IPL Teams: RCB ಯಿಂದ RR ವರೆಗೆ, ಎಲ್ಲಾ 10 IPL ತಂಡಗಳ ಮಾಲೀಕರು ಯಾರು? ಕ್ಯಾಪ್ಟನ್‌ಗಳು ಪಡೆಯುವ ಸಂಭಾವನೆ ಎಷ್ಟು?

IPL 2024 Teams: ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಆಡುತ್ತಿವೆ, ಆದರೆ ಐಪಿಎಲ್‌ನಲ್ಲಿ ಆಡುವ ಎಲ್ಲಾ ತಂಡಗಳ ಮಾಲೀಕರ ವೇತನ ಮತ್ತು ಆಯಾ ತಂಡಗಳ ನಾಯಕರ ಸಂಬಳದ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲವಾದರೇ ಇದೀಗ ತಿಳಿಯೋಣ..

Written by - Savita M B | Last Updated : May 9, 2024, 04:45 PM IST
  • ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಹೆಸರು ಪಾರ್ಥ್ ಜಿಂದಾಲ್.
  • ಮುಂಬೈ ಇಂಡಿಯನ್ಸ್ ಮಾಲೀಕ ಮುಖೇಶ್ ಅಂಬಾನಿ.
  • ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲ ಮಾಲೀಕರಾಗಿದ್ದರು.
IPL Teams: RCB ಯಿಂದ RR ವರೆಗೆ, ಎಲ್ಲಾ 10 IPL ತಂಡಗಳ ಮಾಲೀಕರು ಯಾರು? ಕ್ಯಾಪ್ಟನ್‌ಗಳು ಪಡೆಯುವ ಸಂಭಾವನೆ ಎಷ್ಟು?  title=

IPL 2024: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಹೆಸರು ಪಾರ್ಥ್ ಜಿಂದಾಲ್. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಸಂಭಾವನೆ 16 ಕೋಟಿ ರೂ.ಆಗಿದೆ... ಅದೇ ರೀತಿ ಪ್ರೀತಿ ಜಿಂಟಾ ಹೊರತುಪಡಿಸಿ, ಪಂಜಾಬ್ ಕಿಂಗ್ಸ್‌ನ ಮಾಲೀಕರು ನೆಸ್ ವಾಡಿಯಾ, ಮೋಹಿತ್ ವರ್ಮನ್ ಮತ್ತು ಕರಣ್ ಪಾಲ್. ಈ ತಂಡದ ನಾಯಕ ಶಿಖರ್ ಧವನ್ ಸಂಭಾವನೆ 8.25 ಕೋಟಿ ರೂ. ಪಡೆಯುತ್ತಾರೆ.. ಮುಂಬೈ ಇಂಡಿಯನ್ಸ್ ಮಾಲೀಕ ಮುಖೇಶ್ ಅಂಬಾನಿ. ಈ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ 15 ಕೋಟಿ ರೂ. ನೀಡಲಾಗುತ್ತದೆ..

ಇದ್ನೂ ಓದಿ-Yuvaraj Singh: "ವಿರಾಟ್ ಕೊಹ್ಲಿ ಈ ಪೀಳಿಗೆಯ ಅತ್ಯುತ್ತಮ ಬ್ಯಾಟರ್": ಯುವರಾಜ್‌ ಹೀಗಂದಿದ್ಯೇಕೆ..??
 
ಶಾರುಖ್ ಖಾನ್ ಹೊರತಾಗಿ, ಜೂಹಿ ಚಾವ್ಲಾ ಮತ್ತು ಜೈ ಮೆಹ್ತಾ ಕೋಲ್ಕತ್ತಾ ನೈಟ್ ರೈಡರ್ಸ್‌ನ ಹಿಡಿತವನ್ನು ಹೊಂದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಸಂಭಾವನೆ 12.25 ಕೋಟಿ ರೂ.. ಅದೇ ರೀತಿ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕನ ಹೆಸರು ಮನೋಜ್ ಬಡಾಲೆ. ಈ ತಂಡದ ನಾಯಕ ಸಂಜು ಸ್ಯಾಮ್ಸನ್ 14 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.. ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲ ಮಾಲೀಕರಾಗಿದ್ದರು. ಆದರೆ ಈಗ ಈ ತಂಡದ ಜವಾಬ್ದಾರಿ ಯುನೈಟೆಡ್ ಸ್ಪಿರಿಟ್ ಮೇಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಸಂಭಾವನೆ 7 ಕೋಟಿ ರೂ. ಆಗಿದೆ.. 

ಇದ್ನೂ ಓದಿ-Yuvaraj Singh: "ವಿರಾಟ್ ಕೊಹ್ಲಿ ಈ ಪೀಳಿಗೆಯ ಅತ್ಯುತ್ತಮ ಬ್ಯಾಟರ್": ಯುವರಾಜ್‌ ಹೀಗಂದಿದ್ಯೇಕೆ..??
 

ಗುಜರಾತ್ ಟೈಟಾನ್ಸ್ ತಂಡವು CVC ಕ್ಯಾಪಿಟಲ್ ಪಾಲುದಾರ ಕಂಪನಿಯ ಒಡೆತನದಲ್ಲಿದೆ.  ಈ ತಂಡವು ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ಮಾಡಿತು. ಗುಜರಾತ್ ಟೈಟಾನ್ಸ್ ತನ್ನ ನಾಯಕನಿಗೆ 8 ಕೋಟಿ ರೂ. ನೀಡುತ್ತದೆ.. ಸಂಜೀವ್ ಗೋಯೆಂಕಾ ಅವರು ಲಕ್ನೋ ಸೂಪರ್ ಜೈಂಟ್ಸ್ ನ ಮಾಲೀಕರಾಗಿದ್ದು.. ತಂಡದ ನಾಯಕ ಕೆಎಲ್ ರಾಹುಲ್ ಅವರ ಸಂಭಾವನೆ 17 ಕೋಟಿ ರೂ.. ನಂತರ ಕಾವ್ಯಾ ಮಾರನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಸನ್ ಗ್ರೂಪ್ ಒಡೆತನದಲ್ಲಿದೆ. ಈ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ಸಂಭಾವನೆ 20.5 ಕೋಟಿ ರೂ. ಪಡೆಯುತ್ತಾರೆ.. ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರು ಎನ್ ಶ್ರೀನಿವಾಸನ್..ಈ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರ ಸಂಭಾವನೆ 6 ಕೋಟಿ ಆಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News