1000 ದಿನಗಳಲ್ಲಿ 1000 ಹಾಡು, ಭಾರತೀಯ ಮಹಿಳೆಯಿಂದ ವಿಶ್ವ ದಾಖಲೆ

ವಿಶ್ವಾದ್ಯಂತ ನಿತ್ಯ ಹೊಸ ದಾಖಲೆಗಳು ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ಅನೇಕ ಹಾಡುಗಾರರೂ ಕೂಡ ಹೊಸ ಹೊಸ ದಾಖಲೆ ಬರೆಯುತ್ತಲೇ ಇದ್ದಾರೆ. ಈ ಮಧ್ಯೆ ಭಾರತೀಯ ಮೂಲದ ಮಹಿಳೆಯೋರ್ವರು ಗಾಯನದಲ್ಲಿ ವಿಶಿಷ್ಟ ದಾಖಲೆಯೊಂದನ್ನು ರಚಿಸಿದ್ದಾರೆ.

Last Updated : Jan 14, 2020, 06:32 PM IST
1000 ದಿನಗಳಲ್ಲಿ 1000 ಹಾಡು, ಭಾರತೀಯ ಮಹಿಳೆಯಿಂದ ವಿಶ್ವ ದಾಖಲೆ title=

ದುಬೈ: ವಿಶ್ವಾದ್ಯಂತ ನಿತ್ಯ ಹೊಸ ದಾಖಲೆಗಳು ನಿರ್ಮಾಣಗೊಳ್ಳುತ್ತಲೇ ಇರುತ್ತವೆ. ಅನೇಕ ಹಾಡುಗಾರರೂ ಕೂಡ ಹೊಸ ಹೊಸ ದಾಖಲೆ ಬರೆಯುತ್ತಲೇ ಇದ್ದಾರೆ. ಈ ಮಧ್ಯೆ ಭಾರತೀಯ ಮೂಲದ ಮಹಿಳೆಯೋರ್ವರು ಗಾಯನದಲ್ಲಿ ವಿಶಿಷ್ಟ ದಾಖಲೆಯೊಂದನ್ನು ರಚಿಸಿದ್ದಾರೆ. ಮಾಧ್ಯಮವೊಂದರ ವರದಿ ಪ್ರಕಾರ ದುಬೈನಲ್ಲಿ ವಾಸಿಸುವ ಭಾರತೀಯ ಮೂಲದ ಮಹಿಳೆ ಸಾವಿರ ದಿನಗಳಲ್ಲಿ ಸಾವಿರ ಹಾಡುಗಳನ್ನು ಹಾಡಿದ್ದಾರೆ. ಅಷ್ಟೇ ಅಲ್ಲ ಈ ಮಹಿಳೆ ತನ್ನ ಹೆಸರನ್ನೂ ಸಹ ಗೋಲ್ಡನ್ ಬುಕ್ ಆಫ್ ಗಿನ್ನಿಸ್ ರಿಕಾರ್ಡ್ ನಲ್ಲಿ ದಾಖಲಿಸಲು ಯಶಸ್ವಿಯಾಗಿದ್ದಾರೆ.

ವರದಿಗಳ ಪ್ರಕಾರ 48 ವರ್ಷದ ಸ್ವಪ್ನಾ ಅಬ್ರಹಾಂ ಅವರಿಗೆ ಇದಕ್ಕಾಗಿ ನಾಲ್ಕು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಸ್ವಪ್ನಾ ಮಾಡಿರುವ ಈ ವಿಶಿಷ್ಟ ದಾಖಲೆಯನ್ನು ಗೋಲ್ಡನ್ ಬುಕ್ ಆಫ್ ಗಿನ್ನಿಸ್ ರೆಕಾರ್ಡ್ಸ್ ಕೂಡ ಗುರುತಿಸಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ ಸ್ವಪ್ನಾ ಏಪ್ರಿಲ್ 8, 1917 ರಿಂದ ಜನವರಿ 2, 2020ರ ನಡುವೆ ಅಂದರೆ ಸುಮಾರು 1000 ದಿನಗಳಲ್ಲಿ 1000 ಹಾಡುಗಳನ್ನು ಹಾಡಿದ್ದಾರೆ. ಇವುಗಳಲ್ಲಿ ಸಾಹಿತ್ಯ, ಹಾಡುಗಳ ಲೈವ್ ಮೇಕಿಂಗ್, ಸಂಗೀತ ಸಂಯೋಜನೆ, ರಿಕಾರ್ಡಿಂಗ್ ಇತ್ಯಾದಿಗಳು ಶಾಮೀಲಾಗಿವೆ.

ಡಿಜಿಟಲ್ ಅಲ್ಬಮ್ ಗಳಲ್ಲಿಯೂ ಕೂಡ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಸ್ವಪ್ನಾ, ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್ಸ್ ನಲ್ಲಿಯೂ ಕೂಡ ತನ್ನ ಹೆಸರು ಬರೆಸಲು ಅರ್ಜಿ ದಾಖಲಿಸಿದ್ದಾರೆ. ದುಬೈನ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಸಪ್ನಾ ಕಳೆದ ಒಂದು ದಶಕವನ್ನು ವಿಶಿಷ್ಟ ರೀತಿಯಲ್ಲಿ ಹಾಗೂ ಅದರಲ್ಲೂ ವಿಶೇಷವಾಗಿ ಸಂಗೀತದ ಮೂಲಕ ಕೊನೆಗೊಳಿಸಲು ಬಯಸಿದ್ದರು ಎಂದು ಹೇಳಿದ್ದಾರೆ. ಹೀಗಾಗಿ ಸಾವಿರ ದಿನಗಳಲ್ಲಿ ತಾವು ಸಾವಿರ ಹಾಡುಗಳನ್ನು ಹಾಡಿರುವುದಾಗಿ ಸ್ವಪ್ನಾ ಹೇಳಿಕೊಂಡಿದ್ದಾರೆ. ಅವರು ತಮ್ಮ ಎಲ್ಲ ಈ ಹಾಡುಗಳನ್ನು ಯುಟ್ಯೂಬ್ ನಲ್ಲಿಯೂ ಕೂಡ ಅಪ್ಲೋಡ್ ಮಾಡಿದ್ದಾರೆ.

ಈ ಸಾಧನೆಯ ಕುರಿತು ಮಾತನಾಡುವ ಸ್ವಪ್ನಾ ವೃತ್ತಿಪರವಾಗಿ ಸಂಗೀತದ ಜೊತೆಗೆ 24 ವರ್ಷ ಸಂಪರ್ಕ ಹೊಂದಿದ ಬಳಿಕ ಮತ್ತು 22 ಅಲ್ಬಮ್ ಗಳಲ್ಲಿ ಕೆಲಸ ಮಾಡಿದ ಬಳಿಕವೂ ಕೂಡ ಓರ್ವ ಕಲಾವಿದೆ ಹಾಗೂ ಸಂಗೀತಗಾರ್ತಿಯಾಗಿ ನನ್ನಲ್ಲಿ ಅಪರಿಪೂರ್ಣತೆಯ ಭಾವನೆ ಹೆಚ್ಚಾಗುತ್ತಿದ್ದು, ಸಂಗೀತ ಕ್ಷೇತ್ರವನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ. ಗಲ್ಫ್ ನ್ಯೂಸ್ ಗೆ ನೀಡಿದ ಒಂದು ಸಂದರ್ಶನದಲ್ಲಿ ಸಂಗೀತ ಕ್ಷೇತ್ರ ತೊರೆಯುವುದಕ್ಕೂ ಮುನ್ನ ತಾವು ಕಠಿಣ ಕಾರ್ಯ ಮಾಡುವ ನಿರ್ಣಯ ತೆಗೆದುಕೊಂಡಿದ್ದು, ಈ ದಾಖಲೆ ಅದರದೇ ಒಂದು ಭಾಗವಾಗಿದೆ ಎಂದು ಸ್ವಪ್ನಾ ಹೇಳಿದ್ದಾರೆ.

Trending News