Hackers ಕೈ ಸೇರಿದ 50 ಕೋಟಿ WhatsApp ಬಳಕೆದಾರ ಡೇಟಾ! ಆ ಕರೆ-ಸಂದೇಶ ಬಂದರೆ ಪ್ರತಿಕ್ರಿಯಿಸಬೇಡಿ

500 Million WhatsApp users data leak: ವರದಿಯೊಂದರ ಪ್ರಕಾರ, ಸುಮಾರು 500 ಮಿಲಿಯನ್ WhatsApp ಬಳಕೆದಾರರ ಫೋನ್ ಸಂಖ್ಯೆಯ ಡೇಟಾಬೇಸ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇರಿಸಲಾಗಿದೆ. ಇದು ಅತಿದೊಡ್ಡ ಡೇಟಾ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಈಜಿಪ್ಟ್‌ನಿಂದ 4.5 ಕೋಟಿ ಜನರ ಡೇಟಾ ಸೋರಿಕೆಯಾಗಿದೆ ಮತ್ತು ರಷ್ಯಾದಿಂದ 1 ಕೋಟಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಸೋರಿಕೆಯಾಗಿದೆ ಎಂದು ಅಂದಾಜಿಲಾಗಿದೆ.

Written by - Bhavishya Shetty | Last Updated : Nov 28, 2022, 02:57 PM IST
    • ಮೆಸೇಜಿಂಗ್ ಆಪ್ 'ವಾಟ್ಸಾಪ್'ನಿಂದ ಭಾರೀ ಡೇಟಾ ಸೋರಿಕೆ
    • ಫೋನ್ ನಂಬರ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ವರದಿ
    • ಮೊಬೈಲ್ ಸಂಖ್ಯೆಯನ್ನು ಹ್ಯಾಕರ್‌ಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಮಾಹಿತಿ
Hackers ಕೈ ಸೇರಿದ 50 ಕೋಟಿ WhatsApp ಬಳಕೆದಾರ ಡೇಟಾ! ಆ ಕರೆ-ಸಂದೇಶ ಬಂದರೆ ಪ್ರತಿಕ್ರಿಯಿಸಬೇಡಿ title=
whatsapp

500 Million WhatsApp users data leak: ಜನಪ್ರಿಯ ಮೆಸೇಜಿಂಗ್ ಆಪ್ 'ವಾಟ್ಸಾಪ್'ನಿಂದ ಭಾರೀ ಡೇಟಾ ಸೋರಿಕೆಯಾಗಿದೆ. ಸುಮಾರು 50 ಕೋಟಿ ವಾಟ್ಸಾಪ್ ಬಳಕೆದಾರರ ಫೋನ್ ನಂಬರ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ವರದಿಯಾಗಿದೆ. ಅಮೆರಿಕ, ಯುಕೆ, ಈಜಿಪ್ಟ್, ಸೌದಿ ಅರೇಬಿಯಾ ಮತ್ತು ಭಾರತ ಸೇರಿದಂತೆ 84 ದೇಶಗಳ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಹ್ಯಾಕರ್‌ಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹ್ಯಾಕಿಂಗ್ ಕಮ್ಯುನಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಫೋನ್ ಸಂಖ್ಯೆಗಳ ಮಾರಾಟದ ಕುರಿತು ಜಾಹೀರಾತನ್ನು ಪೋಸ್ಟ್ ಮಾಡಲಾಗಿದೆ ಎಂದು ತೋರುತ್ತದೆ.

ಇದನ್ನೂ ಓದಿ: Recharge Plan: ಕೇವಲ 25 ರೂ.ಗಳಲ್ಲಿ 2ಜಿಬಿ ಹೈಸ್ಪೀಡ್ ಇಂಟರ್ನೆಟ್

ವರದಿಯೊಂದರ ಪ್ರಕಾರ, ಸುಮಾರು 500 ಮಿಲಿಯನ್ WhatsApp ಬಳಕೆದಾರರ ಫೋನ್ ಸಂಖ್ಯೆಯ ಡೇಟಾಬೇಸ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇರಿಸಲಾಗಿದೆ. ಇದು ಅತಿದೊಡ್ಡ ಡೇಟಾ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಈಜಿಪ್ಟ್‌ನಿಂದ 4.5 ಕೋಟಿ ಜನರ ಡೇಟಾ ಸೋರಿಕೆಯಾಗಿದೆ ಮತ್ತು ರಷ್ಯಾದಿಂದ 1 ಕೋಟಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಸೋರಿಕೆಯಾಗಿದೆ ಎಂದು ಅಂದಾಜಿಲಾಗಿದೆ. ಪ್ರತಿ ದೇಶದ ಬಳಕೆದಾರರ ಸಂಖ್ಯೆಯನ್ನು ವಿಭಿನ್ನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಯುಎಸ್ ಬಳಕೆದಾರರ ಸಂಖ್ಯೆಯ ಬೆಲೆ 7 ಸಾವಿರ ಡಾಲರ್ (ಅಂದಾಜು ರೂ. 5,71,690), ಯುಕೆ ಡೇಟಾ 2500 ಡಾಲರ್, ಮತ್ತು ಜರ್ಮನ್ ಡೇಟಾ 2 ಸಾವಿರ ಡಾಲರ್ ಎಂದು ತಿಳಿದಿದೆ.

ಭಾರತದಲ್ಲಿ 61.62 ಲಕ್ಷ WhatsApp ಬಳಕೆದಾರರ ಫೋನ್ ಸಂಖ್ಯೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ವರದಿಯಾಗಿದೆ. ಸೈಬರ್ ಅಪರಾಧಿಗಳು ಈ ಸಂಖ್ಯೆಗಳನ್ನು ಖರೀದಿಸಿ ಆನ್‌ಲೈನ್ ವಂಚನೆ ಮಾಡುವ ಅಪಾಯವಿದೆ. ಬಹಳಷ್ಟು ಹಣವನ್ನು ಕಳೆದುಕೊಳ್ಳುವ ಅಪಾಯವಿದೆ. ಹೀಗಾಗಿ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಮತ್ತು ಸಂದೇಶಗಳು ಬಂದರೆ ಅದಕ್ಕೆ ಪ್ರತಿಕ್ರಿಯಿಸಬೇಡಿ ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: VIP Sim Card : 9999 ಅಥವಾ 7777 ನಂತಹ ಸಂಖ್ಯೆಯ ಉಚಿತ ಸಿಮ್ ಕಾರ್ಡ್ ಬೇಕೇ? ಈ ರೀತಿಯ ಬುಕ್ ಮಾಡಿ!

ಮೆಟಾ ಕಂಪನಿಗಳಲ್ಲಿ ಇದು ಮೊದಲ ಡೇಟಾ ಉಲ್ಲಂಘನೆಯಲ್ಲ. ಕಳೆದ ವರ್ಷ 500 ಮಿಲಿಯನ್‌ಗೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಸೋರಿಕೆಯಾದ ಡೇಟಾದಲ್ಲಿ ಫೋನ್ ಸಂಖ್ಯೆಗಳು, ವೈಯಕ್ತಿಕ ಮತ್ತು ಇತರ ವಿವರಗಳು ಸೋರಿಕೆಯಾಗಿರುವುದು ತಿಳಿದುಬಂದಿದೆ. ಹ್ಯಾಕರ್‌ಗಳು ಇಚ್ಛೆಯಂತೆ ಉತ್ಸುಕರಾಗುವುದರಿಂದ ನಾವು ಜಾಗರೂಕರಾಗಿರಬೇಕು. ಅಪರಿಚಿತ ಸಂಖ್ಯೆಗಳಿಂದ ಕರೆ ಬಂದರೆ ಪ್ರತಿಕ್ರಿಯೆ ನೀಡದಿರುವುದು ಉತ್ತಮ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News