ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; 6.8 ತೀವ್ರತೆ ದಾಖಲು

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರ ಬಿಂದುವು ಸುಮಾರು 23:46 ಯುಟಿಸಿಯಲ್ಲಿ ಸಂಭವಿಸಿದೆ.

Last Updated : Sep 26, 2019, 10:35 AM IST
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; 6.8 ತೀವ್ರತೆ ದಾಖಲು title=

ವಾಷಿಂಗ್ಟನ್: ಮಧ್ಯ ಇಂಡೋನೇಷ್ಯಾದಲ್ಲಿ ಗುರುವಾರ 6.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ತೀವ್ರ ಹಾನಿಗೊಳಗಾಗಿವೆ.

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರ ಬಿಂದುವು ಸುಮಾರು 23:46 ಯುಟಿಸಿಯಲ್ಲಿ ಸಂಭವಿಸಿದ್ದು, ಮಧ್ಯ ಇಂಡೋನೇಷ್ಯಾದ ಮಾಲುಕು ಪ್ರಾಂತ್ಯದ ಸೆರಾಮ್ ದ್ವೀಪಗಳ ಬಳಿ ಸುಮಾರು 8 ಕಿಲೋಮೀಟರ್ ದೂರದಲ್ಲಿ 29.9 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. 

ಭೂಕಂಪದ ಪರಿಣಾಮವಾಗಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದರೆ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ.

2018ರ ಸೆಪ್ಟೆಂಬರ್ ನಲ್ಲಿ ಮಾಲುಕು ಬಳಿಯ ಸುಲಾವೆಸಿ ದ್ವೀಪದಲ್ಲಿ ಸಂಭವಿಸಿದ 7.5 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಸುಮಾರು 4000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.

Source: ANI

Trending News