ಐಪಿಎಲ್ 2024 ರಲ್ಲಿ ಅತಿ ಹೆಚ್ಚು ಕೋಟಿಗಳನ್ನು ಬಾಚಿಕೊಳ್ಳುವ ಆಟಗಾರರು ಇವರೇ ಅಂತೆ : ಆರ್ ಅಶ್ವಿನ್ ಭವಿಷ್ಯ

R Ashwin Prediction: ಈ ಬಾರಿಯ ಐಪಿಎಲ್ ಹರಾಜಿನ ಬಗ್ಗೆ ಟೀಮ್ ಇಂಡಿಯಾ ಆಟಗಾರ ಆರ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಅಶ್ವಿನ್  ಪ್ರಕಾರ ಈ ಬಾರಿ ಇಬ್ಬರು ಆಟಗಾರರ ಮೇಲೆ ಅತ್ಯಧಿಕ ಮೊತ್ತದ ಬಿಡ್ ಆಗಲಿದೆಯಂತೆ.   

Written by - Ranjitha R K | Last Updated : Dec 18, 2023, 01:44 PM IST
  • ಐಪಿಎಲ್ 2024ರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ.
  • ಈ ಹರಾಜಿನಲ್ಲಿ ಒಟ್ಟು 333 ಆಟಗಾರರು ಭಾಗವಹಿಸಿದ್ದಾರೆ.
  • ಈ ಬಾರಿ ಇಬ್ಬರು ಆಟಗಾರರ ಮೇಲೆ ಅತ್ಯಧಿಕ ಮೊತ್ತದ ಬಿಡ್ ಆಗಲಿದೆಯಂತೆ.
ಐಪಿಎಲ್ 2024 ರಲ್ಲಿ ಅತಿ ಹೆಚ್ಚು ಕೋಟಿಗಳನ್ನು ಬಾಚಿಕೊಳ್ಳುವ ಆಟಗಾರರು ಇವರೇ ಅಂತೆ  : ಆರ್ ಅಶ್ವಿನ್ ಭವಿಷ್ಯ  title=

R Ashwin Prediction : ಐಪಿಎಲ್ 2024ರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಒಟ್ಟು 333 ಆಟಗಾರರು ಭಾಗವಹಿಸಿದ್ದಾರೆ. ಈ 333 ಆಟಗಾರರಲ್ಲಿ 214 ಭಾರತೀಯ ಮತ್ತು 119 ವಿದೇಶಿ ಆಟಗಾರರು ಸೇರಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನ ಬಗ್ಗೆ ಟೀಮ್ ಇಂಡಿಯಾ ಆಟಗಾರ ಆರ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಅಶ್ವಿನ್  ಪ್ರಕಾರ ಈ ಬಾರಿ ಇಬ್ಬರು ಆಟಗಾರರ ಮೇಲೆ ಅತ್ಯಧಿಕ ಮೊತ್ತದ ಬಿಡ್ ಆಗಲಿದೆಯಂತೆ. 

ಆರ್ ಅಶ್ವಿನ್ ಭವಿಷ್ಯ : 
ಮುಂಬರುವ ಐಪಿಎಲ್ 2024 ರ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತಾರೆ ಎನ್ನುವ  ಭರವಸೆಯನ್ನು ಆರ್ ಅಶ್ವಿನ್ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ  ಫಾಸ್ಟ್ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್  ಮೇಲೆ 14 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಬಿಡ್ ಮಾಡಲಾಗುತ್ತದೆ ಎಂದು ಅಶ್ವಿನ್ ಅಂದಾಜಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ, ಅಶ್ವಿನ್ ಯಾವ ಆಟಗಾರರಿಗೆ ಈ ಹರಾಜಿನಲ್ಲಿ ಎಷ್ಟು ಹಣ ಪಡೆಯಬಹುದು ಎನ್ನುವುದನ್ನು ಹೇಳಿದ್ದಾರೆ. 

ಇದನ್ನೂ ಓದಿ : 31,608 ಎಸೆತದಲ್ಲಿ ಒಂದೇ ಒಂದು ನೋ ಬಾಲ್ ಎಸೆಯದೆ 500 ವಿಕೆಟ್ ಕಿತ್ತ ಬೌಲರ್: ವಿಶ್ವಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ದಾಖಲೆಯಿದು

ಶಾರುಖ್ ಖಾನ್ ಗೆ ಕೋಟಿ  :  
ಈ ಹರಾಜಿನಲ್ಲಿ  ಶಾರುಖ್ ಖಾನ್‌ 10 ರಿಂದ 14 ಕೋಟಿ ರೂಪಾಯಿಗಳಿಗೆ ಮಾರಾಟವಾಗಬಹುದು ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್‌ನ ಯುವ ಆಲ್‌ರೌಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅವರನ್ನು 4 ರಿಂದ 7 ಕೋಟಿ ರೂಪಾಯಿಗಳಿಗೆ ತಮ್ಮ ತಂಡಕ್ಕೆ ಸೇರಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

ಹರ್ಷಲ್ ಪಟೇಲ್ ಗೆ ಸಿಗಬಹುದು ಎಷ್ಟು ಕೋಟಿ :
ಹರ್ಷಲ್ ಪಟೇಲ್, 7-10 ಕೋಟಿಗೆ ಮಾರಾಟವಾಗಬಹುದು ಎನ್ನುವುದು ಆರ್ ಅಶ್ವಿನ್ ಭವಿಷ್ಯ. ಇನ್ನು ವೆಸ್ಟ್ ಇಂಡೀಸ್‌ನ ರೋವ್‌ಮನ್ ಪೊವೆಲ್ ಅವರನ್ನು 4 ರಿಂದ 7 ಕೋಟಿಗೆ ಮತ್ತು ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೋಟ್ಜಿಯನ್ನು 7 ರಿಂದ 10 ಕೋಟಿಗೆ ಖರೀದಿಸುವ ಭರವಸೆಯನ್ನು ಅಶ್ವಿನ್ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ 2 ರಿಂದ 4 ಕೋಟಿ ರೂಪಾಯಿ ಮೊತ್ತವನ್ನು ಪಡೆಯಲಿದ್ದಾರೆ ಎಂದಿದ್ದಾರೆ ಅಶ್ವಿನ್.  ಭಾರತದ ವೇಗದ ಬೌಲರ್ ಉಮೇಶ್ ಯಾದವ್ 4 ರಿಂದ 7 ಕೋಟಿ ಮೊತ್ತವನ್ನು ಪಡೆಯಲಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ… ಕ್ರೀಡಾಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಇವರೇ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News