ವಾಟ್ಸ್ ಆಪ್ ಗ್ರೂಪ್ ಗೂ ಇರಲಿದೆ ಇನ್ನು ಎಕ್ಸ್ ಪೈರಿ ಡೇಟ್ ! ತನ್ನಷ್ಟಕ್ಕೆ ಆಗುವುದು ಗ್ರೂಪ್ ಡಿಲೀಟ್

WhatsApp New Feature :  WhatsApp ಐಒಎಸ್ ಬೀಟಾಗಾಗಿ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯ ವಾಟ್ಸ್ ಆಪ್ ಗ್ರೂಪ್ ಗಳಿಗೆ  ಎಕ್ಸ್ ಪೈರಿ ಡೇಟ್ ಹೊಂದಿಸಲು ಅನುವು ಮಾಡಿಕೊಡುತ್ತದೆ. 

Written by - Ranjitha R K | Last Updated : Mar 7, 2023, 03:39 PM IST
  • ಈ ವರ್ಷ WhatsAppನಲ್ಲಿ ಬರಲಿದೆ ಹಲವು ಹೊಸ ವೈಶಿಷ್ಟ್ಯ
  • ವಾಟ್ಸ್ ಆಪ್ ಗ್ರೂಪ್ ಗಳಿಗೆ ಇರಲಿದೆ ಎಕ್ಸ್ ಪೈರಿ ಡೇಟ್
  • ಯಾವಾಗ ಬಿಡುಗಡೆಯಾಗಲಿದೆ ಈ ವೈಶಿಷ್ಟ್ಯ
ವಾಟ್ಸ್ ಆಪ್ ಗ್ರೂಪ್ ಗೂ ಇರಲಿದೆ ಇನ್ನು ಎಕ್ಸ್ ಪೈರಿ ಡೇಟ್ ! ತನ್ನಷ್ಟಕ್ಕೆ ಆಗುವುದು ಗ್ರೂಪ್ ಡಿಲೀಟ್   title=

WhatsApp New Feature : ಈ ವರ್ಷ WhatsApp ನಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು. ಕಂಪನಿಯು ಶೀಘ್ರದಲ್ಲೇ ಹಲವು ವೈಶಿಷ್ಟ್ಯಗಳನ್ನು ಹೊರತರಲಿದೆ. ಕೆಲವು ವೈಶಿಷ್ಟ್ಯಗಳು ಮೊದಲು iOS ಬೀಟಾ ಆವೃತ್ತಿಯಲ್ಲಿ ಬಂದರೆ ಇನ್ನು ಕೆಲವು Android ಆವೃತ್ತಿಯಲ್ಲಿ ಮೊದಲು ಪರಿಚಯಿಸಲ್ಪಡುತ್ತವೆ. WhatsApp ಐಒಎಸ್ ಬೀಟಾಗಾಗಿ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯ ವಾಟ್ಸ್ ಆಪ್ ಗ್ರೂಪ್ ಗಳಿಗೆ  ಎಕ್ಸ್ ಪೈರಿ ಡೇಟ್ ಹೊಂದಿಸಲು ಅನುವು ಮಾಡಿಕೊಡುತ್ತದೆ. 

ಹಲವು ಆಯ್ಕೆಗಳು ಸಿಗಲಿವೆ :
ಈ ವೈಶಿಷ್ಟ್ಯದ ಪ್ರಕಾರ ಬಳಕೆದಾರರು ಒಂದು ದಿನ, ಒಂದು ವಾರ ಅಥವಾ ಕಸ್ಟಮ್ ದಿನಾಂಕದಂತಹ ವಿವಿಧ ಎಕ್ಸ್ ಪೈರಿ ಡೇಟ್ ಆಯ್ಕೆಗಳನ್ನು ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು ತಮ್ಮ ಗ್ರೂಪ್ ನ ಎಕ್ಸ್ ಪೈರಿ ಡೇಟ್ ಅನ್ನು ಬದಲಾಯಿಸುವುದು ಕೂಡಾ ಸಾಧ್ಯವಾಗುತ್ತದೆ. 

ಇದನ್ನೂ ಓದಿ : ಶೀಘ್ರದಲ್ಲೇ ಅಗ್ಗದ ಬೆಲೆಯಲ್ಲಿ 5ಜಿ ಐಫೋನ್ ಪರಿಚಯಿಸಲಿದೆ ಆಪಲ್

ವಾಟ್ಸ್ ಅಪ್ ಗ್ರೂಪ್ ಗಳಿಗೆ ಎಕ್ಸ್ ಪೈರಿ ಡೇಟ್ :
ಕಾಲಾನಂತರದಲ್ಲಿ ಗುಂಪುಗಳನ್ನು ನಿರ್ವಹಿಸಲು ಬಳಕೆದಾರರಿಗೆ ಈ ವೈಶಿಷ್ಟ್ಯ ಸಹಾವಾಗಲಿದೆ. ಸ್ಪೇಸ್ ಉಳಿಸಲು ಒಂದು ಉತ್ತಮ ಸ್ಟೋರೇಜ್ ಟೂಲ್ ನಂತೆಯೂ ಕೆಲಸ ಮಾಡಲಿದೆ. ವಾಟ್ಸ್ ಅಪ್ ಗ್ರೂಪ್ ಗಳಿಗೆ ಎಕ್ಸ್ ಪೈರಿ ಡೇಟ್ ಅನ್ನು ಆಯ್ಕೆ ಮಾಡುವ ಸಾಮರ್ಥ್ಯವು ಪ್ರಸ್ತುತ ಅಭಿವೃದ್ಧಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.  

ಏತನ್ಮಧ್ಯೆ, ಕಳೆದ ವಾರ, ಮೆಸೇಜಿಂಗ್ ಪ್ಲಾಟ್‌ಫಾರ್ಮ್ iOSನಲ್ಲಿ ಸ್ಟಿಕ್ಕರ್  ಮೇಕರ್ ಟೂಲ್  ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗಿತ್ತು. ಅದು ಬಳಕೆದಾರರಿಗೆ ಇಮೇಜ್ ಗಳನ್ನು  ಸ್ಟಿಕ್ಕರ್‌ಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದಕ್ಕಾಗಿ ಥರ್ಡ್ ಪಾರ್ಟಿ ಆಪ್ ನ ಅವಶ್ಯಕತೆ ಇರುವುದಿಲ್ಲ. 

ಇದನ್ನೂ ಓದಿ : ಕೈಗೆಟುಕುವ ಬೆಲೆಯಲ್ಲಿ ಮನೆಗೆ ತನ್ನಿ 55 ಇಂಚಿನ ಸ್ಮಾರ್ಟ್ ಟಿವಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News