ಇಡೀ ಮೆಕ್ಸಿಕೊ ನಗರವನ್ನೇ ಬೆಚ್ಚಿ ಬೀಳಿಸಿದ ಭೂಕಂಪ! ಏನಾಯ್ತು... ನೀವೇ ಈ ವೀಡಿಯೋ ನೋಡಿ

   

Last Updated : Feb 17, 2018, 11:17 AM IST
ಇಡೀ ಮೆಕ್ಸಿಕೊ ನಗರವನ್ನೇ ಬೆಚ್ಚಿ ಬೀಳಿಸಿದ ಭೂಕಂಪ! ಏನಾಯ್ತು... ನೀವೇ ಈ ವೀಡಿಯೋ ನೋಡಿ  title=

 ಹೌದು, ಈ ಪ್ರಬಲವಾದ ಭೂಕಂಪ ಶುಕ್ರವಾರದಂದು ಇಡಿ ಮೆಕ್ಸಿಕೋ ನಗರವನ್ನು ಬೆಚ್ಚಿಬೀಳಿಸಿದೆ. ಇದರಿಂದ  ಮೆಕ್ಸಿಕೋ ಸಿಟಿಯಲ್ಲಿರುವ ಕಟ್ಟಡಗಳು, ರಸ್ತೆ ಬದಿಯ ವಿದ್ಯುತ್ ಕಂಬಗಳು ಅಲುಗಾಡಿವೆ. ಮೆಕ್ಸಿಕೊದ ರಾಷ್ಟ್ರೀಯ ಭೂಕಂಪನಶಾಸ್ತ್ರ ಮಾಪನವು ಭೂಕಂಪನದ ಪ್ರಮಾಣವು ರಿಕ್ಟರ ಮಾಪನದಲ್ಲಿ 7.0 ರಲ್ಲಿತ್ತು ಎಂದು ಹೇಳಿದೆ ಮತ್ತು ಭೂಕಂಪದ ಅನುಭವವು ಹೆಚ್ಚಾಗಿ ಗುರೆರೊ, ಓಕ್ಸಾಕಾ ಮತ್ತು ಪುಯೆಬ್ಲಾ ರಾಜ್ಯಗಳಲ್ಲಿಯೂ ಕಂಡುಬಂದಿದೆ ಎಂದು ತಿಳಿಸಿದೆ.

ಅಮೆರಿಕಾದ  ಭೂವೈಜ್ಞಾನಿಕ ಸಮೀಕ್ಷೆಯು ಪ್ರಾರಂಭದಲ್ಲಿ  7.5 ರಷ್ಟು ಭೂಕಂಪನದ ತೀವ್ರತೆ ಇದೆ ಎಂದು ತಿಳಿಸಿತ್ತು ಅನಂತರ ಅದನ್ನು 7.2 ಕ್ಕೆ ಇಳಿಸಿತು.ಭೂಕಂಪದ ಕೇಂದ್ರ ಬಿಂದು  ನೈಋತ್ಯ ರಾಜ್ಯದ ಓಕ್ಸಾಕದಲ್ಲಿರುವ ಪಿನೊಟೆಪಾ ಡೆ ಡಾನ್ ಲೂಯಿಸ್ನ ಈಶಾನ್ಯ ದಿಕ್ಕಿಗೆ 37 ಕಿಲೋಮೀಟರ್ (22 ಮೈಲುಗಳು) ದೂರದಲ್ಲಿದೆ ಎಂದು ಅದು ತಿಳಿಸಿದೆ. ಈ ಹಿಂದೆ ಮಧ್ಯ ಮತ್ತು ದಕ್ಷಿಣ ಮೆಕ್ಸಿಕೊದಲ್ಲಿ ಭೂಕಂಪದಿಂದಾಗಿ ನೂರಾರು ಜನರು ಮೃತಪಟ್ಟ ಘಟನೆ ನಡೆದಿತ್ತು, ಈಗ ಮತ್ತೆ 6 ತಿಂಗಳೊಳಗೆ ಭೂಕಂಪ ಸಂಭವಿಸಿರುವುದು ಈ ಭಾಗದ ಜನರಲ್ಲಿ ಭಯಭೀತಿಯನ್ನುಂಟು ಮಾಡಿದೆ. 

ಕಳೆದ ವರ್ಷ ಓಕ್ಸಾಕದಲ್ಲಿ ಸೆಪ್ಟಂಬರ್ 7 ರಂದು 8.2 ರಷ್ಟು ತೀವ್ರತೆಯ ಭೂಕಂಪೊಂದು 96 ಜನರನ್ನು ಬಲಿತೆಗೆದುಕೊಂಡಿತ್ತು. ಅದೇ ರೀತಿಯಾಗಿ 1985 ರಲ್ಲಿ ಉಂಟಾದ ಭೂಕಂಪಕ್ಕೆ ಸುಮಾರು 10,000ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಮೆಕ್ಸಿಕೋ ಪ್ರಮುಖವಾಗಿ ಭೂಕಂಪ ವಲಯ ಕೇಂದ್ರದಲ್ಲಿ ಇರುವುದರಿಂದ ಇಲ್ಲಿ ಹೆಚ್ಚಾಗಿ ಭೂಕಂಪನಗಳು ಉಂಟಾಗುತ್ತವೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.  

Trending News