IND vs AUS : ಮೂರನೇ ಟೆಸ್ಟ್‌ನಿಂದ ಹೊರಗುಳಿದ ಈ 4 ಆಟಗಾರರು!

IND vs AUS : ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯವು ಮಾರ್ಚ್ 1 ರಿಂದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ದೆಹಲಿ ಟೆಸ್ಟ್ ಗೆದ್ದ ನಂತರ ಟೀಂ ಇಂಡಿಯಾಗೆ ಸುಮಾರು ಒಂದು ವಾರದ ವಿರಾಮ ಸಿಕ್ಕಿದೆ.

Written by - Channabasava A Kashinakunti | Last Updated : Feb 26, 2023, 10:20 AM IST
  • ಮೂರನೇ ಟೆಸ್ಟ್‌ನಿಂದ ನಾಯಕ ಔಟ್
  • ಇಡೀ ಸರಣಿಯಿಂದ ಹೊರಬಿದ್ದ ಈ ಆಟಗಾರ
  • ಟೀಂ ಇಂಡಿಯಾದಿಂದ ಈ ಬೌಲರ್ ಔಟ್
IND vs AUS : ಮೂರನೇ ಟೆಸ್ಟ್‌ನಿಂದ ಹೊರಗುಳಿದ ಈ 4 ಆಟಗಾರರು! title=

IND vs AUS 3rd Test Match : ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯವು ಮಾರ್ಚ್ 1 ರಿಂದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ದೆಹಲಿ ಟೆಸ್ಟ್ ಗೆದ್ದ ನಂತರ ಟೀಂ ಇಂಡಿಯಾಗೆ ಸುಮಾರು ಒಂದು ವಾರದ ವಿರಾಮ ಸಿಕ್ಕಿದೆ. ಭಾರತ ತಂಡ ಈಗ ಮೂರನೇ ಟೆಸ್ಟ್‌ನಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವತ್ತ ಕಣ್ಣಿಟ್ಟಿದೆ. ಅದೇ ಹೊತ್ತಿಗೆ ಆಸ್ಟ್ರೇಲಿಯವು ಸರಣಿಯ ಮೊದಲ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆದರೆ ಈ ಪಂದ್ಯದಲ್ಲಿ 4 ಬಿಗ್ ಮ್ಯಾಚ್ ವಿನ್ನಿಂಗ್ ಆಟಗಾರರು ಟೀಂನಿಂದ ಹೊರಗುಳಿದಿದ್ದಾರೆ.

ಮೂರನೇ ಟೆಸ್ಟ್‌ನಿಂದ ನಾಯಕ ಔಟ್

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ಸರಣಿಯ ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಪ್ರಸಕ್ತ ಸರಣಿಯ ನಡುವೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ದೇಶಕ್ಕೆ ಮರಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಮ್ಮಿನ್ಸ್ ಅವರ ತಾಯಿಯ ಆರೋಗ್ಯ ಚೆನ್ನಾಗಿಲ್ಲ. ಇದೀಗ ನಾಯಕತ್ವದ ಜವಾಬ್ದಾರಿಯನ್ನು ಸ್ಟೀವ್ ಸ್ಮಿತ್‌ಗೆ ವಹಿಸಲಾಗಿದೆ. 2021 ರಲ್ಲಿ ಉಪನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಸ್ಮಿತ್ ಅಡಿಲೇಡ್‌ನಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ.

ಇದನ್ನೂ ಓದಿ : IND vs AUS: ಇಂದೋರ್ ಟೆಸ್ಟ್’ನಲ್ಲಿ ಸಿಗುತ್ತಾ ಚ್ಯಾನ್ಸ್! ರೋಹಿತ್-ದ್ರಾವಿಡ್ ಕೈಯಲ್ಲಿದೆ ಈ ಇಬ್ಬರು ಆಟಗಾರರ ಭವಿಷ್ಯ

ಇಡೀ ಸರಣಿಯಿಂದ ಹೊರಬಿದ್ದ ಈ ಆಟಗಾರ 

ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗಾಯಗೊಂಡಿರುವ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರ ಚೆಂಡು ಡೇವಿಡ್ ವಾರ್ನರ್ ಅವರ ಹೆಲ್ಮೆಟ್‌ಗೆ ಬಡಿದಿತ್ತು. ಡೇವಿಡ್ ವಾರ್ನರ್ ಗಾಯದ ಸಮಸ್ಯೆಯಿಂದ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ದೆಹಲಿ ಟೆಸ್ಟ್‌ನಲ್ಲಿ ಅವರ ಸ್ಥಾನಕ್ಕೆ ಮ್ಯಾಟ್ ರೆನ್‌ಶಾ ಅವರನ್ನು ತಂಡಕ್ಕೆ ಸೇರಿಸಲಾಯಿತು ಮತ್ತು ಮುಂಬರುವ ಪಂದ್ಯಗಳಲ್ಲಿಯೂ ಅವರು ಆಡುವ ಅವಕಾಶವನ್ನು ಪಡೆಯಬಹುದು.

ಟೀಂ ಇಂಡಿಯಾದಿಂದ ಈ ಬೌಲರ್ ಔಟ್ 

ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಕೂಡ ಸರಣಿಯಿಂದ ಹೊರಗುಳಿದಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಅಕಿಲ್ಸ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಕಳೆದ ತಿಂಗಳು ಬೌಲಿಂಗ್ ಮಾಡಿದ ನಂತರ ಅವರ ಎಡಗಾಲಿಗೆ ಈ ಗಾಯವಾಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ, ಅವರು ತಂಡದ 11 ಆಟಗಾರರ ಭಾಗವಾಗಲು ಸಾಧ್ಯವಾಗಲಿಲ್ಲ.

ಈ ಆಟಗಾರನನ್ನು ತಂಡದಿಂದ ಹೊರಗಿಡಲಾಗಿದೆ

ಸ್ಪಿನ್ ಆಲ್ ರೌಂಡರ್ ಆಶ್ಟನ್ ಅಗರ್ ಕೂಡ ಸರಣಿಯ ಮಧ್ಯದಲ್ಲಿ ಬಿಡುಗಡೆಗೊಂಡಿದ್ದಾರೆ. ಈ ಆಟಗಾರನಿಗೆ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶವೂ ಸಿಕ್ಕಿರಲಿಲ್ಲ. ಆಶ್ಟನ್ ಅಗರ್ ಅವರನ್ನು ದೇಶೀಯ ಕ್ರಿಕೆಟ್ ಆಡಲು ಆಸ್ಟ್ರೇಲಿಯಾ ತಂಡದಿಂದ ಬಿಡುಗಡೆ ಮಾಡಲಾಗಿದೆ. ಆಷ್ಟನ್ ಅಗರ್ ದೇಶೀಯ ಋತುವಿನ ಅಂತಿಮ ಹಂತದಲ್ಲಿ 'ವೆಸ್ಟರ್ನ್ ಆಸ್ಟ್ರೇಲಿಯಾ' ಪರ ಆಡಲಿದ್ದಾರೆ.

ಇದನ್ನೂ ಓದಿ : IND vs AUS: ಟೆಸ್ಟ್’ನಲ್ಲಿ ನಿರಂತರ ಸೋಲು: ಈ ಆಟಗಾರನ ವಿರುದ್ಧವೇ ತಿರುಗಿಬಿದ್ದ ಆಸೀಸ್ ಅನುಭವಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News