WhatsApp Mistakes: ಅಪ್ಪಿತಪ್ಪಿಯೂ ಗ್ರೂಪ್‌ಗಳಿಗೆ ಈ 4 ವಿಷಯ ಕಳುಹಿಸಬೇಡಿ..!

ಬಹುತೇಕ ಜನರು ವಾಟ್ಸಾಪ್‌ನ ಗ್ರೂಪ್‌ಗೆ ಸೇರಿಸುತ್ತಾರೆ. ಆದರೆ ಗ್ರೂಪ್‌ನಲ್ಲಿ ಚಾಟ್ ಮಾಡುವಾಗ ನೀವು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನೀವು ಸಮಸ್ಯೆಗೆ ಸಿಲುಕಬಹುದು.

Written by - Puttaraj K Alur | Last Updated : Jul 31, 2022, 10:41 PM IST
  • WhatsAppನಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ
  • ಅಪ್ಪಿತಪ್ಪಿ ನೀವು ಈ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡರೆ ಸೀದಾ ಜೈಲಿಗೆ ಹೋಗಬೇಕಾಗುತ್ತದೆ
  • ಹಕ್ಕುಸ್ವಾಮ್ಯ ಹಾಗೂ ವಯಸ್ಕರ ವಿಷಯ ಮತ್ತು ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿಲ್ಲ
WhatsApp Mistakes: ಅಪ್ಪಿತಪ್ಪಿಯೂ ಗ್ರೂಪ್‌ಗಳಿಗೆ ಈ 4 ವಿಷಯ ಕಳುಹಿಸಬೇಡಿ..!  title=
WhatsApp Mistakes

ನವದೆಹಲಿ: WhatsApp ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಬಳಸುವ ಸಂದೇಶ ವಿನಿಮಯ ವೇದಿಕೆಯಾಗಿದೆ. ಇಂದು ಬಹುತೇಕರು ಸ್ಮಾರ್ಟ್‌ಫೋನ್ ಬಳಕೆದಾರರು WhatsApp ಬಳಸುತ್ತಾರೆ. ಇಂದು ಅನೇಕ ರೀತಿಯಲ್ಲಿ WhatsApp ಬಳಕೆಯಾಗುತ್ತಿದೆ. ನೀವು ಇರದಲ್ಲಿ ಪಠ್ಯ ಸಂದೇಶ ಕಳುಹಿಸಬಹುದು ಜೊತೆಗೆ ಆಡಿಯೋ ಮತ್ತು ವಿಡಿಯೋ ಚಾಟ್ ಸಹ ಮಾಡಬಹುದು. ಕಾಲಕ್ಕೆ ತಕ್ಕಂತೆ ಇದರಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

WhatsAppನಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಪ್ಪಿತಪ್ಪಿ ನೀವು ಈ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡರೆ ಸೀದಾ ಜೈಲಿಗೆ ಹೋಗಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.   

ಇದನ್ನೂ ಓದಿ: ನೀವು ಆನ್‌ಲೈನ್‌ನಲ್ಲಿರುವುದು ಯಾರಿಗೂ ತಿಳಿಯಬಾರದೇ? ವಾಟ್ಸಾಪ್ ಪರಿಚಯಿಸಲಿದೆ ಹೊಸ ವೈಶಿಷ್ಟ್ಯ

ಹಕ್ಕುಸ್ವಾಮ್ಯ ವಿಷಯ (Copyright Content)

ನೀವು ಮೂಲ ವಸ್ತುವಿನ ಹಕ್ಕುಸ್ವಾಮ್ಯ ಹೊಂದಿರುವ ವಿಷಯವನ್ನು ಗುಂಪಿಗೆ ಕಳುಹಿಸುತ್ತಿದ್ದರೆ ಅಥವಾ ಅದನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸುತ್ತಿದ್ದರೆ ತುಂಬಾ ಎಚ್ಚರಿಕೆಯಿಂದಿರಿ. ಏಕೆಂದರೆ ಇದರ ಬಗ್ಗೆ ಯಾರಾದರೂ ತಿಳಿದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದರೆ ನೀವು ಜೈಲಿಗೆ ಹೋಗಬೇಕಾಗಬಹುದು. ಇದಕ್ಕಾಗಿ ನೀವು ದೊಡ್ಡ ಮೊತ್ತದ ದಂಡವನ್ನು ಸಹ ನೀವು ಕಟ್ಟಬೇಕಾಗುತ್ತದೆ.  

ಗುಂಪಿನಲ್ಲಿ ವಯಸ್ಕರ ವಿಷಯ (Adult Content)

ಕೆಲವರು ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಯಾಗುತ್ತಾರೆ ಮತ್ತು ವಯಸ್ಕರ ವಿಷಯವನ್ನು ನಿರಂತರವಾಗಿ ಕಳುಹಿಸುತ್ತಲೇ ಇರುತ್ತಾರೆ. ಆದರೆ ಗುಂಪಿನ ಸದಸ್ಯರಲ್ಲಿ ಒಬ್ಬರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ನೀವು ಜೈಲಿಗೆ ಹೋಗಬೇಕಾಗಬಹುದು. ನೀವು ಇಂತಹ ವಿಷಯವನ್ನು ಗುಂಪಿಗೆ ಅಪ್ಪಿತಪ್ಪಿಯೂ ಕಳುಹಿಸಬಾರದು.

ಇದನ್ನೂ ಓದಿ: ಮಂಕಿಪಾಕ್ಸ್ ಸೋಂಕು ತಪ್ಪಿಸಲು ಕೂಡಲೇ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.! ರೋಗ ಹೇಗೆ ಹರಡುತ್ತದೆ ಲಕ್ಷಣಗಳೇನು ತಿಳಿಯಿರಿ

ಭಯೋತ್ಪಾದಕ ಚಟುವಟಿಕೆಗಳು (Terrorist Activities)

ನೀವು ಯಾವುದೇ ವಾಟ್ಸಾಪ್ ಗುಂಪಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ವಿಡಿಯೋ ಅಥವಾ ಪಠ್ಯವನ್ನು ಕಳುಹಿಸಬಾರದು. ಹೀಗೆ ಮಾಡಿದರೆ ನೀವು ಜೈಲಿಗೆ ಹೋಗಬೇಕಾಗಬಹುದು. ಏಕೆಂದರೆ ಇಂತಹ ಸಂದೇಶಗಳ ಮೇಲೆ ಸರ್ಕಾರ ಕಣ್ಣಿಟ್ಟಿದ್ದು, ಯಾರಾದರೂ ದೂರು ನೀಡಿದರೆ ನೀವು ಜೈಲಿಗೆ ಹೋಗುವುದು ಖಚಿತ.

ಕಿರುಕುಳ ಅಥವಾ ಬ್ಲ್ಯಾಕ್‌ಮೇಲ್ (Someone's MMS) 

ಯಾವುದೇ ಒಬ್ಬ ವ್ಯಕ್ತಿಯ ವಾಟ್ಸಾಪ್‌ನಲ್ಲಿ ನಿರಂತರವಾಗಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ಅಥವಾ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ. ಏಕೆಂದರೆ ಹೀಗೆ ಮಾಡುವುದು ಅಪರಾಧದಡಿ ಬರುತ್ತದೆ. ಅಶ್ಲೀಲ ಸಂದೇಶಗಳ ಮೂಲಕ ಕಿರುಕುಳ ಮತ್ತು ಬ್ಲ್ಯಾಕ್‍ಮೇಲ್ ಮಾಡಿದರೆ ನಿಮ್ಮನ್ನು ಬಂಧಿಸಿ ಜೈಲಿಗಟ್ಟಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News