Viral Video: ಎಪ್ಪೋ... ! 3 ಕೆಜಿ ತೂಕದ ಒಂದು ಬಾಳೆಹಣ್ಣು, ನೀವೆಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ವಿಡಿಯೋ ನೋಡಿ..

Trending Video: ಬಾಳೆಹಣ್ಣು ಬಹುತೇಕ ಜನರಿಗೆ ಇಷ್ಟವಾಗುವ ಹಣ್ಣುಗಳಲ್ಲಿ ಒಂದು. ಬಾಳೆಯನ್ನು ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಹೀಗಾಗಿ ಬಾಳೆ ಹಣ್ಣನ್ನು ನೀವೆಲ್ಲರೂ ಹಲವು ಬಾರಿ ನೋಡಿರಬಹುದು, ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋದಲ್ಲಿನ ಬಾಳೆ ಹಣ್ಣನ್ನು ನೋಡಿ ನೀವೂ ಕೂಡ ಒಂದು ಕ್ಷಣ ನಿಬ್ಬೇರಗಾಗುವಿರಿ.   

Written by - Nitin Tabib | Last Updated : Mar 23, 2023, 03:48 PM IST
  • ಅದೇನೇ ಇದ್ದರೂ ಪ್ರಸ್ತುತ ವಿಶ್ವದ ಅತಿ ದೊಡ್ಡ ಬಾಳೆಹಣ್ಣಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
  • ಈ 38 ಸೆಕೆಂಡುಗಳ ವೀಡಿಯೊವನ್ನು 88 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಒಬ್ಬ ಬಳಕೆದಾರರು ಇಷ್ಟು ದೊಡ್ಡ ಬಾಳೆಹಣ್ಣು ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಕಾಮೆಂಟ್ ಮಾಡಿದರೆ,
  • ಇನ್ನೊಬ್ಬರು ಒಳ್ಳೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಬರೆದಿದ್ದಾರೆ.
Viral Video: ಎಪ್ಪೋ... ! 3 ಕೆಜಿ ತೂಕದ ಒಂದು ಬಾಳೆಹಣ್ಣು, ನೀವೆಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ? ವಿಡಿಯೋ ನೋಡಿ..  title=
ವಿಶ್ವದ ಅತಿದೊಡ್ಡ ಬಾಳೆಹಣ್ಣು!

Viral Video:  ದೇಹಕ್ಕೆ ತ್ವರಿತವಾಗಿ ಶಕ್ತಿ ಬೇಕು ಅಥವಾ ಏನಾದರೂ ಆರೋಗ್ಯಕರವಾಗಿರುವುದನ್ನು ಸೇವಿಸಬೇಕು ಎಂದರೆ, ಹೆಚ್ಚಿನ ಜನರು ಬಾಳೆಹಣ್ಣು ತಿನ್ನಲು ಇಷ್ಟಪಡುತ್ತಾರೆ. ಆದರೆ ಇಂದು ನಾವು ನಿಮಗೆ ನಾವು ನಿಮಗೆ ಒಂದು ಬಾಳೆಹಣ್ಣಿನ ಪರಿಚಯವನ್ನು ಮಾಡಿಕೊಡುತ್ತಿದ್ದು, ಈ ಬಾಳೆಹಣ್ಣನ್ನು ನೋಡಿ ನೀವೂ ಕೂಡ ಒಂದು ಕ್ಷಣ ನಿಬ್ಬೆರಗಾಗುವಿರಿ. ಏಕೆಂದರೆ ಒಬ್ಬ ವ್ಯಕ್ತಿ  ಈ ಸಂಪೂರ್ಣ ಬಾಳೆಹಣ್ಣನ್ನು ಮುಗಿಸಲು ಸಾಧ್ಯವಿಲ್ಲ. ಇಂದು ನಾವು ನಿಮಗೆ ವಿಶ್ವದ ಅತಿದೊಡ್ಡ ಬಾಳೆಹಣ್ಣಿನ ವೀಡಿಯೊವನ್ನು ತೋರಿಸುತ್ತಿದ್ದೇವೆ, ಇದರ ತೂಕ ಒಂದು ಚಿಕ್ಕ ಮಗುವಿನ ತೂಕಕ್ಕೆ ಸಮನಾಗಿರುತ್ತದೆ ಮತ್ತು ಅದನ್ನು ತಿನ್ನುವುದು ಯಾವುದೇ ಮನುಷ್ಯನ ಸಾಮರ್ಥ್ಯದ ವಿಷಯವಲ್ಲ. ಹಾದಾದರೆ, ತಡಮಾಡದೆ  ನೀವೂ ಕೂಡ ಈ ದೈತ್ಯ ಬಾಳೆಹಣ್ಣಿನ ವಿಡಿಯೋವನ್ನು ಒಮ್ಮೆ ನೋಡಿಯೇ ಬಿಡಿ.

ಇದನ್ನೂ ಓದಿ- Viral Video: ಇಂತಹ ಲಿಪ್ ಲಾಕ್ ಸೀನ್ ನೀವು ನಿಮ್ಮ ಲೈಫಲ್ಲೇ ನೋಡಿರ್ಲಿಕ್ಕಿಲ್ಲ! ವಿಡಿಯೋ ನೋಡಿ...​

ಚಿಕ್ಕ ಮಗುವಿನ ತೂಕಕ್ಕೆ ಸಮಾನ
ಮನಕ್ ಗುಪ್ತಾ ಎಂಬ ಬಳಕೆದಾರರು ಅತಿದೊಡ್ಡ ಬಾಳೆಹಣ್ಣಿನ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಈ ದೊಡ್ಡ ಬಾಳೆಹಣ್ಣನ್ನು ಹಿಡಿದುಕೊಂಡು ಅದನ್ನು ತಿನ್ನಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು.  ಆದರೆ ಅದನ್ನು ಸಂಪೂರ್ಣವಾಗಿ ತಿನ್ನುವುದು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಈ ವೀಡಿಯೊದಲ್ಲಿ ಆಸ್ಟ್ರೇಲಿಯಾದ ಪಪುವಾ ನ್ಯೂಗಿನಿಯಾ ದ್ವೀಪದ ಕೆಲವು ತುಣುಕುಗಳನ್ನು ತೋರಿಸಲಾಗಿದೆ, ಅಲ್ಲಿ ಈ ರೀತಿಯ ಬಾಳೆ ಗಿಡಗಳನ್ನು ಬೆಳೆಸಲಾಗುತ್ತದೆ ಮತ್ತು ಅದರಲ್ಲಿ ಅದರಲ್ಲಿ ಬರುವ ಬಾಳೆ ಹಣ್ಣುಗಳು ಉದ್ದಳತೆ ಒಂದು ಮೊಳಕ್ಕೆ ಸಮನಾಗಿರುತ್ತದೆ.

ಇದನ್ನೂ ಓದಿ-Viral Video: ಕಾಗೆ ದಾಳಿಯಿಂದ ಫಜೀತಿಗೊಳಗಾದ ಯುವಕ, ಅಷ್ಟಕ್ಕೂ ಆತ ಮಾಡಿದ್ದೇನು? ವಿಡಿಯೋ ನೋಡಿ...

ಗಿನ್ನೆಸ್ ಪುಸ್ತಕದಲ್ಲಿ ದಾಖಲೆಯಾಗಿದೆ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ  ನ್ಯೂ ಪಪುವಾ ಗಿನಿಯಾದಿಂದ  ಬರುವ ಈ ಬಾಳೆಹಣ್ಣಿನ ಗಿಡಗಳನ್ನು ವಿಶ್ವದ ಅತಿ ದೊಡ್ಡ ಬಾಳೆ ಗಿಡ ಎಂದು ನಮೂಡಾಗಿದೆ. ಈ ಗಿಡದಲ್ಲಿ ಬರುವ ಬಾಳೆಹಣ್ಣಿನ ತೂಕ ಸುಮಾರು 3 ಕೆ.ಜಿ.ಯಷ್ಟಿದ್ದು, ಅಂದರೆ ಒಂದು ನವಜಾತ ಶಿಶುವಿಗೆ ಸಮ ಎಂದು ಹೇಳಲಾಗುತ್ತಿದೆ. ಆದರೆ, ಈ ಹಣ್ಣು ಹಣ್ಣಾಗಲು 5 ​​ವರ್ಷ ತೆಗೆದುಕೊಳ್ಳುವುದರಿಂದ ಇವುಗಳಿಗೆ ಹೆಚ್ಚಿನ ವ್ಯಾಪಾರ ಇಲ್ಲ. ಈ ಗಿಡದ ಕಾಂಡವು 15 ಮೀಟರ್ ಎತ್ತರದಲ್ಲಿದೆ ಮತ್ತು ಎಲೆಗಳು ಸಹ ನೆಲದಿಂದ 20 ಮೀಟರ್ ಎತ್ತರದಲ್ಲಿರುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!

ಅತಿದೊಡ್ಡ ಬಾಳೆಹಣ್ಣಿನ ವಿಡಿಯೋ ವೈರಲ್ ಆಗಿದೆ
ಅದೇನೇ ಇದ್ದರೂ ಪ್ರಸ್ತುತ ವಿಶ್ವದ ಅತಿ ದೊಡ್ಡ ಬಾಳೆಹಣ್ಣಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ 38 ಸೆಕೆಂಡುಗಳ ವೀಡಿಯೊವನ್ನು 88 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಒಬ್ಬ ಬಳಕೆದಾರರು ಇಷ್ಟು ದೊಡ್ಡ ಬಾಳೆಹಣ್ಣು ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಒಳ್ಳೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಬರೆದಿದ್ದಾರೆ. ಇನ್ನೊಂದೆಡೆ ಮತ್ತೊರ್ವ ಬಳಕೆದಾರರು 5 ವರ್ಷಗಳಲ್ಲಿ ಹಣ್ಣಾಗುವ ಈ ಬಾಳೆಹಣ್ಣು ತಿನ್ನಲು ಕನಿಷ್ಠ 5 ದಿನಗಳು ಬೇಕು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News