IMF Predicts India Growth: Corona ಮಹಾಮಾರಿಯ ನಡುವೆಯೂ ಭಾರತದ ಆರ್ಥಿಕ ವೃದ್ಧಿದರ ಚೀನಾಗಿಂತ ಉತ್ತಮವಾಗಿರಲಿದೆ: IMF

IMF Predicts India Growth - 2020ರಲ್ಲಿ ಭಾರತದ ಆರ್ಥಿಕತೆ ದಾಖಲೆಯ ಶೇಕಡಾ 8 ರಷ್ಟು ಕುಸಿದಿದೆ ಎಂದು ವಿಶ್ವ ಹಣಕಾಸು ನಿಧಿ ಹೇಳಿದೆ. ಆದರೆ ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆಯ ದರ ಶೇಕಡಾ 12.5 ರಷ್ಟಿರಲಿದೆ ಎಂದು ಹಣಕಾಸು ನಿಧಿ ತನ್ನ ಅಂದಾಜು ವ್ಯಕ್ತಪಡಿಸಿದೆ.

Written by - Nitin Tabib | Last Updated : Apr 6, 2021, 09:49 PM IST
  • 2020ರಲ್ಲಿ ಭಾರತದ ಆರ್ಥಿಕತೆ ದಾಖಲೆಯ ಶೇಕಡಾ 8 ರಷ್ಟು ಕುಸಿದಿದೆ .
  • ಆದರೆ ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆಯ ದರ ಶೇಕಡಾ 12.5 ರಷ್ಟಿರಲಿದೆ ಎಂದುಹಣಕಾಸು ನಿಧಿ.
  • ಅಂದರೆ ಭಾರತದ ಆರ್ಥಿಕ ಅಭಿವೃದ್ಧಿ ದರ ಚೀನಾಗಿಂತ ಉತ್ತಮವಾಗಿರಲಿದೆ ಎಂದ IMF.
IMF Predicts India Growth: Corona ಮಹಾಮಾರಿಯ ನಡುವೆಯೂ ಭಾರತದ ಆರ್ಥಿಕ ವೃದ್ಧಿದರ ಚೀನಾಗಿಂತ ಉತ್ತಮವಾಗಿರಲಿದೆ: IMF title=
IMF Predicts India Growth (File Photo)

ನವದೆಹಲಿ: IMF Predicts India Growth - 2021ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ.12.5ರಷ್ಟು ಇರಲಿದೆ ಎಂದು ಅಂತಾರಾಷ್ಟ್ರೀಯ ಮುದ್ರಾಕೋಶ ಹೇಳಿದೆ. ಭಾರತದ ಈ ಆರ್ಥಿಕ ವೃದ್ಧಿದರ ಚೀನಾಗಿಂತಲೂ ಹೆಚ್ಚಾಗಿರಲಿದೆ. ಆದರೆ, 2020 ರಲ್ಲಿ  ಕೊರೊನಾ ಮಹಾಮಾರಿಯ ಹೊರತಾಗಿಯೂ ಕೂಡ ಆರ್ಥಿಕ ಸ್ಥಿತಿ ಸಕಾರಾತ್ಮಕವಾಗಿರುವ ಏಕಮಾತ್ರ ದೇಶ ಎಂದರೆ ಅದು ಚೀನಾ ಆಗಿದೆ.  ಈ ಕುರಿತು ತನ್ನ ವಾರ್ಷಿಕ ಆರ್ಥಿಕ ಪರಿದೃಷ್ಯದಲ್ಲಿ ಹೇಳಿರುವ IMF, 2022 ರಲ್ಲಿ ಭಾರತೀಯ ಆರ್ಥಿಕ ಬೆಳವಣಿಗೆಯ ದರ ಶೇ. 6.9ಕ್ಕೆ ಬರಲಿದೆ ಎಂದು ಹೇಳಿದೆ. ವಿಶ್ವಬ್ಯಾಂಕ್ ನ ವಾರ್ಷಿಕ ಸಭೆಯ ಮೊದಲು ಹಣಕಾಸು ನಿಧಿ ತನ್ನ ಈ ವರದಿಯನ್ನು ಬಿಡುಗಡೆ ಮಾಡಿದೆ.

2020ರಲ್ಲಿ ಭಾರತದ ಆರ್ಥಿಕತೆ ದಾಖಲೆಯ ಶೇಕಡಾ 8 ರಷ್ಟು ಕುಸಿದಿದೆ ಎಂದು ವಿಶ್ವ ಹಣಕಾಸು ನಿಧಿ ಹೇಳಿದೆ. ಆದರೆ ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆಯ ದರ ಶೇಕಡಾ 12.5 ರಷ್ಟಿರಲಿದೆ ಎಂದು ಹಣಕಾಸು ನಿಧಿ ತನ್ನ ಅಂದಾಜು ವ್ಯಕ್ತಪಡಿಸಿದೆ. ಇನ್ನೊಂದೆಡೆ ಚೀನಾದ ವೃದ್ಧಿದರ 2021ರಲ್ಲಿ ಶೇ 8.6ರಷ್ಟು ಇರಲಿದ್ದು 2022 ರಲ್ಲಿ ಅದು ಶೇ.5.6 ರಷ್ಟು ಇರಲಿದೆ ಎಂದು ಅದು ಅಂದಾಜು ವ್ಯಕ್ತಪಡಿಸಿದೆ. ಕಳೆದ ವರ್ಷ ಚೀನಾದ ವಾರ್ಧಿಕ ವೃದ್ಧಿ ದರ ಶೇ.2.3 ರಷ್ಟಿತ್ತು ಹಾಗೂ ಕೊವಿಡ್-19 ಮಹಾಮಾರಿಯ ಕಾಲದಲ್ಲಿಯೂ ಕೂಡ ಸಕಾರಾತ್ಮಕ ಆರ್ಥಿಕ ವೃದ್ಧಿ ದರ ಸಾಧಿಸಿದ ವಿಶ್ವದ ಏಕಮಾತ್ರ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿತ್ತು.

ಈ ಕುರಿತು ಹೇಳಿಕೆ ನೀಡಿರುವ IMF ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥನ್, "ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಜಾಗತಿಕ ಆರ್ಥಿಕತೆಗೆ ಬಲವಾದ ಪುನಶ್ಚೇತನವನ್ನು ನಾವು ನಿರೀಕ್ಷಿಸುತ್ತೇವೆ. ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ದರವು 2021 ರಲ್ಲಿ ಶೇ.6 ರಷ್ಟು ಮತ್ತು 2022 ರಲ್ಲಿ ಶೇ. 4.4 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ" ಎಂದಿದ್ದಾರೆ. ಕಳೆದ ವರ್ಷ ಅಂದರೆ 2020 ರಲ್ಲಿ ಜಾಗತಿಕ ಆರ್ಥವ್ಯವಸ್ಥೆಯಲ್ಲಿ ಶೇ. 3.3ರಷ್ಟು ಇಳಿಕೆಯನ್ನು ಗಮನಿಸಲಾಗಿತ್ತು. ವರದಿಯ ಮುನ್ನುಡಿಯಲ್ಲಿ ಈ ಕುರಿತು ಬರೆದಿರುವ ಅವರು, ಸದ್ಯದ ಪರಿದೃಶ್ಯದಲ್ಲಿ  ಪುನರುದ್ಧಾರದ ಕುರಿತು ವಿಭಿನ್ನ ದೇಶಗಳು ಹಾಗೂ ದೇಶಗಳಲ್ಲಿ ಇರುವ ವೇಗ ವಿಭಿನ್ನವಾಗಿದೆ. ಇದಲ್ಲದೆ ಸಂಕಸ್ಥದ ಕಾರಣ ಆರ್ಥಿಕ ಹಾನಿಯ ಕುರಿತು ರಿಸ್ಕ್ ಇಂದಿಗೂ ಕೂಡ ಮುಂದುವರೆದಿದೆ. ಇದರಲ್ಲಿ ನಮ್ಮ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ.

ಇದನ್ನೂ ಓದಿ-Economic Growth Rate - 2021ರಲ್ಲಿ ಭಾರತದ ಆರ್ಥಿಕ ವಿಕಾಸ ದರ ಶೇ.11.5 ರಷ್ಟು ಇರಲಿದೆ: IMF

ವರದಿಯ ಪ್ರಕಾರ, 2020 ರಲ್ಲಿ ಜಾಗತಿಕ ಆರ್ಥಿಕತೆ ಕುಸಿತವು ಶೇ.3.3 ರಷ್ಟು ಕುಸಿದಿದ್ದು, ಅಕ್ಟೋಬರ್ 2020 ರಲ್ಲಿ ಬಿಡುಗಡೆಯಾದ ವಿಶ್ವ ಆರ್ಥಿಕ ಸನ್ನಿವೇಶದ ಅಂದಾಜುಗಿಂತ 1.1 ಶೇಕಡಾ ಕಡಿಮೆಯಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ 'ಲಾಕ್‌ಡೌನ್' ಸಡಿಲಗೊಂಡ ನಂತರ ಬೆಳವಣಿಗೆಯ ದರವು ನಿರೀಕ್ಷೆಗಿಂತ ಉತ್ತಮವಾಗಿದೆ ಎಂದು ಇದು ಸೂಚಿಸುತ್ತದೆ. ಅಲ್ಲದೆ, ಆರ್ಥಿಕತೆಯ ಹೊಸ ಪ್ರವೃತ್ತಿಯನ್ನು ಒಪ್ಪಿಕೊಂಡಿದೆ ಎಂದು ಇದು ತೋರಿಸುತ್ತದೆ.

ಇದನ್ನೂ ಓದಿ- Agriculture Laws - ಕೃಷಿ ಕಾನೂನುಗಳನ್ನು ಮುಕ್ತ ಕಂಠದಿಂದ ಹೊಗಳಿದ IMF...ಹೇಳಿದ್ದೇನು?

ವರದಿಯ ಪ್ರಕಾರ, 2020 ರ ಅಕ್ಟೋಬರ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸನ್ನಿವೇಶಕ್ಕಿಂತ 2021 ಮತ್ತು 2022 ರ ಅಂದಾಜುಗಳು ಕ್ರಮವಾಗಿ 0.8 ಮತ್ತು 0.2 ಶೇಕಡಾ ಹೆಚ್ಚಾಗಿದೆ. ಇದು ಕೆಲವು ದೊಡ್ಡ ಆರ್ಥಿಕತೆಗಳಲ್ಲಿ ಹಣಕಾಸಿನ ಬೆಂಬಲ ಮತ್ತು ವ್ಯಾಕ್ಸಿನೇಷನ್‌ನೊಂದಿಗೆ ಪುನಶ್ಚೇತನದ  ವೇಗವನ್ನು ಪ್ರತಿಬಿಂಬಿಸುತ್ತದೆ. ಮಧ್ಯಮ ಅವಧಿಯಲ್ಲಿ, ಜಾಗತಿಕ ಬೆಳವಣಿಗೆಯ ದರವು ಶೇಕಡಾ 3.3 ಕ್ಕೆ ಮೃದುವಾಗಬಹುದು ಎಂದು ಅದು ಹೇಳಿದೆ.

ಇದನ್ನೂ ಓದಿ-ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ದಾಖಲೆ ಪ್ರಮಾಣದ ಏರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News