Rahul Dravid : ಸಾಮಾನ್ಯರಂತೆ ಪತ್ನಿ ಜೊತೆ ಕಲ್ಲಿನ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ರಾಹುಲ್‌ ದ್ರಾವಿಡ್‌..!

Rahul Dravid son Samit : ಪ್ರಸ್ತುತ U-19 ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಸಮಿತ್‌ ದ್ರಾವಿಡ್‌ ಆಟವಾಡುತ್ತಿದ್ದು, ಮಗನ ಆಟವನ್ನು ನೋಡಲು ಪತ್ನಿಯ ಜೊತೆ ಟೀಂ ಇಂಡಿಯಾ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಮೈಸೂರಿಗೆ ಬಂದಿದ್ದಾರೆ.

Written by - Krishna N K | Last Updated : Dec 2, 2023, 11:33 AM IST
  • ಭಾತರ ತಂಡದ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಸಧ್ಯ ಮೈಸೂರಿನಲ್ಲಿದ್ದಾರೆ.
  • U-19 ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಆಗಮಿಸಿದ್ದಾರೆ.
  • ಈ ಪಂದ್ಯಾವಳಿಯಲ್ಲಿ ಸಮಿತ್‌ ದ್ರಾವಿಡ್‌ ಕರ್ನಾಟಕ ಪ್ರತಿನಿಧಿಸಿ ಆಟವಾಡುತ್ತಿದ್ದಾರೆ.
Rahul Dravid : ಸಾಮಾನ್ಯರಂತೆ ಪತ್ನಿ ಜೊತೆ ಕಲ್ಲಿನ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ರಾಹುಲ್‌ ದ್ರಾವಿಡ್‌..! title=

Rahul Dravid : ಭಾತರ ತಂಡದ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಸಧ್ಯ ಮೈಸೂರಿನಲ್ಲಿದ್ದಾರೆ. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯ ಆಯೋಜಿಸಿದ್ದ U-19 ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಲು ತಮ್ಮ ಪತ್ನಿ ಜೊತೆ ಬಂದಿದ್ದಾರೆ. ಈ ಪಂದ್ಯಾವಳಿಯಲ್ಲಿ ದ್ರಾವಿಡ್‌ ಪುತ್ರ ಸಮೀತ್‌ ದ್ರಾವಿಡ್‌ ಆಟವಾಡುತ್ತಿದ್ದಾರೆ.

ಹೌದು.. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಮೈಸೂರು ವಲಯ U-19 ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ಈ ಮ್ಯಾಚ್‌ಗಳು ಮೈಸೂರಿನ ಮಾನಸ ಗಂಗೋತ್ರಿಯ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. 

ಇದನ್ನೂ ಓದಿ: ಟಿ 20 ವಿಶ್ವಕಪ್ ನಲ್ಲಿ ಈ ಆಟಗಾರನೇ ಟೀಂ ಇಂಡಿಯಾವನ್ನು ಮುನ್ನಡೆಸಬೇಕು : ಗಂಗೂಲಿ ಹೇಳಿದ್ದು ಯಾರ ಬಗ್ಗೆ?

ಇನ್ನು ಟೀಂ ರಾಹುಲ್‌ ದ್ರಾವಿಡ್‌ ಅವರ ಹಿರಿಯ ಮಗ ಸಮಿತ್‌ ದ್ರಾವಿಡ್‌ ಅಂಡರ್‌-19 ಕೂಚ್‌ ಬೆಹರ್‌ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಕರ್ನಾಟಕ ಮತ್ತು ಉತ್ತರಾಖಂಡ ನಡುವಿನ ಪಂದ್ಯವನ್ನು ವೀಕ್ಷಿಸಲು ದ್ರಾವಿಡ್‌ ಆಗಮಿಸಿದ್ದಾರೆ. 

ಮೊದಲು ಬ್ಯಾಟಿಂಗ್‌ ಮಾಡಿದ ಉತ್ತರಾಖಂಡ್‌ 9 ವಿಕೆಟ್‌ ನಷ್ಟಕ್ಕೆ 232 ರನ್‌ ಕಲೆಹಾಕಿತು. ಆಲ್ರೌಂಡಡರ್ ಸಮಿತ್‌ 5 ಓವರ್‌ನಲ್ಲಿ 11 ರನ್‌ ನೀಡಿ, 2 ಮೇಡನ್‌ ಮಾಡಿದರು. ಸಧ್ಯ ಮಗನ ಆಟವನ್ನು ನೋಡಲು ದ್ರಾವಿಡ್‌ ಜನ ಸಾಮಾನ್ಯರಂತೆ ಕ್ರೀಡಾಂಗಣದ ಕಲ್ಲು ಹಾಸಿನ ಮೇಲೆ ಕುಳಿತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News