Viral Video: ಗಾಜಾ ಮೇಲಿನ ಇಸ್ರೇಲ್ ದಾಳಿ ಖಂಡಿಸಿದ ಟರ್ಕಿ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತ!

Israel vs Gaza War: ಟರ್ಕಿಯ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿಯ ಸದಸ್ಯ ಹಸನ್ ಬಿಟ್ಮೆಜ್ ಅವರು ಭಾಷಣವನ್ನು ಪೂರ್ಣಗೊಳಿಸಿದ ಕೂಡಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ​

Written by - Puttaraj K Alur | Last Updated : Dec 13, 2023, 07:55 PM IST
  • ಗಾಜಾ ಮೇಲಿನ ಇಸ್ರೇಲ್ ದಾಳಿ ಖಂಡಿಸಿದ್ದ ಟರ್ಕಿ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತ
  • ಭಾಷಣ ಮಾಡುವಾಗ ಹೃದಯಾಘಾತವಾಗಿ ವೇದಿಕೆಯಲ್ಲಿ ಕುಸಿದುಬಿದ್ದ ಹಸನ್ ಬಿಟ್ಮೆಜ್
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಗಾಜಾ ಮೇಲಿನ ಇಸ್ರೇಲ್ ದಾಳಿ ಖಂಡಿಸಿದ ಟರ್ಕಿ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತ! title=
ಟರ್ಕಿ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತ!

ನವದೆಹಲಿ: ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿದ್ದ ಟರ್ಕಿಯ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತವಾಗಿರುವ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾಷಣ ಮಾಡುವಾಗ ಟರ್ಕಿ ಸಂಸದ ಹಸನ್ ಬಿಟ್ಮೆಜ್ ಅವರಿಗೆ ಹೃದಯಾಘಾತವಾಗಿದ್ದು, ವೇದಿಕೆಯಲ್ಲಿ  ಕುಸಿದು ಬಿದ್ದಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ನೆರೆದಿದ್ದ ಗಣ್ಯರು ಈ ಘಟನೆಯಿಂದ ಗಾಬರಿಯಾಗಿದ್ದರು. ಆದರೆ ಸಂಸದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: Congo Landslide: ಬುಕಾವು ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತ 14 ಮಂದಿ ಮೃತ

ಟರ್ಕಿಯ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿಯ ಸದಸ್ಯ ಹಸನ್ ಬಿಟ್ಮೆಜ್ ಅವರು ಭಾಷಣವನ್ನು ಪೂರ್ಣಗೊಳಿಸಿದ ಕೂಡಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಹಸನ್ ಬಿಟ್ಮೆಜ್ ಅವರು ಭಾಷಣದ ಬಳಿಕ ಮೂರ್ಛೆ ಹೋದರು. ‘ನೀವು ಅಲ್ಲಾನ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮೆಲ್ಲರಿಗೂ ವಂದಿಸುತ್ತೇನೆ’ ಅಂತಾ ಹೇಳಿದ ಬಳಿಕ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಹೀಗಾಗಿ ಅವರು ನಿಂತಲ್ಲಿಂದಲೇ ಕುಸಿದು ಕೆಳಗಡೆ ಬಿದ್ದಿದ್ದಾರೆ. ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದ್ದು, ICUಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:  ಪೆಪ್ಸಿ ಹೆಸರಿನ ಹಿಂದಿನ ರಹಸ್ಯವೇನು ಗೊತ್ತೇ? ಈ ಡ್ರಿಂಕ್‌ನ ಹಳೆಯ ಹೆಸರು ಆಶ್ಚರ್ಯಕರವಾಗಿದೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News