ಕಸ ಗುಡಿಸುವುದರಿಂದ ಕ್ರಿಕೆಟ್ ಮೈದಾನದವರೆಗೆ: KKRಗೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟ Rinku Singh ಯಾರು ಗೊತ್ತಾ?

Who Is Rinku Singh: ಭಾನುವಾರ ಸಂಜೆ ಅಹಮದಾಬಾದ್’ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಭ್ರಮ ಉತ್ತುಂಗದಲ್ಲಿತ್ತು. ಅಂತಿಮವಾಗಿ ರಿಂಕು ಸಿಂಗ್ ಅವರ ಬಲದಿಂದ ಕೋಲ್ಕತ್ತಾ ಗೆದ್ದಿತು. ಕೊನೆಯ ಎಸೆತದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಗೆಲುವು ತಂದುಕೊಟ್ಟ ರಿಂಕು ಸಿಂಗ್ ಅವರ ಕಥೆ ತುಂಬಾ ಸ್ಪರ್ಶದಾಯಕವಾಗಿದೆ,

Written by - Bhavishya Shetty | Last Updated : Apr 9, 2023, 09:32 PM IST
    • ಕೊನೆಯ ಎಸೆತದಲ್ಲಿ ಕೋಲ್ಕತ್ತಾ 7 ವಿಕೆಟ್‌ಗೆ 207 ರನ್ ಗಳಿಸಿ ಜಯಭೇರಿ ಬಾರಿಸಿತು
    • ಅಹಮದಾಬಾದ್’ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಭ್ರಮ ಉತ್ತುಂಗದಲ್ಲಿತ್ತು
    • ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಗೆಲುವು ತಂದುಕೊಟ್ಟ ರಿಂಕು ಸಿಂಗ್ ಅವರ ಕಥೆ ತುಂಬಾ ಸ್ಪರ್ಶದಾಯಕವಾಗಿದೆ
ಕಸ ಗುಡಿಸುವುದರಿಂದ ಕ್ರಿಕೆಟ್ ಮೈದಾನದವರೆಗೆ: KKRಗೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟ Rinku Singh ಯಾರು ಗೊತ್ತಾ? title=
Rinku Singh

Who Is Rinku Singh: ಅಹಮದಾಬಾದ್‌’ನ ಪ್ರತಿಷ್ಠಿತ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಅದ್ಭುತ ಸಂಭವಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಕೊನೆಯ ಎಸೆತದಲ್ಲಿ 3 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಗುಜರಾತ್ 20 ಓವರ್‌’ಗಳಲ್ಲಿ 4 ವಿಕೆಟ್‌’ಗೆ 204 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದಾದ ಬಳಿಕ ಕೊನೆಯ ಎಸೆತದಲ್ಲಿ ಕೋಲ್ಕತ್ತಾ 7 ವಿಕೆಟ್‌ಗೆ 207 ರನ್ ಗಳಿಸಿ ಜಯಭೇರಿ ಬಾರಿಸಿತು. ಗುಜರಾತ್’ನ ದವಡೆಯಿಂದ ಏಕಾಂಗಿಯಾಗಿ ಗೆಲುವನ್ನು ಕಸಿದುಕೊಂಡ ರಿಂಕು ಸಿಂಗ್ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

ಇದನ್ನೂ ಓದಿ: GT vs KKR: ಗುಜರಾತ್’ಗೆ ಸೋಲಿನ ರುಚಿ ತೋರಿಸಿದ ಕೆಕೆಆರ್’ಗೆ ರೋಚಕ ಗೆಲುವು: ತವರಿನಲ್ಲಿ ಸೋಲುಂಡ ಟೈಟಾನ್ಸ್

ಅಹಮದಾಬಾದ್‌’ನಲ್ಲಿ ಕಂಡ ಅದ್ಭುತ:

ಭಾನುವಾರ ಸಂಜೆ ಅಹಮದಾಬಾದ್’ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಭ್ರಮ ಉತ್ತುಂಗದಲ್ಲಿತ್ತು. ಅಂತಿಮವಾಗಿ ರಿಂಕು ಸಿಂಗ್ ಅವರ ಬಲದಿಂದ ಕೋಲ್ಕತ್ತಾ ಗೆದ್ದಿತು. ಕೊನೆಯ ಎಸೆತದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಗೆಲುವು ತಂದುಕೊಟ್ಟ ರಿಂಕು ಸಿಂಗ್ ಅವರ ಕಥೆ ತುಂಬಾ ಸ್ಪರ್ಶದಾಯಕವಾಗಿದೆ, ಅವರು ಎಲ್ಲಾ ಹೋರಾಟಗಳನ್ನು ಎದುರಿಸಿ, ಇತಿಹಾಸವನ್ನೇ ನಿರ್ಮಿಸಿದ್ದಾರೆ.

ಗೆಲುವಿನ ಗುರಿ ಬೆನ್ನಟ್ಟಿದ ಕೋಲ್ಕತ್ತಾ 19 ಓವರ್‌’ಗಳಲ್ಲಿ 7 ವಿಕೆಟ್‌ಗೆ 176 ರನ್ ಗಳಿಸಿತು. ಕೊನೆಯ ಓವರ್‌’ನಲ್ಲಿ 29 ರನ್‌ಗಳ ಅಗತ್ಯವಿತ್ತು. ರಿಂಕು ಸಿಂಗ್ 16 ಎಸೆತಗಳಲ್ಲಿ 18 ರನ್ ಗಳಿಸಿದ್ದರೆ, ಉಮೇಶ್ ಯಾದವ್ 5 ಎಸೆತಗಳಲ್ಲಿ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಹಂಗಾಮಿ ನಾಯಕ ರಶೀದ್ ಕೊನೆಯ ಓವರ್‌ಗೆ ಚೆಂಡನ್ನು ಯಶ್ ದಯಾಳ್ ಕೈಗೆ ನೀಡಿದರು. ಮೊದಲ ಎಸೆತದಲ್ಲಿ ಉಮೇಶ್ ಸಿಂಗಲ್ ರನ್ ಗಳಿಸಿ ರಿಂಕುಗೆ ಸ್ಟ್ರೈಕ್ ನೀಡಿದರು. ರಿಂಕು ಮತ್ತೆ ಸತತ 5 ಸಿಕ್ಸರ್ ಬಾರಿಸಿ ಕೋಲ್ಕತ್ತಾಗೆ ಜಯ ತಂದುಕೊಟ್ಟರು. 21 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರು. ಗೆಲುವು ಸಾಧಿಸಿದ ತಕ್ಷಣ ತಂಡದ ಆಟಗಾರರು, ಕೋಚ್‌ಗಳು, ಸಹಾಯಕ ಸಿಬ್ಬಂದಿ ಎಲ್ಲರೂ ರಿಂಕುವನ್ನು ಅಪ್ಪಿಕೊಳ್ಳಲು ಮೈದಾನಕ್ಕೆ ಓಡಿ ಬಂದರು.

ಕೊನೆಯ ಎಸೆತದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ದವಡೆಯಿಂದ ಗೆಲುವನ್ನು ಕಸಿದುಕೊಂಡ ರಿಂಕು ಸಿಂಗ್ ಅವರ ಕಥೆ ಸಾಕಷ್ಟು ಸ್ಪರ್ಶದಾಯಕವಾಗಿದೆ. 5 ಒಡಹುಟ್ಟಿದವರಲ್ಲಿ ಮೂರನೇಯವರು ರಿಂಕು. ಹಣದ ಕೊರತೆ ಎದುರಿಸುತ್ತಿದ್ದರೂ ಕ್ರಿಕೆಟಿಗನಾಗುವ ಕನಸನ್ನು ಕೈ ಬಿಡಲಿಲ್ಲ. ಇದೀಗ ಅವರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಜನಿಸಿದ ರಿಂಕು 5 ಒಡಹುಟ್ಟಿದವರ ಪೈಕಿ ಮೂರನೇಯವರಾಗಿದ್ದಾರೆ.

ರಿಂಕು ಜೀವನವೇ ಒಂದು ಹೋರಾಟ!

12 ಅಕ್ಟೋಬರ್ 1997 ರಂದು ಜನಿಸಿದ ರಿಂಕು ಸಿಂಗ್ ಕ್ರಿಕೆಟರ್ ಆಗುವ ಪ್ರಯಾಣ ಸುಲಭವಲ್ಲ. ರಿಂಕುವಿನ ತಂದೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದರು. ಕುಟುಂಬದ ಆರ್ಥಿಕ ಸ್ಥಿತಿಯೂ ಚೆನ್ನಾಗಿರಲಿಲ್ಲ. ಕ್ರಿಕೆಟರ್ ಆಗಬೇಕೆಂಬ ರಿಂಕುವಿನ ಕನಸು ಭಗ್ನವಾಗತೊಡಗಿತ್ತು. ಸಂಪಾದನೆಯ ಹೊಣೆಗಾರಿಕೆ ಅವರ ಮೇಲಿತ್ತು. ನಂತರ ರಿಂಕು  ಕೆಲಸ ಮಾಡಿ ಹಣ ಸಂಪಾದಿಸಲು ನಿರ್ಧರಿಸಿದರು. ಅಷ್ಟಾಗಿ ಓದಿಲ್ಲದ ಕಾರಣ ಕಸ ಗುಡಿಸುವ ಕೆಲಸ ಸಿಗುತ್ತಿತ್ತು. ಇದಾದ ಬಳಿಕ ಸಂಪೂರ್ಣವಾಗಿ ಕ್ರಿಕೆಟ್ ಕಡೆ ಗಮನ ಹರಿಸಲು ರಿಂಕು ಮನಸ್ಸು ಮಾಡಿದರು. ದೆಹಲಿಯಲ್ಲಿ ನಡೆದ ಟೂರ್ನಿಯೊಂದರಲ್ಲಿ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿ ಗೆದ್ದ ಅವರಿಗೆ ಬಹುಮಾನವಾಗಿ ಬೈಕ್ ಸಿಕ್ಕಿತ್ತು. ಅದನ್ನು ಅವರ ತಂದೆಗೆ ನೀಡಿದರು.

ಇದನ್ನೂ ಓದಿ: GT vs KKR: ಗುಜರಾತ್’ಗೆ ಸೋಲಿನ ರುಚಿ ತೋರಿಸಿದ ಕೆಕೆಆರ್’ಗೆ ರೋಚಕ ಗೆಲುವು: ತವರಿನಲ್ಲಿ ಸೋಲುಂಡ ಟೈಟಾನ್ಸ್

ರಿಂಕು ಸಿಂಗ್ ದೇಶೀಯ ಕ್ರಿಕೆಟ್‌’ನಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 40 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 7 ಶತಕ, 19 ಅರ್ಧ ಶತಕಗಳನ್ನು ಗಳಿಸುವ ಮೂಲಕ ಒಟ್ಟು 2875 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 6 ವಿಕೆಟ್‌’ಗಳನ್ನು ಕಬಳಿಸಿದ್ದಾರೆ. ಮತ್ತೊಂದೆಡೆ ತಮ್ಮ ಒಟ್ಟಾರೆ ಟಿ20 ವೃತ್ತಿಜೀವನದಲ್ಲಿ 78 ಪಂದ್ಯಗಳಲ್ಲಿ 1392 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News