“ಟೀಂ ಇಂಡಿಯಾದ ಈ ಆಟಗಾರನೇ ಡೇಂಜರಸ್ ಬೌಲರ್, ಭಯವಾಗುತ್ತಿದೆ”- ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹೇಳಿಕೆ ವೈರಲ್

Pat Cummins Statement About Mohammad Shami: ಇದುವರೆಗೆ ಅವರು 6 ಪಂದ್ಯಗಳಲ್ಲಿ ಆಡಿರುವ ಶಮಿ 23 ವಿಕೆಟ್ ಪಡೆದಿದ್ದಾರೆ. ಇದು ಬೌಲರ್ ಆಗಿ ಈ ವಿಶ್ವಕಪ್‌’ನಲ್ಲಿ ಗರಿಷ್ಠವಾಗಿದೆ. ಇದೀಗ ಇವರ ಆಟದ ವೈಖರಿ ಕಂಡು ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಭಯಪಡುವಂತಾಗಿದೆ.

Written by - Bhavishya Shetty | Last Updated : Nov 18, 2023, 08:01 PM IST
    • ವಿಶ್ವಕಪ್ 2023ರ ಅಂತಿಮ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ
    • ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್
    • ಟೀಂ ಇಂಡಿಯಾದ ಈ ಆಟಗಾರನೇ ಡೇಂಜರಸ್ ಬೌಲರ್ ಎಂದ ಆಸೀಸ್ ನಾಯಕ
“ಟೀಂ ಇಂಡಿಯಾದ ಈ ಆಟಗಾರನೇ ಡೇಂಜರಸ್ ಬೌಲರ್, ಭಯವಾಗುತ್ತಿದೆ”- ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹೇಳಿಕೆ ವೈರಲ್ title=
Australia Team Captain Pat Cummins

IND vs AUS, World Cup: ವಿಶ್ವಕಪ್ 2023ರ ಅಂತಿಮ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್, “ಪ್ರಶಸ್ತಿ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಡೇಂಜರಸ್ ಬೌಲರ್ ಆಗಿದ್ದು, ಆತನಿಂದಲೇ ನಮಗೆ ಬೆದರಿಕೆ ಇರುವುದು” ಎಂದು ಹೇಳಿಕೆ ನೀಡಿದ್ದಾರೆ.

ಮೊದಲ ನಾಲ್ಕು ಪಂದ್ಯಗಳಲ್ಲಿ ಪ್ಲೇಯಿಂಗ್-11 ರಲ್ಲಿ ಅವಕಾಶ ಸಿಗಲಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ತಂಡಕ್ಕೆ ಲಗ್ಗೆಯಿಟ್ಟ ಶಮಿ, ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು, ಇಡೀ ಜಗತ್ತಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅಂದಹಾಗೆ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ತಂಡದ ವಿರುದ್ಧ ಶಮಿ 7 ವಿಕೆಟ್ ಕಬಳಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ಇಲ್ಲಿ ಉಲ್ಲೇಖಿಸಲೇಬೇಕು.

ಇದನ್ನೂ ಓದಿ: ಶಮಿ, ಕೊಹ್ಲಿ ಉತ್ತಮವಾಗಿ ಆಡಿದ್ರೂ ಟೀಂ ಇಂಡಿಯಾದ ಗೇಮ್ ಚೇಂಜರ್ ಈ ಆಟಗಾರ- ಗೌತಮ್ ಗಂಭೀರ್ ಹೇಳಿಕೆ

ಇದುವರೆಗೆ ಅವರು 6 ಪಂದ್ಯಗಳಲ್ಲಿ ಆಡಿರುವ ಶಮಿ 23 ವಿಕೆಟ್ ಪಡೆದಿದ್ದಾರೆ. ಇದು ಬೌಲರ್ ಆಗಿ ಈ ವಿಶ್ವಕಪ್‌’ನಲ್ಲಿ ಗರಿಷ್ಠವಾಗಿದೆ. ಇದೀಗ ಇವರ ಆಟದ ವೈಖರಿ ಕಂಡು ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಭಯಪಡುವಂತಾಗಿದೆ.

“ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಮೊಹಮ್ಮದ್ ಶಮಿ ಅವರಿಂದ ಬೆದರಿಕೆ ಇದೆ. ಅವರ ಬೌಲಿಂಗ್ ಕೂಡ ತುಂಬಾ ಚೆನ್ನಾಗಿದೆ. ಈ ಪಂದ್ಯಾವಳಿಯಲ್ಲಿ ಉತ್ತಮ ಆರಂಭವನ್ನು ಹೊಂದಿಲ್ಲ. ಆದರೆ ನಾವು ಉತ್ತಮ ಪುನರಾಗಮನವನ್ನು ಮಾಡಿದ್ದೇವೆ” ಎಂದು ಪ್ಯಾಟ್ ಕಮ್ಮಿನ್ಸ್ ಹೇಳಿದರು.

“ನಾವು ಅಂತಿಮ ಪಂದ್ಯದತ್ತ ಗಮನ ಹರಿಸುತ್ತಿದ್ದೇವೆ. ನಾಯಕನಾಗಿ ಟ್ರೋಫಿ ಎತ್ತಿ ಹಿಡಿದಿರುವುದು ಹೆಮ್ಮೆಯ ಸಂಗತಿ. ಸುದೀರ್ಘ ವೃತ್ತಿಜೀವನದ ನಂತರವೂ ವಿಶ್ವಕಪ್ ಆಡಲು ಎರಡು ಅವಕಾಶಗಳು ಮಾತ್ರ ಸಿಗುತ್ತವೆ” ಎಂದು ಕಮ್ಮಿನ್ಸ್ ಹೇಳಿದ್ದಾರೆ.

ಅಹಮದಾಬಾದ್ ಪಿಚ್ ಬಗ್ಗೆ ಪ್ಯಾಟ್ ಕಮ್ಮಿನ್ಸ್ ಹೇಳಿದ್ದೇನು?

ವಿಶ್ವಕಪ್ 2023ರ ಮೊದಲ ಸೆಮಿಫೈನಲ್ ಅನ್ನು ಭಾರತ ಗೆದ್ದ ನಂತರ, ಐಸಿಸಿ ಪಿಚ್ ಸಲಹೆಗಾರ ಅಟ್ಕಿನ್ಸನ್ ಆತಿಥೇಯ ದೇಶವು ಪಿಚ್ ಅನ್ನು ಬದಲಾಯಿಸುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಹೊಸ ಪಿಚ್‌’ಗಳಲ್ಲಿ ಮಾತ್ರ ನಾಕೌಟ್ ಪಂದ್ಯಗಳನ್ನು ನಡೆಸಬೇಕೆಂಬ ನಿಯಮವಿಲ್ಲ ಎಂದು ಐಸಿಸಿ ನಂತರ ಸ್ಪಷ್ಟಪಡಿಸಿತ್ತು.

ಈ ಮಧ್ಯೆ ಅಂತಿಮ ಪಂದ್ಯದಲ್ಲಿ ಅಹಮದಾಬಾದ್‌’ನ ಪಿಚ್ ಬಗ್ಗೆ ಪ್ಯಾಟ್ ಕಮಿನ್ಸ್ ಮಾತನಾಡಿದ್ದು, “ಎರಡೂ ತಂಡಗಳಿಗೆ ಒಂದೇ ಪಿಚ್ ಇರುತ್ತದೆ. ನಮ್ಮ ದೇಶದಲ್ಲಿ, ನಮ್ಮ ಸ್ವಂತ ವಿಕೆಟ್‌’ನಲ್ಲಿ ಆಡುವುದರಿಂದ ಪ್ರಯೋಜನಗಳಿವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಾವು ಇಲ್ಲಿ ಸಾಕಷ್ಟು ಕ್ರಿಕೆಟ್ ಆಡುತ್ತೇವೆ. ಆದ್ದರಿಂದ ಅವು ಹೆಚ್ಚಿನ ವ್ಯತ್ಯಾಸವನ್ನು ಮಾಡುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: “ಫೈನಲ್ ಪಂದ್ಯದಲ್ಲಿ ಸಿರಾಜ್ ಬದಲಿಯಾಗಿ ಈ ಅನುಭವಿ ಸ್ಪಿನ್ನರ್ ಆಡಲಿದ್ದಾರೆ”- ಬಿಸಿಸಿಐ ಅಧಿಕಾರಿ ಮಾಹಿತಿ

ಭಾರತದ ಬೆಂಬಲಿಗರ ಬಗ್ಗೆ  ಕಮ್ಮಿನ್ಸ್ ಹೇಳಿದ್ದೇನು?

1 ಲಕ್ಷದ 30 ಸಾವಿರ ಪ್ರೇಕ್ಷಕರು ನಮ್ಮನ್ನು ಬೆಂಬಲಿಸುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ಅವರನ್ನು ಮೌನವಾಗಿರಿಸುವುದು ನಮ್ಮ ಗುರಿಯಾಗಿದೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News