ತಪ್ಪಿ ಯಾವುದೋ ಖಾತೆಗೆ ಹಣ ವರ್ಗಾವಣೆಯಾದರೆ ಮರಳಿ ಪಡೆಯುವುದು ಹೇಗೆ? ಗ್ರಾಹಕರ ಮುಂದಿರುವ ಆಯ್ಕೆಗಳು ಏನು ?

ಹಣ ವರ್ಗಾವಣೆ ಮಾಡುವಾಗ ಬೇರೆ ಯಾವುದೋ ಖಾತೆಗೆ ಹಣ ವರ್ಗವಾದಾಗ ಗಲಿಬಿಲಿಯಾಗುತ್ತದೆ. ಇನ್ನು ನಮಗೆ ಗೊತ್ತಿಲ್ಲದವರ ಖಾತೆಗೆ ಹಣ ವರ್ಗಾವಣೆ ಯಾಗಿದ್ದರೆ ಆ ಹಣವನ್ನು ಮರಳಿ ಪಡೆಯುವುದು ಹೇಗೆ ಎನ್ನುವ ಚಿಂತೆ ಕಾಡುತ್ತದೆ.

Written by - Ranjitha R K | Last Updated : Oct 5, 2022, 10:57 AM IST
  • ಬೇರೆ ಖಾತೆಗೆ ಹಣ ವರ್ಗಾವನೆಯಾದಾಗ ಏನು ಮಾಡಬೇಕು ?
  • ವರ್ಗಾವಣೆಯಾದ ಹಣ ಮರಳಿ ಪಡೆಯುವುದು ಹೇಗೆ ?
  • ಕೆಲವೊಂದು ಮಾರ್ಗಗಳನ್ನು ಅನುಸರಿಸಿದರೆ ನಷ್ಟವನ್ನು ತಪ್ಪಿಸಬಹುದು
ತಪ್ಪಿ ಯಾವುದೋ ಖಾತೆಗೆ ಹಣ ವರ್ಗಾವಣೆಯಾದರೆ ಮರಳಿ ಪಡೆಯುವುದು ಹೇಗೆ?  ಗ್ರಾಹಕರ ಮುಂದಿರುವ ಆಯ್ಕೆಗಳು ಏನು ? title=
money transfer rules

ಬೆಂಗಳೂರು : ನಾವು ಯುಪಿಐ, ಎನ್ಇ ಎಫ್ ಟಿ,  ಐಎಂಪಿ ಎಸ್ , ನೆಟ್ ಬ್ಯಾಂಕಿಂಗ್ ಮೂಲಕ  ಹಣವನ್ನು ವರ್ಗಾಯಿಸುತ್ತೇವೆ. ಆದರೆ ಹಣ ವರ್ಗಾವಣೆ ಮಾಡುವಾಗ ಬೇರೆ ಯಾವುದೋ ಖಾತೆಗೆ ಹಣ ವರ್ಗವಾದಾಗ ಗಲಿಬಿಲಿಯಾಗುತ್ತದೆ. ಇನ್ನು ನಮಗೆ ಗೊತ್ತಿಲ್ಲದವರ ಖಾತೆಗೆ ಹಣ ವರ್ಗಾವಣೆ ಯಾಗಿದ್ದರೆ ಆ ಹಣವನ್ನು ಮರಳಿ ಪಡೆಯುವುದು ಹೇಗೆ ಎನ್ನುವ ಚಿಂತೆ ಕಾಡುತ್ತದೆ. ಹಣ ವರ್ಗಾವಣೆ ಮಾಡುವಾಗ ಪದೇ ಪದೇ  ನಿಮ್ಮಿಂದ ಈ ತಪ್ಪು ಆಗುತ್ತಿದ್ದರೆ, ಫಲಾನುಭವಿಯ ಖಾತೆಗೆ ಮೊದಲು 1 ಅಥವಾ 2 ರೂಪಾಯಿಗಳನ್ನು ಹಾಕಿ ಖಾತೆ ಸರಿಯಾಗಿದೆಯೇ ಎನ್ನುವುದನ್ನು ದೃಢೀಕರಿಸುವ ಮೂಲಕ ಸಂಭವಿಸಬಹುದಾಗ ದೊಡ್ಡ ನಷ್ಟವನ್ನು ತಪ್ಪಿಸಬಹುದು.

ಇದಲ್ಲದೆ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು : 

1. ಮೊದಲನೆಯದಾಗಿ ನಿಮ್ಮ ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ. ಬ್ಯಾಂಕ್ ವಹಿವಾಟಿನ ಸಂಪೂರ್ಣ ವಿವರಗಳನ್ನು ನೀಡಿ.  ಕಂಪ್ಲೈಂಟ್ ರಿಕ್ವೆಸ್ಟ್ ನಂಬರ್ ಬರೆದಿಟ್ಟುಕೊಳ್ಳುವುದನ್ನು ಮರೆಯಬೇಡಿ. 

2. ಹಣ ಕಳುಹಿಸುವ ಮುನ್ನ ಬ್ಯಾಂಕ್ ಖಾತೆದಾರರ ಖಾತೆ ಸಂಖ್ಯೆಯನ್ನು  ಒಂದೆರಡು ಬಾರಿ ಪರಿಶೀಲಿಸಿಕೊಳ್ಳಿ. ಐಎಫ್‌ಎಸ್‌ಸಿ ಕೋಡ್ ಅನ್ನು ತಪ್ಪಾಗಿ ಭರ್ತಿ ಮಾಡುವುದರಿಂದ ಹಣ ಬೇರೆ ಯಾರದ್ದೋ ಖಾತೆ ಸೇರುವ ಸಾಧ್ಯತೆ ಇರುತ್ತದೆ. 

ಇದನ್ನೂ ಓದಿ : ರೈತರಿಗೆ ಸಿಹಿ ಸುದ್ದಿ! ಅನ್ನದಾತನ ಸಂಕಷ್ಟ ಪರಿಹಾರಕ್ಕೆ ಮತ್ತೊಂದು ಸೌಲಭ್ಯ ಒದಗಿಸಿದ ಸರ್ಕಾರ

3. ಒಂದು ವೇಳೆ ನಿಮ್ಮಿಂದ ತಪ್ಪಾಗಿದ್ದರೆ, ತಪ್ಪಾದ ವಹಿವಾಟುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮೇಲ್‌ನಲ್ಲಿ ಬ್ಯಾಂಕ್‌ಗೆ ಕಳುಹಿಸಬೇಕು.  ಈ ಮೂಲಕ ನಿಮ್ಮ ಬಳಿ ಸಂಪೂರ್ಣ ಲಿಖಿತ ದಾಖಲೆ  ಇದ್ದಂತಾಗುತ್ತದೆ. 

4. ಬ್ಯಾಂಕ್ ಗೆ ಇಮೇಲ್ ಬರೆಯಲು ಅಥವಾ ಗ್ರಾಹಕ ಸೇವೆಯೊಂದಿಗೆ ಮಾತನಾಡಲು  ಸಾಧ್ಯವಾಗುತ್ತಿಲ್ಲ ಎಂದಾದರೆ, ನೇರವಾಗಿ ಬ್ಯಾಂಕಿನ ಶಾಖೆಗೆ ಹೋಗಿ. ಆದರೆ ಅಲ್ಲಿಯೂ ಬ್ಯಾಂಕ್ ಮ್ಯಾನೇಜರ್‌ಗೆ ಲಿಖಿತ ಮಾಹಿತಿ ನೀಡಿ ಸ್ವೀಕೃತಿಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. 

5. ನೀವು ಅಸ್ತಿತ್ವದಲ್ಲಿಲ್ಲದ ಅಥವಾ ಬ್ಲಾಕ್ ಆಗಿರುವಂಥಹ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿದ್ದರೆ, ಹಣವನ್ನು ತಕ್ಷಣವೇ ಹಿಂತಿರುಗಿಸಲಾಗುತ್ತದೆ.

6. ನೀವು ಹಣವನ್ನು  ಯಾರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿರೋ, ಹಣವನ್ನು ಹಿಂದಿರುಗಿಸುವುದು ಅಥವಾ ಹಿಂದಿರುಗಿಸದೇ ಇರುವುದು ಆ ವ್ಯಕ್ತಿಯನ್ನು ಅವಲಂಬಿಸಿರುತ್ತದೆ.  ಆ ವ್ಯಕ್ತಿ ಒಪ್ಪಿದರೆ, ಹಣ ಯಾವುದೇ ಅಡೆತಡೆಯಿಲ್ಲದೆ ನಿಮಗೆ  ಸಿಗುತ್ತದೆ. 

ಇದನ್ನೂ ಓದಿ : Gold Price Today : ಎರಡನೇ ದಿನವೂ ದುಬಾರಿಯಾದ ಚಿನ್ನ, ಬೆಳ್ಳಿ ಖರೀದಿ ಯೋಚನೆ ಸಾಧ್ಯವೇ ಇಲ್ಲ .!

7. ನಿಮ್ಮ ಖಾತೆ ಯಾವ ಬ್ಯಾಂಕಿನಲ್ಲಿದೆಯೋ ಅದೇ ಬ್ಯಾಂಕಿನ ಖಾತೆಗೆ ಹಣ ಹೋಗಿದ್ದರೆ, ಬ್ಯಾಂಕ್ ಸ್ವತಃ ಆ ಖಾತೆದಾರರನ್ನು ಸಂಪರ್ಕಿಸಿ ಮತ್ತು ಹಣವನ್ನು ಹಿಂಪಡೆಯಲು ವಿನಂತಿಸಬಹುದು. 

8. ಹಣವು ಯಾವುದೇ ಇತರ ಬ್ಯಾಂಕ್‌ನ ಖಾತೆದಾರರಿಗೆ ಹೋಗಿದ್ದರೆ, ನಿಮ್ಮ ಬ್ಯಾಂಕ್ ನಿಮಗೆ  ಆ ಬ್ಯಾಂಕ್ ಮತ್ತು ಅದರ ಹತ್ತಿರದ ಶಾಖೆಯ ಮಾಹಿತಿಯನ್ನು ನೀಡುತ್ತದೆ. ಅಲ್ಲಿಗೆ ಹೋಗಿ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕಾಗುತ್ತದೆ. ಈ ವೇಳೆ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧ ಪಟ್ಟ ಎಲ್ಲಾ ಪುರಾವೆಗಳು, ಎಲೆಕ್ಟ್ರಾನಿಕ್ ದಾಖಲೆಗಳು ಇತ್ಯಾದಿಗಳನ್ನು ತೋರಿಸಬೇಕಾಗುತ್ತದೆ.

9. ಬ್ಯಾಂಕ್ ಮ್ಯಾನೇಜರ್ ನಂತರ ಆ ಖಾತೆದಾರರೊಂದಿಗೆ ಮಾತನಾಡಿ, ಅವರ ಖಾತೆಗೆ ತಪ್ಪಿ ವರ್ಗಾವಣೆಯಾದ ಮೊತ್ತವನ್ನು ಮರುಪಾವತಿಸಲು ವಿನಂತಿಸುತ್ತಾರೆ.

10. ಆದರೆ ನೆನಪಿರಲಿ RBI ಸೂಚನೆಗಳ ಪ್ರಕಾರ, ಜವಾಬ್ದಾರಿಯು ಹಣವನ್ನು ಕಳುಹಿಸುವವರ ಮೇಲಿರುತ್ತದೆ. ಹಣವನ್ನು ಸ್ವೀಕರಿಸಿದವರು  ನಿರಾಕರಿಸಿದರೆ, ನಿಮ್ಮ ಮುಂದೆ ಕಾನೂನು ಆಯ್ಕೆಗಳು ಇರುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News