪ್’ನಲ್ಲಿ ಸ್ಥಾನ ಫಿಕ್ಸ್!

ಈ ವೇಳೆ ಆನ್-ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾರಿಗೆ ರೋಹಿತ್ ಶರ್ಮಾ ಕಿಚಾಯಿಸಿದರು. ‘ಹೇ ವೀರು, ನೀವು ಮೊದಲ ಬಾಲ್ ಅನ್ನು thigh pad ಆಗಿ ನೀಡಿದ್ದೀರಾ - ಅದು ಸ್ಪಷ್ಟವಾಗಿ ಬ್ಯಾಟ್‌ಗೆ ತಗುಲಿದೆ. ನಾನು ಈಗಾಗಲೇ ಎರಡು ಬಾರಿ 0 ರನ್ ಗಳಿಸಿ ಔಟಾದಿದ್ದೇನೆ’ ಎಂದು ರೋಹಿತ್ ಹೇಳಿದ್ದಾರೆ. ರೋಹಿತ್ ಅವರ ಈ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ. ಬಳಿಕ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದಕ್ಕೂ ಮುನ್ನ 3ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡ ಭಾರತ 212 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತು. ಭಾರತದ ಪರ ರೋಹಿತ್ ಶರ್ಮಾ(121) ಭರ್ಜರಿ ಶತಕ ಸಿಡಿಸಿ ಮಿಂಚಿದರು. ರಿಂಕು ಸಿಂಗ್ ಔಟಾಗದೆ 69 ರನ್ ಗಳಿಸಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

ಇದನ್ನೂ ಓದಿ: ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಜೊತೆ ಚೆಸ್ ಆಡಿದ ಸಿಎಂ ಸಿದ್ದರಾಮಯ್ಯ

ಗೆಲುವಿನ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಪಂದ್ಯವನ್ನು ಟೈ ಮಾಡಿದರು. ಅಫ್ಘನ್ ಪರ ಗುಲ್ಬದಿನ್ ನಾಯಬ್(55), ರಹಮಾನುಲ್ಲಾ ಗುರ್ಬಾಜ್(50), ನಾಯಕ ಇಬ್ರಾಹಿಂ ಜದ್ರಾನ್(50) ಮತ್ತು ಮೊಹಮ್ಮದ್ ನಬಿ 35 ರನ್ ಗಳಿಸಿ ಮಿಂಚಿದರು. ನಂತರ ನಡೆದ ಮೊದಲ ಸೂಪರ್ ಓವರ್ ಕೂಡ ಟೈ ಆಯಿತು. ಬಳಿಕ ನಡೆದ 2ನೇ ಸೂಪರ್ ಓವರ್‍ನಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News