Trending: ಈ ಜನರು ಮದುವೆ ದಿನ ಮಾತ್ರ ಸ್ನಾನ ಮಾಡಿದ್ರು ಶುದ್ಧವಾಗಿರ್ತಾರೆ..! ಹೇಗೆ ಗೊತ್ತಾ?

Himba Tribes: ಆಫ್ರಿಕಾ ಖಂಡದ ನಮೀಬಿಯಾ ದೇಶದಲ್ಲಿ ಹಿಂಬಾ ಎಂಬ ಬುಡಕಟ್ಟು ಜನಾಂಗ. ಈ ಬುಡಕಟ್ಟಿನಲ್ಲಿ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ. ಈ ಬುಡಕಟ್ಟಿನ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸ್ನಾನ ಮಾಡುವುದಿಲ್ಲ. ತಮ್ಮ ಮದುವೆಯ ದಿನದಂದು ಮಾತ್ರ ಸ್ನಾನ ಮಾಡುತ್ತಾರೆ. 

Written by - Zee Kannada News Desk | Last Updated : Mar 2, 2024, 05:18 PM IST
  • ಪ್ರಪಂಚದ ಅನೇಕ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಪದ್ಧತಿಗಳು ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ.
  • ಆಫ್ರಿಕಾ ಖಂಡದ ನಮೀಬಿಯಾ ದೇಶದಲ್ಲಿ ಹಿಂಬಾ ಎಂಬ ಬುಡಕಟ್ಟು ಜನಾಂಗದಲ್ಲಿ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ.
  • ಈ ಬುಡಕಟ್ಟಿನ ಜನರು ರೋಗಾಣುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊಗೆ ಸ್ನಾನ ಮಾಡುತ್ತಾರೆ.
Trending: ಈ ಜನರು ಮದುವೆ ದಿನ ಮಾತ್ರ ಸ್ನಾನ ಮಾಡಿದ್ರು ಶುದ್ಧವಾಗಿರ್ತಾರೆ..! ಹೇಗೆ ಗೊತ್ತಾ? title=

Himba Tribe of African: ಯಾವುದೇ ದೇಶದಲ್ಲಿಯಾಗಲಿ ಮನುಷ್ಯರಿಂದ ಹಿಡಿದು ಪ್ರಾಣಿಯವರಿಗೆ ದಿನಕ್ಕೆ ಒಮ್ಮೆಯಾದರು ಸ್ನಾನ ಮಾಡುತ್ತಾರೆ. ಬಬ್ಬರಿಗೆ ಒಂದೊಂದು ಅಭ್ಯಾಸ ಕೆಲವರಿ ಬೇಳಿಗ್ಗೆ ಇನ್ನೂ ಕೆಲವರಿಗೆ ಸಂಜೆ ವೇಳೆಗೆ ಸ್ನಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಜನಾಂಗವಿದೆ. ಸ್ನಾನ ಮಾಡುವ ಆಭ್ಯಾಸವನ್ನೇ ನೀಷೇಧಿಸಿ ಬಿಟ್ಟಿದ್ದಾರೆ. ಆದರು ಅವರು ಶುದ್ಧವಾಗಿಯೇ ಇರುತ್ತಾರೆ ಎಂದರೆ ನಂಬಲೂ ಸಾಧ್ಯವೇ. ಅರೇ ಯಾವುದು ಆ ಜನಾಂಗ ಹೇಗೆ ಸ್ನಾನ ಮಾಡದೇ ಶುಚಿಯಾಗಿರಲು ಸಾಧ್ಯ ಎಂದು ಯೋಚಿಸುತ್ತಿದ್ದೀರಾ..? ಹಾಗಾದರೆ ಈ ಸ್ಟೋರಿ ನೋಡಿ.. 

ಪ್ರಪಂಚದ ಅನೇಕ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಪದ್ಧತಿಗಳು ಮತ್ತು ನಂಬಿಕೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ಅನೇಕ ಬುಡಕಟ್ಟು ಜನರು ಅರಣ್ಯದಲ್ಲಿ ವಾಸಿಸುತ್ತಿದ್ದಾರೆ. ಈ ಜನರು ತಮ್ಮ ಪೂರ್ವಜರ ಸಾವಿರಾರು ವರ್ಷಗಳ ಹಿಂದಿನ ಸಂಪ್ರಾದಯವನ್ನು ಈಗಲೂ ಮುಂದುವರೆಸಿಕೊಂಡು ಬರುತ್ತಿರುತ್ತಾರೆ. ಅಲ್ಲದೇ ಇಲ್ಲಿಯ ಜನಾಂಗದವರು ವಾಸಿಸುವ ಸ್ಥಳಗಳ ಮೇಲೆ ಸಂಪೂರ್ಣ ಹಕ್ಕುಗಳನ್ನು ಹೊಂದಿದ್ದಾರೆ. ಈ ಬುಡಕಟ್ಟುಗಳನ್ನು ಸುರಕ್ಷಿತವಾಗಿಡಲು ದೇಶದ ಸರ್ಕಾರಗಳು ಕೂಡ ಅವರ ಸಂಪ್ರದಾಯದ ಆಚರಣೆಗಳಿಗೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ.

ಇದನ್ನೂ ಓದಿ: General Knowledge: ಮೂರು ರಾಜಧಾನಿಗಳನ್ನು ಹೊಂದಿರುವ ವಿಶ್ವದ ಏಕೈಕ ದೇಶ ಯಾವುದು?ನಿಮಗಿದು ಗೊತ್ತಾ

ಹೌದು, ಅಂತಹ ಆಚರಣೆಯಲ್ಲಿ ಈ ಸ್ನಾನ ಮಾಡದೇ ಇರುವುದು ಕೂಡ ಒಂದಾಗಿದೆ. ಅದೇ ಆಫ್ರಿಕಾ ಖಂಡದ ನಮೀಬಿಯಾ ದೇಶದಲ್ಲಿ ಹಿಂಬಾ ಎಂಬ ಬುಡಕಟ್ಟು ಜನಾಂಗ. ಈ ಬುಡಕಟ್ಟಿನಲ್ಲಿ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ. ಈ ಬುಡಕಟ್ಟಿನ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸ್ನಾನ ಮಾಡುವುದಿಲ್ಲ. ತಮ್ಮ ಮದುವೆಯ ದಿನದಂದು ಮಾತ್ರ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲ ಬಟ್ಟೆ ಒಗೆಯಲು ಕೂಡ ನೀರು ಬಳಸುವುದಿಲ್ಲ. ಈ ಬುಡಕಟ್ಟಿನ ಒಟ್ಟು ಜನಸಂಖ್ಯೆ ಸುಮಾರು 50,000. ಈ ಬುಡಕಟ್ಟಿನ ಬಹುತೇಕ ಜನರು ಹೆಚ್ಚಿನ ಸಮಯವನ್ನು ಹೊಲಗಳಲ್ಲಿಯೇ ಕಳೆಯುತ್ತಿರುತ್ತಾರೆ.

ಇದೀಗ ಹಿಂಬಾ ಬುಡಕಟ್ಟು ಜನಾಂಗದವರು ಸ್ನಾನ ಮಾಡದಿದ್ದರು ಹೇಗೆ ಸ್ವಚ್ಛತೆ ಕಾಪಾಡಿಕೋಳ್ಳುತ್ತಾರೆಎ ಎಂಬ ಪ್ರಶ್ನೆ ಉದ್ಭವಿಸಬಹುದು. ವಾಸ್ತವವಾಗಿ, ಈ ಬುಡಕಟ್ಟಿನ ಜನರು ರೋಗಾಣುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊಗೆ ಸ್ನಾನ ಮಾಡುತ್ತಾರೆ. ಮಹಿಳೆಯರು ತಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿಶೇಷ ಅಭ್ಯಾಸಗಳನ್ನು ಅನುಸರಿಸುತ್ತಾರೆ. ವಿಶೇಷ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸಿ, ಅದರಿಂದ ಬರುವ ಹೊಗೆಯನ್ನು ಬಳಸಿ ಅವರು ತಮ್ಮನ್ನು ತಾವು ಸ್ವಚ್ಛವಾಗಿರಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಅವರ ದೇಹದಲ್ಲಿ ವಾಸನೆ ಇರುವುದಿಲ್ಲ. ಇದಲ್ಲದೆ, ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ವಿಶೇಷ ಲೋಷನ್ ಅನ್ನು ಸಹ ಅವರು ಬಳಸುತ್ತಾರೆ. ವಿಶೇಚವೆಂದರೆ ಈ ಲೋಷನ್‌ಅನ್ನು ಪ್ರಾಣಿಗಳ ಕೊಬ್ಬಿನಿಂದ ತಯಾರಿಸುತ್ತಾರೆ ಎನ್ನಲಾಗುತ್ತದೆ.

ಇದನ್ನೂ ಓದಿ: Donkey killings: ಪ್ರತಿ ವರ್ಷ 59 ​​ಲಕ್ಷ ಕತ್ತೆಗಳು ಸಾಯುತ್ತಿವೆ, ಕಾರಣ ತಿಳಿದರೆ ಬೆಚ್ಚಿಬೀಳುತ್ತೀರಾ..!

ಬುಡಕಟ್ಟಿನ ಮತ್ತೊಂದು ಸಂಪ್ರಾದಯ

ಈ ಜನಾಂಗವರ ಮತ್ತೊಂದು ಅಚ್ಚರಿ ವಿಷಯವೆಂದರೆ, ಈ ಬುಡಕಟ್ಟಿನಲ್ಲಿ ಮಗುವಿನ ಜನನದ ನಂತರ ಜನ್ಮ ದಿನಾಂಕವನ್ನು ಪರಿಗಣಿಸಲಾಗುವುದಿಲ್ಲ. ಬದಲಿಗೆ ಬುಡಕಟ್ಟಿನ ಯಾವುದೇ ಮಹಿಳೆ ಸಂತಾನೋತ್ಪತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿದ ಕ್ಷಣದಿಂದ ಮಗುವಿನ ಜನನವನ್ನು ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಆದಿವಾಸಿ ಮಹಿಳೆಯರು ತಾಯಂದಿರಾಗಬೇಕಾದರೆ ಮಕ್ಕಳ ಹಾಡುಗಳನ್ನು ಕೇಳಬೇಕು ಎಂದು ಬುಡಕಟ್ಟು ಮುಖಂಡರು ಸಲಹೆ ನೀಡುತ್ತಾರೆ. ಇದಾದ ನಂತರ ಮಹಿಳೆ ಮರದ ಕೆಳಗೆ ಕುಳಿತು ಮಕ್ಕಳ ಹಾಡುಗಳನ್ನು ಕೇಳುತ್ತಾಳೆ. ಮಹಿಳೆ ಗರ್ಭಿಣಿಯಾದಾಗ, ಅವಳು ಇತರ ಬುಡಕಟ್ಟು ಮಹಿಳೆಯರಿಗೆ ಈ ಹಾಡನ್ನು ಕಲಿಸುತ್ತಾಳೆ. ಆಗಲೂ ಇತರ ಮಹಿಳೆಯರು ಮಗುವಿನ ಜನನದ ಸಮಯದಲ್ಲಿ ಮಹಿಳೆಗೆ ಅದೇ ಹಾಡನ್ನು ಹಾಡುತ್ತಾರೆ. ಹುಟ್ಟಿನಿಂದ ಸಾಯುವವರೆಗೂ ಮಗುವಿಗೆ ಅದೇ ಹಾಡನ್ನು ಕೇಳಿಸಲಾಗುತ್ತದೆ.

ಇದನ್ನೂ ಓದಿ: El Salvador Tax: ನೀವು ಈ ದೇಶಕ್ಕೆ ಹೋಗಬೇಕಾದರೆ ಒಂದು ಲಕ್ಷ ರೂಪಾಯಿ ತೆರಿಗೆ ಕಟ್ಟಬೇಕು..!

ಪತ್ನಿಯನ್ನು ಅತಿಥಿಗೆ ಹಸ್ತಾಂತರಿಸುವ ಸಂಪ್ರದಾಯ

ಈ ಸಂಪ್ರದಾಯದ ಮತ್ತೊಂದು ಕೆಟ್ಟ ಆಚರಣೆಯೆಂದರೆ ಈ ಬುಡಕಟ್ಟು ಜನಾಂಗದವರ ಮನೆಗೆ ಯಾರೇ ಅತಿಥಿಗಳು ಬಂದರೂ ಅವರನ್ನು ಅತ್ಯಂತ ಆದರವಾಗಿ ನಡೆಸಿಕೊಳ್ಳಲಾಗುತ್ತದೆ. ಎಷ್ಟು ಆದರ ಎಂದರೆ ಅತಿಥಿಗಳನ್ನು ಸತ್ಕರಿಸಲೆಂದು ಅತಿಥಿಯ ಕೋಣೆಗೆ ಮನೆಯ ಯಜಮಾನ ತನ್ನ ಹೆಂಡತಿಯನ್ನು ಕಳಿಸುತ್ತಾನೆ. ಆಕೆ ಅತಿಥಿ ಹೇಳಿದಂತೆ ಕೇಳಬೇಕು. ಹಿಂಬಾ ಸಂಪ್ರದಾಯದಲ್ಲಿ ಹೀಗೆ ಪತ್ನಿಯನ್ನು ಅತಿಥಿಗೆ ಹಸ್ತಾಂತರಿಸುವ ಸಂಪ್ರದಾಯಕ್ಕೂ ಕೆಲವು ಕಾರಣ ನೀಡಲಾಗಿದೆ. ಅತಿಥಿಗಳ ಕೋಣೆಗೆ ಹೆಂಡತಿಯನ್ನು ಕಳಿಸುವುದರಿಂದ ಅಸೂಯೆ ಕಡಿಮೆಯಾಗುತ್ತದೆ. 

(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News