Nepal Earthquake: ನೇಪಾಳದಲ್ಲಿ 6.6 ತೀವ್ರತೆಯ ಭೂಕಂಪ- ದೆಹಲಿ-ಎನ್‌ಸಿಆರ್‌ನಲ್ಲಿಯೂ ನಡುಗಿದ ಭೂಮಿ

Nepal Earthquake: ನೇಪಾಳದಲ್ಲಿ ಇಂದು ಮುಂಜಾನೆ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಕನಿಷ್ಠ ಆರು ಸಾವುನೋವುಗಳು ವರದಿಯಾಗಿವೆ. ಇದಲ್ಲದೆ, ಭಾರತದ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲ ಎನ್‌ಸಿಆರ್‌ನಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ.

Written by - Yashaswini V | Last Updated : Nov 9, 2022, 07:10 AM IST
  • ಇದಕ್ಕೂ ಮುನ್ನ ಜುಲೈ 31 ರಂದು, ಖೋಟಾಂಗ್ ಜಿಲ್ಲೆಯ ಮಾರ್ಟಿಮ್ ಬಿರ್ಟಾದ ಸುತ್ತಲೂ ನೇಪಾಳದ ಕಠ್ಮಂಡುವಿನ 147 ಕಿಮೀ ಇಎಸ್ಇ IST ಬೆಳಿಗ್ಗೆ 8.13 ಗಂಟೆಗೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ.
  • ಅಕ್ಟೋಬರ್ 19 ರಂದು ಕಠ್ಮಂಡುವಿನಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು.
  • NCS ಪ್ರಕಾರ, ಭೂಕಂಪವು ಕಠ್ಮಂಡುವಿನಿಂದ ಪೂರ್ವಕ್ಕೆ 53 ಕಿಲೋಮೀಟರ್ ದೂರದಲ್ಲಿ ಮಧ್ಯಾಹ್ನ 2:52 ರ ಸುಮಾರಿಗೆ ಸಂಭವಿಸಿದೆ.
Nepal Earthquake: ನೇಪಾಳದಲ್ಲಿ 6.6 ತೀವ್ರತೆಯ ಭೂಕಂಪ- ದೆಹಲಿ-ಎನ್‌ಸಿಆರ್‌ನಲ್ಲಿಯೂ ನಡುಗಿದ ಭೂಮಿ  title=
Nepal earthquake

 Nepal Earthquake: ನೇಪಾಳದಲ್ಲಿ ಬುಧವಾರ ಮುಂಜಾನೆ 6.6 ತೀವ್ರತೆಯ ಭೂಕಂಪ ಸಂಭವಿಸಿದೆ . ಎಎನ್‌ಐ ವರದಿಯ ಪ್ರಕಾರ, ಭೂಕಂಪದಿಂದ ಕನಿಷ್ಠ 6 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರದ (NSC) ಪ್ರಕಾರ, ನೇಪಾಳದ ದೂರದ-ಪಶ್ಚಿಮ ಪ್ರದೇಶವು ಮೂರು ಕಂಪನಗಳಿಗೆ ಸಾಕ್ಷಿಯಾಗಿದೆ - 2 ಭೂಕಂಪಗಳು ಮತ್ತು 1 ನಂತರದ ಆಘಾತಗಳು. ಮೂರನೇ ಅಪಘಾತದಲ್ಲಿ ಮನೆ ಕುಸಿದು ಜೀವಹಾನಿಗೆ ಕಾರಣವಾಗಿದೆ ಎನ್ನಲಾಗಿದೆ.

ಮಂಗಳವಾರ ರಾತ್ರಿ 9:07 ಕ್ಕೆ (ಸ್ಥಳೀಯ ಕಾಲಮಾನ) 5.7 ತೀವ್ರತೆಯ ಮೊದಲ ಭೂಕಂಪವನ್ನು ದಾಖಲಿಸಲಾಯಿತು ಮತ್ತು ನಂತರ 9:56 ಕ್ಕೆ (ಸ್ಥಳೀಯ ಕಾಲಮಾನ) 4.1 ತೀವ್ರತೆಯ ಭೂಕಂಪ ದಾಖಲಾಗಿದೆ. 

ಬುಧವಾರ (ನವೆಂಬರ್ 9) ಮುಂಜಾನೆ 02:12 (ಸ್ಥಳೀಯ ಕಾಲಮಾನ) ಸುಮಾರಿಗೆ 6.6 ತೀವ್ರತೆಯ ಮೂರನೇ ಬಲವಾದ ಕಂಪನದಿಂದಾಗಿ ಗೈರಾಗೌನ್‌ ಪ್ರದೇಶದಲ್ಲಿ ಮನೆ ಕುಸಿದಿದ್ದು ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ಪುರ್ಬಿಚೌಕಿ ಗ್ರಾಮದ ಅಧ್ಯಕ್ಷ ರಾಮ್ ಪ್ರಸಾದ್ ಉಪಾಧ್ಯಾಯ ಹೇಳಿದ್ದಾರೆ. ಬಳಿಕ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- ಕೊನೆಗೂ ಬಯಲಾಯ್ತು ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಸಾವಿನ ರಹಸ್ಯ! ಇಲ್ಲಿದೆ ನೋಡಿ ಸಮಾಧಿ ಸ್ಥಳ

ಭಾರತದಲ್ಲಿಯೂ ಕಂಪಿಸಿದ ಭೂಮಿ:
ನೆರೆ ರಾಷ್ಟ್ರದಲ್ಲಿ ತೀವ್ರ ಭೂಕಂಪದ ಬೆನ್ನಲ್ಲೇ ಭಾರತದ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ.  

ನೇಪಾಳದಲ್ಲಿ ಜುಲೈ, ಅಕ್ಟೋಬರ್ ತಿಂಗಳಲ್ಲೂ ಭೂಕಂಪ ಸಂಭವಿಸಿತ್ತು:
ಇದಕ್ಕೂ ಮುನ್ನ ಅಕ್ಟೋಬರ್ 19 ರಂದು ಕಠ್ಮಂಡುವಿನಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. NCS ಪ್ರಕಾರ, ಭೂಕಂಪವು ಕಠ್ಮಂಡುವಿನಿಂದ ಪೂರ್ವಕ್ಕೆ 53 ಕಿಲೋಮೀಟರ್ ದೂರದಲ್ಲಿ ಮಧ್ಯಾಹ್ನ 2:52 ರ ಸುಮಾರಿಗೆ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 10 ಕಿ.ಮೀ. ಎನ್ನಲಾಗಿತ್ತು.

ಜುಲೈ 31 ರಂದು, ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ (NEMRC) ಪ್ರಕಾರ, ಖೋಟಾಂಗ್ ಜಿಲ್ಲೆಯ ಮಾರ್ಟಿಮ್ ಬಿರ್ಟಾದ ಸುತ್ತಲೂ ನೇಪಾಳದ ಕಠ್ಮಂಡುವಿನ 147 ಕಿಮೀ ಇಎಸ್ಇ IST ಬೆಳಿಗ್ಗೆ 8.13 ಗಂಟೆಗೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ಆಳವನ್ನು ಪೂರ್ವ ನೇಪಾಳದಲ್ಲಿ 10 ಕಿಲೋಮೀಟರ್‌ನಲ್ಲಿ ಮೇಲ್ವಿಚಾರಣೆ ಮಾಡಲಾಯಿತು, ಇದು 27.14 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 86.67 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ- ಕೊನೆಗೂ ಬಯಲಾಯ್ತು ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಸಾವಿನ ರಹಸ್ಯ! ಇಲ್ಲಿದೆ ನೋಡಿ ಸಮಾಧಿ ಸ್ಥಳ

2015ರಲ್ಲಿ ಭೂಕಂಪದಿಂದ ಸಾವಿರಾರು ಪ್ರಾಣಹಾನಿ:
ರಾಜಧಾನಿ ಮಧ್ಯ ನೇಪಾಳದ ನಡುವೆ 2015 ರಲ್ಲಿ, ರಿಕ್ಟರ್ ಮಾಪಕದಲ್ಲಿ 7.8 ರ ತೀವ್ರತೆಯ ಪ್ರಬಲ ಭೂಕಂಪ ಅಪ್ಪಳಿಸಿತ್ತು. ಈ ಘಟನೆಯಲ್ಲಿ ಕಠ್ಮಂಡು ಮತ್ತು ಪೋಖರಾ ನಗರದಲ್ಲಿ 8,964 ಜನರು ಸಾವನ್ನಪ್ಪಿದ್ದರೆ ಮತ್ತು 22,000 ಜನರು ಗಾಯಗೊಂಡಿದ್ದರು. 

ಗೂರ್ಖಾ ಭೂಕಂಪ ಎಂದು ಕರೆಯಲ್ಪಡುವ ಭೂಕಂಪವು ಉತ್ತರ ಭಾರತದಾದ್ಯಂತ ಹಲವಾರು ನಗರಗಳನ್ನು ನಡುಗಿಸಿತು. ಪಾಕಿಸ್ತಾನದ ಲಾಹೋರ್, ಟಿಬೆಟ್‌ನ ಲಾಸಾ ಮತ್ತು ಬಾಂಗ್ಲಾದೇಶದ ಢಾಕಾದಲ್ಲೂ ಕಂಪನದ ಅನುಭವವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

  

Trending News