IPL 2024ರಲ್ಲಿ ಸಂಜು ಸ್ಯಾಮ್ಸನ್ ಸಿಕ್ಸರ್-ಬೌಂಡರಿ ಸುರಿಮಳೆ: ಬಿರುಸಿನ ಅಜೇಯ ಅರ್ಧಶತಕದಾಟಕ್ಕೆ ಎದುರಾಳಿ ಕಂಗಾಲು

Sanju Samson Batting vs LSG: ಈ ಪಂದ್ಯದಲ್ಲಿ ಸ್ಯಾಮ್ಸನ್ 52 ಎಸೆತಗಳನ್ನು ಎದುರಿಸಿ 6 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.

Written by - Bhavishya Shetty | Last Updated : Mar 24, 2024, 08:00 PM IST
    • ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್
    • 6 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಟ
    • ರಾಜಸ್ಥಾನದ ಆರಂಭಿಕರಿಬ್ಬರೂ 49 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದ್ದರು
IPL 2024ರಲ್ಲಿ ಸಂಜು ಸ್ಯಾಮ್ಸನ್ ಸಿಕ್ಸರ್-ಬೌಂಡರಿ ಸುರಿಮಳೆ: ಬಿರುಸಿನ ಅಜೇಯ ಅರ್ಧಶತಕದಾಟಕ್ಕೆ ಎದುರಾಳಿ ಕಂಗಾಲು title=
sanju samson

Sanju Samson Batting vs LSG: IPL 2024ರ ನಾಲ್ಕನೇ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದಿದೆ. ಈ ಪಂದ್ಯದಲ್ಲಿ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಟಾಸ್ ಗೆದ್ದ ಸಂಜು ಬ್ಯಾಟಿಂಗ್‌’ನಲ್ಲಿ ಅಬ್ಬರಿಸಿದ್ದಲ್ಲದೆ, ಈ ಋತುವಿನ ಮೊದಲ ಪಂದ್ಯವನ್ನಾಡಿ ಅಜೇಯ ಅರ್ಧಶತಕ ಗಳಿಸಿದ್ದಾರೆ. ಈ ಮೂಲಕ ತಂಡವು ನಿಗದಿತ 20 ಓವರ್‌’ಗಳಲ್ಲಿ 193 ರನ್ ಗಳಿಸಲು ನೆರವಾದರು.

ಈ ಪಂದ್ಯದಲ್ಲಿ ಸ್ಯಾಮ್ಸನ್ 52 ಎಸೆತಗಳನ್ನು ಎದುರಿಸಿ 6 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 82 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.

ಇದನ್ನೂ ಓದಿ: RR Vs LSG : ಸ್ಯಾಮ್ಸನ್ ರೋಚಕ ಆಟ, ಲಖ್ನೌಗೆ 194 ರನ್ ಗಳ ಗುರಿ ನೀಡಿದ ರಾಜಸ್ಥಾನ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನದ ಆರಂಭಿಕರಿಬ್ಬರೂ 49 ರನ್ ಗಳಿಸಿ ಪೆವಿಲಿಯನ್’ಗೆ ಮರಳಿದ್ದರು. ಇದಾದ ಬಳಿಕ ಸಂಜು ಸ್ಯಾಮ್ಸನ್ ರಿಯಾನ್ ಪರಾಗ್ ಜತೆಗೂಡಿ ಮೂರನೇ ವಿಕೆಟ್‌ಗೆ 93 ರನ್‌ಗಳ ದೊಡ್ಡ ಜೊತೆಯಾಟ ನಡೆಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ತಂದರು. ರಿಯಾನ್ ಪರಾಗ್ 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 43 ರನ್ ಗಳಿಸಿ ಔಟಾದರು. ಇನಿಂಗ್ಸ್‌’ನ ಕೊನೆಯ ಎಸೆತದವರೆಗೂ ಆಡಿದ ಸಂಜು ಮೊದಲ ಅರ್ಧಶತಕ ಪೂರೈಸಿ 82 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇವರಲ್ಲದೆ ಧ್ರುವ್ ಜುರೆಲ್ ಅಜೇಯ 20 ರನ್ ಗಳಿಸಿದರು.

2020 ರಿಂದ ಐಪಿಎಲ್ ಋತುವಿನ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಗಳಿಸಿದ ರನ್ ಹೀಗಿದೆ:

  • 74(32 ಎಸೆತ) vs ಚೆನ್ನೈ ಸೂಪರ್ ಕಿಂಗ್ಸ್- 2020
  • 119(63 ಎಸೆತ) vs ಪಂಜಾಬ್ ಕಿಂಗ್ಸ್-2021
  • 55(27 ಎಸೆತ) vs ಸನ್ರೈಸರ್ಸ್ ಹೈದರಾಬಾದ್- 2022
  • 55(32 ಎಸೆತ) vs ಸನ್ರೈಸರ್ಸ್ ಹೈದರಾಬಾದ್- 2023
  • 82*(52 ಎಸೆತ) vs ಲಕ್ನೋ ಸೂಪರ್ ಜೈಂಟ್ಸ್- 2024

ಅತಿ ಹೆಚ್ಚು 50+ ಸ್ಕೋರ್‌ ಗಳಿಸಿದ ಬ್ಯಾಟ್ಸ್‌ಮನ್ಸ್:

ಈ ಪಂದ್ಯದಲ್ಲಿ 82 ರನ್ ಗಳಿಸುವ ಮೂಲಕ, ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದ ಪರ T20 ಸ್ವರೂಪದಲ್ಲಿ ಜಂಟಿಯಾಗಿ ಗರಿಷ್ಠ 50+ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಜೋಸ್ ಬಟ್ಲರ್ ಮತ್ತು ಅಜಿಂಕ್ಯ ರಹಾನೆ ದಾಖಲೆಯನ್ನು ಈ ಮೂಲಕ ಸರಿಗಟ್ಟಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್‌’ಗಳು 23-23 ಬಾರಿ ಈ ಸಾಧನೆ ಮಾಡಿದ್ದಾರೆ. ಸ್ಯಾಮ್ಸನ್ ಕೂಡ ಅದೇ ಸಂಖ್ಯೆಯಲ್ಲಿ 50+ ಸ್ಕೋರ್‌ ಮಾಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಚಂದ್ರಗ್ರಹಣ: ಕನ್ಯಾ ಸೇರಿ ಈ 6 ರಾಶಿಗಳಿಗೆ ಲಾಭವೋ ಲಾಭ! ಮುಟ್ಟಿದ ಪ್ರತೀ ಕೆಲಸದಲ್ಲಿ ಗೆಲುವಿನದ್ದೇ ಕಾರುಬಾರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News