WhatsApp New Scam: ವಾಟ್ಸಾಪ್ ಗ್ರಾಹಕರೇ ಗಮನಿಸಿ, ಹ್ಯಾಕರ್‌ಗಳ ಇಂತಹ ವಂಚನೆ ಬಗ್ಗೆ ಇರಲಿ ಎಚ್ಚರ!

WhatsApp New Scam: ತಂತ್ರಜ್ಞಾನ ಯುಗವು ನಮ್ಮ ಕೆಲಸಗಳನ್ನು ಎಷ್ಟು ಸುಲಭವಾಗಿಸಿದೆಯೋ, ಅಷ್ಟೇ ನಮ್ಮನ್ನು ಅಪಾಯದಲ್ಲಿ ಉಳಿಯುವಂತೆ ಮಾಡಿದೆ. ಪ್ರಸ್ತುತ ವಿಶ್ವದ ಜನಪ್ರಿಯ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಾಪ್ ಮೂಲಕವೂ ಹ್ಯಾಕರ್‌ಗಳು ಜನರನ್ನು ವಂಚಿಸಲು ಹೊಸ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ನೀವೂ ವಾಟ್ಸಾಪ್ ಬಳಕೆದಾರರಾಗಿದ್ದರೆ ಸೈಬರ್ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ವಾಟ್ಸಾಪ್‌ನ ಹೊಸ ವಂಚನಾ ಜಾಲದ ಬಗ್ಗೆ ತಿಳಿಯಲು ಇದನ್ನು ತಪ್ಪದೇ ಓದಿ...

Written by - Yashaswini V | Last Updated : Dec 19, 2022, 08:01 AM IST
  • ಈ ತಂತ್ರಜ್ಞಾನ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದೆ
  • ಹ್ಯಾಕರ್‌ಗಳು ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.
  • ಇದೀಗ ಸೈಬರ್ ವಂಚಕರು ಪ್ರಸಿದ್ಧ ಕೋಟ್ಯಾಂತರ ಜನರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಅನ್ನು ಕೂಡ ಸೈಬರ್ ವಂಚನೆಗಾಗಿ ಬಳಸುತ್ತಿದ್ದಾರೆ.
WhatsApp New Scam: ವಾಟ್ಸಾಪ್ ಗ್ರಾಹಕರೇ ಗಮನಿಸಿ, ಹ್ಯಾಕರ್‌ಗಳ ಇಂತಹ ವಂಚನೆ ಬಗ್ಗೆ ಇರಲಿ ಎಚ್ಚರ! title=
Whatsapp scam

WhatsApp New Scam: ಎಟಿಎಂ ಕಾರ್ಡ್ ಹಗರಣದಿಂದ ಯುಪಿಐ ಹಗರಣದವರೆಗೆ ಜನರನ್ನು ಚಿಂತೆಯಲ್ಲಿ ಮುಳುಗುವಂತೆ ಮಾಡಿರುವ ಸೈಬರ್ ವಂಚಕರು ಪ್ರಸಿದ್ಧ ಕೋಟ್ಯಾಂತರ ಜನರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಅನ್ನು ಕೂಡ ಸೈಬರ್ ವಂಚನೆಗಾಗಿ ಬಳಸುತ್ತಿದ್ದಾರೆ. ವಾಸ್ತವವಾಗಿ, ಈ ತಂತ್ರಜ್ಞಾನ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು ಹ್ಯಾಕರ್‌ಗಳು ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು ಆಘಾತಕಾರಿ ಪ್ರಕರಣ ಮುನ್ನೆಲೆಗೆ ಬಂದಿದ್ದು ಇದರಲ್ಲಿ ಹ್ಯಾಕರ್‌ಗಳು ವಾಟ್ಸಾಪ್‌ನ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ನೀವೂ ವಾಟ್ಸಾಪ್ ಬಳಕೆದಾರರಾಗಿದ್ದರೆ ಸೈಬರ್ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ವಾಟ್ಸಾಪ್‌ನ ಹೊಸ ವಂಚನಾ ಜಾಲದ ಬಗ್ಗೆ ತಿಳಿಯಲು ಇದನ್ನು ತಪ್ಪದೇ ಓದಿ...

ಮೊಬೈಲ್ ಕಳೆದು ಹೋಗಿದೆ ಎಂಬ ನೆಪದಲ್ಲಿ ವಂಚನೆಗೆ ಯತ್ನ:
ಶಾಕಿಂಗ್ ವಿಷಯವೆಂದರೆ, ಸೈಬರ್ ವಂಚಕರು ಬೆಲೆಕಟ್ಟಲಾಗದ 'ಅಮ್ಮ' ಎಂಬ ಶಬ್ದವನ್ನೂ ಕೂಡ ತಮ್ಮ ಸೈಬರ್ ವಂಚನೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹೊಸ ಹಗರಣದಲ್ಲಿ ಮೊದಲಿಗೆ ಹಾಯ್ ಮಮ್ ಎಂದು ಮೆಸೇಜ್ ಕಳುಹಿಸುವ ವಂಚಕರು ನಂತರ ಮೊಬೈಲ್ ಕಳೆದು ಹೋಗಿದೆ ಎಂಬ ನೆಪವನ್ನೇ ಬಳಸಿಕೊಂಡಿರುವ ಹ್ಯಾಕರ್‌ಗಳು ವಾಟ್ಸಾಪ್ ಮೂಲಕ ಜನರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಈ ಹಗರಣ ಆಸ್ಟ್ರೇಲಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇಂತಹ ವಂಚನೆ ಪ್ರಕರಣಗಳಿಂದ ಆಸ್ಟ್ರೇಲಿಯಾದಲ್ಲಿ ಜನರು ಇದುವರೆಗೂ 7 ಮಿಲಿಯನ್ ಡಾಲರ್ (ಸುಮಾರು 57.84 ಕೋಟಿ ರೂ.) ಹಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- Google Search Trends: ವರ್ಷ 2022ರಲ್ಲಿ ಗೂಗಲ್ನಲ್ಲಿ 'ಲೈಂಗಿಕತೆ'ಯ ಕುರಿತು ಅತಿ ಹೆಚ್ಚು ಹುಡುಕಾಟ ನಡೆಸಿದ ದೇಶ ಯಾವುದು ಗೊತ್ತಾ?

ವಾಟ್ಸಾಪ್‌ನಲ್ಲಿ ಜನರನ್ನು ಮೋಸದ ಜಾಲದಲ್ಲಿ ಬೀಳಿಸುವ ವಂಚಕರು ತಮ್ಮ ಕುಟುಂಬದ ಸದಸ್ಯರಂತೆಯೇ, ತಮಗೆ ತುಂಬಾ ಆತ್ಮೀಯರಾಗಿರುವಂತೆಯೇ  ಮಾತನಾಡುತ್ತಾರೆ. ಈ ಮೆಸೇಜಿಂಗ್ ಚಾಟ್ ನಲ್ಲಿ ನನ್ನ ಫೋನ್ ಕಳೆದುಹೋಗಿದೆ ಹಾಗಾಗಿ ಬೇರೆ ನಂಬರ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಿದ್ದೇನೆ ಎಂದು ನಯವಾಗಿ ಮಾತನಾಡುತ್ತಾ, ನನ್ನ ಬ್ಯಾಂಕ್ ಖಾತೆಯನ್ನೂ ಸೀಜ್ ಮಾಡಲಾಗಿದೆ ಎಂದು ಹೇಳಿ ಮತ್ತೊಂದು ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತೆ ವಾಟ್ಸಾಪ್ ಬಳಕೆದಾರರ ಬಳಿ ಹಣ ಕೇಳಲಾಗುತ್ತಿದೆ. ನಿಮಗೂ ಕೂಡ ಇಂತಹ ಯಾವುದೇ ತಿಳಿಯದ ಸಂಖ್ಯೆಯ ಮೂಲಕ ಸಂದೇಶಗಳು ಬಂದರೆ ಬಹಳ ಜಾಗರೂಕರಾಗಿರುವುದು ಅತ್ಯಗತ್ಯ. ಜೊತೆಗೆ ಸೈಬರ್ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಕೆಲವು ಮಾರ್ಗಗಳನ್ನು ಅನುಸರಿಸುವುದು ಕೂಡ ಬಹಳ ಮುಖ್ಯ.

ಇದನ್ನೂ ಓದಿ- WhatsApp ನ ಈ ಅದ್ಭುತ ವೈಶಿಷ್ಟ್ಯ ಶೀಘ್ರದಲ್ಲಿಯೇ ಬಿಡುಗಡೆ, ಬಳಕೆದಾರರಿಗೇನು ಲಾಭ?

ಸೈಬರ್ ವಂಚನೆಯನ್ನು ತಪ್ಪಿಸಲು ಏನು ಮಾಡಬೇಕು?
* ಸೈಬರ್ ವಂಚನೆಯನ್ನು ತಪ್ಪಿಸಲು ಮಾಡಬೇಕಿರುವ ಮೊದಲ ಕೆಲಸವೆಂದರೆ ನೀವು ಯಾರೊಂದಿಗೂ ಸಹ ಎಂದಿಗೂ ಕೂಡ ನಿಮ್ಮ ಒಟಿಪಿಯನ್ನು ಹಂಚಿಕೊಳ್ಳುವ ತಪ್ಪನ್ನು ಮಾದಬೆದಿಎ.
* ನಿಮ್ಮ ಕುಟುಂಬದ ಸದಸ್ಯರಾಗಿರಲಿ ಅಥವಾ ನಿಮ್ಮ ಎಷ್ಟೇ ಆತ್ಮೀಯ ಸ್ನೇಹಿತರಾಗಿರಲಿ ಯಾರೊಂದಿಗೂ ಸಹ ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಅದರ ಸಿವಿವಿ ಸಂಖ್ಯೆ, ಪಾಸ್ವರ್ಡ್ ಹಂಚಿಕೊಳ್ಳಬೆದಿಎ.
* ನಿಮಗೆ ಬಹುಮಾನ ಬಂದಿದೆ, ಇದನ್ನು ಕ್ಲಿಕ್ ಮಾಡಿದರೆ ನಿಮ್ಮ ಖಾತೆ ಹಣ ಬರುತ್ತದೆ ಎಂದು ಸಂದೇಶದಲ್ಲಿ ಬರುವ ಲಿಂಕ್ ಗಳನ್ನು ಅಪ್ಪಿತಪ್ಪಿಯೂ ಕ್ಲಿಕ್ ಮಾಡಬೇಡಿ.
* ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ನಿಮ್ಮ ಪಾವತಿ ವಿವರಗಳನ್ನು ವೆಬ್‌ಸೈಟ್‌ಗಳಲ್ಲಿ ಎಂದಿಗೂ ಸೇವ್ ಮಾಡಬೇಡಿ.
* ಯಾವುದೇ ಬ್ಯಾಂಕ್ ಕರೆ ಮಾಡುವ ಮೂಲಕ ನಿಮ್ಮ ಬ್ಯಾಂಕ್ ವಿವರಗಳನ್ನು, ಯುಪಿಐ ಅಥವಾ ಇತರ ಯಾವುದೇ ವಿವರಗಳನ್ನು ಕೇಳುವುದಿಲ್ಲ. ಯಾರಾದರೂ ನಿಮಗೆ ಕರೆ ಮಾಡಿ ಈ ವಿವರಗಳನ್ನು ಕೇಳಿದರೆ ಎಂದಿಗೂ ಯಾರೊಂದಿಗೂ ಸಹ ಇಂತಹ ವಿವರಗಳನ್ನು ಶೇರ್ ಮಾಡಬೇಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News