ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ವಿಮಾನಯಾನ ರದ್ದುಗೊಳಿಸಿದ ಎಮರೈಟ್ಸ್

 ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ತೆರಳುವ ಎಲ್ಲಾ ವಿಮಾನಗಳನ್ನು ದುಬೈನ ಎಮರೈಟ್ಸ್ ಏರ್ಲೈನ್ಸ್ ರದ್ದುಗೊಳಿಸಿದೆ. 

Last Updated : Feb 27, 2019, 04:49 PM IST
ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ವಿಮಾನಯಾನ ರದ್ದುಗೊಳಿಸಿದ ಎಮರೈಟ್ಸ್ title=

ದುಬೈ: ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ತೆರಳುವ ಎಲ್ಲಾ ವಿಮಾನಗಳನ್ನು ದುಬೈನ ಎಮರೈಟ್ಸ್ ಏರ್ಲೈನ್ಸ್ ರದ್ದುಗೊಳಿಸಿದೆ. 

ಈ ಬಗ್ಗೆ ರಾಯ್ಟರ್ಸ್ ಗೆ ಮಾಹಿತಿ ನೀಡಿರುವ ಏರ್ಲೈನ್ಸ್ ವಕ್ತಾರೆ, ಎರಡೂ ದೇಶಗಳಲ್ಲಿ ವಾಯುಯಾನ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ತೆರಳುವ ಹಾಗೂ ಅಲ್ಲಿಂದ ಆಗಮಿಸುವ ಎಲ್ಲಾ ವಿಮಾನಯಾನ ಸೇವೆಯನ್ನು ಬುಧವಾರ ಮತ್ತು ಗುರುವಾರ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಬಹ್ರೇನ್ ನ ರಾಷ್ಟ್ರಿಯ ವಿಮಾನಯಾನ ಸಂಸ್ಥೆ ಗಲ್ಫ್ ಏರ್ ಸಹ ಬುಧವಾರ ಪಾಕಿಸ್ತಾನಕ್ಕೆ ಹೋಗುವ ಮತ್ತು ಬರುವ ಎಲ್ಲಾ ವಿಮಾನಗಳನ್ನು ನಿಷೇಧಿಸಿದೆ. 

Trending News