ಶುಭ್ಮನ್-ಜೈಸ್ವಾಲ್ ಮೀರಿಸುವ ಕ್ರಿಕೆಟಿಗ Team Indiaಗೆ ಬಂದಾಯ್ತು! ರೋಹಿತ್ ಓಪನರ್ ಸ್ಥಾನಕ್ಕೆ ಕುತ್ತು ಖಂಡಿತ…

Team India, T20 Career: 2022 ರ ಟಿ20 ವಿಶ್ವಕಪ್‌ ನ ಸೆಮಿಫೈನಲ್ ಸುತ್ತಿನಿಂದ ಟೀಂ ಇಂಡಿಯಾ ಹೊರಗುಳಿದ ತಕ್ಷಣ, ರೋಹಿತ್ ಶರ್ಮಾ ಟಿ20 ತಂಡಕ್ಕೆ ಮರಳಲು ಯಾವುದೇ ಅವಕಾಶವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.

Written by - Bhavishya Shetty | Last Updated : Jul 4, 2023, 01:18 PM IST
    • ರೋಹಿತ್ ಶರ್ಮಾ ಟಿ20 ತಂಡಕ್ಕೆ ಮರಳಲು ಯಾವುದೇ ಅವಕಾಶವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.
    • ಟೀಂ ಇಂಡಿಯಾವನ್ನು ಭಾರತ ತಂಡದ ಆಡಳಿತ ಮಂಡಳಿ ಈಗಾಗಲೇ ಸಿದ್ಧಪಡಿಸುತ್ತಿದೆ
    • ರೋಹಿತ್ ಶರ್ಮಾ ಅವರ T20 ವೃತ್ತಿಜೀವನವನ್ನು ಬಹುತೇಕ ಅಂತ್ಯಗೊಳಿಸಲಿದ್ದಾರೆ
ಶುಭ್ಮನ್-ಜೈಸ್ವಾಲ್ ಮೀರಿಸುವ ಕ್ರಿಕೆಟಿಗ Team Indiaಗೆ ಬಂದಾಯ್ತು! ರೋಹಿತ್ ಓಪನರ್ ಸ್ಥಾನಕ್ಕೆ ಕುತ್ತು ಖಂಡಿತ… title=
Sanju Samson

Team India, T20 Career: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ಕೆಲವು ತಿಂಗಳುಗಳಿಂದ ಭಾರತ ಪರ ಟಿ20 ಮಾದರಿಯಲ್ಲಿ ಆಡುತ್ತಿಲ್ಲ. ಭಾರತಕ್ಕೆ ಇದೀಗ ಒಬ್ಬ ಅಪಾಯಕಾರಿ ಆಟಗಾರ ಸಿಕ್ಕಿದ್ದು, ಅವರು ರೋಹಿತ್ ಶರ್ಮಾ ಅವರ T20 ವೃತ್ತಿಜೀವನವನ್ನು ಬಹುತೇಕ ಅಂತ್ಯಗೊಳಿಸಲಿದ್ದಾರೆ.

36ರ ಹರೆಯದ ರೋಹಿತ್ ಶರ್ಮಾಗೆ ಈಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಬಹಳ ಕಡಿಮೆ ಸಮಯ ಉಳಿದಿದೆ. ಭಾರತ ಟಿ20 ತಂಡದಲ್ಲಿ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ರೋಹಿತ್ ಶರ್ಮಾ ಸ್ಥಾನ ಈಗ ಅಪಾಯದಲ್ಲಿದೆ..

ಇದನ್ನೂ ಓದಿ: ಅಯ್ಯರ್, ರಾಹುಲ್ ಅಲ್ಲ… ಈ ಆಟಗಾರನೇ ವಿಶ್ವಕಪ್’ನಲ್ಲಿ ಭಾರತದ ನಂ.4 ಸ್ಥಾನಕ್ಕೆ ಬ್ಯಾಟಿಂಗ್ ಮಾಡೋದು…

2022 ರ ಟಿ20 ವಿಶ್ವಕಪ್‌ ನ ಸೆಮಿಫೈನಲ್ ಸುತ್ತಿನಿಂದ ಟೀಂ ಇಂಡಿಯಾ ಹೊರಗುಳಿದ ತಕ್ಷಣ, ರೋಹಿತ್ ಶರ್ಮಾ ಟಿ20 ತಂಡಕ್ಕೆ ಮರಳಲು ಯಾವುದೇ ಅವಕಾಶವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. 2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಗಾಗಿ ಯುವ ಆಟಗಾರರಿಂದ ಕಂಗೊಳಿಸುತ್ತಿರುವ ಟೀಂ ಇಂಡಿಯಾವನ್ನು ಭಾರತ ತಂಡದ ಆಡಳಿತ ಮಂಡಳಿ ಈಗಾಗಲೇ ಸಿದ್ಧಪಡಿಸುತ್ತಿದೆ.

ಇನ್ನು ಸಂಜು ಸ್ಯಾಮ್ಸನ್ ಟ್ವೆಂಟಿ-20 ತಂಡದಲ್ಲಿ ಟೀಮ್ ಇಂಡಿಯಾದ ಖಾಯಂ ಓಪನರ್ ಆಗಬಹುದು. ರೋಹಿತ್ ಶರ್ಮಾ ಅವರನ್ನು ಟಿ20 ತಂಡದಿಂದ ಹೊರಹಾಕುವ ಸಾಮಾರ್ಥ್ಯ ಇರುವ ಏಕೈಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್. ಸಂಜು ಸ್ಯಾಮ್ಸನ್ ಸಿಕ್ಸರ್‌ ಗಳನ್ನು ಹೊಡೆಯುವ ರೀತಿ ಬೇರಾರು ಆಡಲು ಸಾಧ್ಯವಿಲ್ಲ.  

ಸಂಜು ಸ್ಯಾಮ್ಸನ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ ನಲ್ಲಿ ವೇಗದ ಬ್ಯಾಟ್ಸ್‌ಮನ್. 11 ODIಗಳಲ್ಲಿ 330 ರನ್ ಮತ್ತು 17 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 301 ರನ್ ಗಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಹೊರತಾಗಿ, ಸಂಜು ಸ್ಯಾಮ್ಸನ್ ಕಿಲ್ಲರ್ ವಿಕೆಟ್ ಕೀಪಿಂಗ್‌ ನಲ್ಲಿಯೂ ಪರಿಣತಿ ಹೊಂದಿದ್ದಾರೆ. ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್, ಫಿನಿಶರ್ ಮತ್ತು ಓಪನರ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಬಲ್ಲರು.

ಸಂಜು ಸ್ಯಾಮ್ಸನ್ ತನ್ನ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು 3 ಜನವರಿ 2023 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು. ಆ ಬಳಿಕ T20 ತಂಡದಿಂದ ಹೊರಗುಳಿದಿದ್ದಾರೆ, ಆದರೆ ಇದೀಗ ಸಂಜು ಸ್ಯಾಮ್ಸನ್ ವೆಸ್ಟ್ ಇಂಡೀಸ್ ವಿರುದ್ಧ T20 ಸರಣಿಯಲ್ಲಿ ವಿಧ್ವಂಸಕರಾಗಲು ಸಿದ್ಧರಾಗಿದ್ದಾರೆ. ಆಗಸ್ಟ್ 3 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಮತ್ತು ಬ್ಯಾಟ್‌ ನೊಂದಿಗೆ ಅದ್ಭುತ ಪ್ರದರ್ಶನ ನೀಡುವ ಪರಿಣಿತ ಆಟಗಾರ. ಇವರು ಯಾವುದೇ ಬೌಲಿಂಗ್ ಲೈನ್ ಅಪ್ ಅನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಇದನ್ನೂ ಓದಿ:  Alert! ವಿವಾಹಿತ ಪುರುಷರೇ ಎಚ್ಚರ! ಈ 5 ಆಹಾರ-ಪಾನೀಯಗಳು ನಿಮ್ಮ ಫಲವತ್ತತೆಗೆ ಮಾರಕ

ಸಂಜು ಸ್ಯಾಮ್ಸನ್ ಕಳೆದ ಸುಮಾರು 8 ವರ್ಷಗಳಿಂದ ಭಾರತಕ್ಕಾಗಿ ಕೇವಲ 28 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2015 ರಲ್ಲಿ ಭಾರತಕ್ಕಾಗಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News