Pneumonia Outbreak in Pakistan: ಪಾಕಿಸ್ತಾನದ ಪಂಜಾಬ್‌ನಲ್ಲಿ 220 ಮಕ್ಕಳ ಸಾವು..! ಕಾರಣ ಏನ್‌ ಗೊತ್ತೆ..?

Children Pneumonia Deaths Pakistan : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ದುರಂತ ಸಂಭವಿಸಿದೆ.. ನ್ಯುಮೋನಿಯಾದಿಂದ ಸುಮಾರು 220 ಮಕ್ಕಳು ದಾರುಣ ಸಾವಾಗಿದೆ. ಈ ದುರಂತಕ್ಕೆ ಮುಖ್ಯ ಕಾರಣ ಹವಾಮಾನ ಬದಲಾವಣೆ. 

Written by - Krishna N K | Last Updated : Jan 27, 2024, 02:51 PM IST
  • ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ದುರಂತ ಸಂಭವಿಸಿದೆ.
  • ನ್ಯುಮೋನಿಯಾದಿಂದ ಸುಮಾರು 220 ಮಕ್ಕಳು ಸಾವನ್ನಪ್ಪಿದ್ದಾರೆ.
  • ಕೇವಲ ಮೂರು ವಾರಗಳಲ್ಲಿ 220 ಮಕ್ಕಳು ಸಾವನ್ನಪ್ಪಿದ್ದಾರೆ.
Pneumonia Outbreak in Pakistan: ಪಾಕಿಸ್ತಾನದ ಪಂಜಾಬ್‌ನಲ್ಲಿ 220 ಮಕ್ಕಳ ಸಾವು..! ಕಾರಣ ಏನ್‌ ಗೊತ್ತೆ..? title=

Pakistan Cold Weather Child Fatalities : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನ್ಯುಮೋನಿಯಾದಿಂದ ಸುಮಾರು 220 ಮಕ್ಕಳು ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಮುಖ್ಯ ಕಾರಣ ಹವಾಮಾನ ಬದಲಾವಣೆ. ವಿಪರೀತ ಚಳಿಯಿಂದಾಗಿ 10,250 ನ್ಯುಮೋನಿಯಾ ಸಾವುಗಳು ವರದಿಯಾಗಿದೆ. ಇವರೆಲ್ಲರೂ ಐದು ವರ್ಷದೊಳಗಿನ ಮಕ್ಕಳು ಎಂಬುದು ಗಮನಾರ್ಹ. ಕೇವಲ ಮೂರು ವಾರಗಳಲ್ಲಿ 220 ಮಕ್ಕಳು ಸಾವನ್ನಪ್ಪಿದ್ದಾರೆ.

ಪಂಜಾಬ್‌ನ ಉಸ್ತುವಾರಿ ಸರ್ಕಾರವು ಸತ್ತ ಮಕ್ಕಳಲ್ಲಿ ಹೆಚ್ಚಿನವರು ನ್ಯುಮೋನಿಯಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳದವರಿದ್ದಾರೆ ಎಂದು ತಿಳಿಸಿದೆ. ಇದಲ್ಲದೆ, ಅವರು ಅಪೌಷ್ಟಿಕತೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದೆ.  

ಇದನ್ನೂ ಓದಿ:  ಸಮುದ್ರದಲ್ಲಿ ಮುಳುಗಿ ನಾಲ್ವರು ಭಾರತೀಯರ ದುರ್ಮರಣ..!

ಪಂಜಾಬ್ ಪ್ರಾಂತ್ಯದ ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳ ಹೆಚ್ಚಳದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ನ್ಯುಮೋನಿಯಾದಿಂದ ಮಕ್ಕಳನ್ನು ರಕ್ಷಿಸಲು ಆರಂಭಿಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವು ಹಿರಿಯ ವೈದ್ಯರಿಗೆ ಸೂಚಿಸಿದೆ. ಅತಿಯಾದ ಶೀತ ವಾತಾವರಣದಿಂದ ಮಕ್ಕಳಲ್ಲಿ ನ್ಯುಮೋನಿಯಾ ವೇಗವಾಗಿ ಹೆಚ್ಚುತ್ತಿದೆ. 

ಪಂಜಾಬ್‌ನಲ್ಲಿನ ವಿಸ್ತರಿತ ರೋಗನಿರೋಧಕ ಕಾರ್ಯಕ್ರಮದ ನಿರ್ದೇಶಕ ಮುಖ್ತಾರ್ ಅಹ್ಮದ್ ಮಾತನಾಡಿ, ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ಜನಿಸಿದ ಆರು ವಾರಗಳ ನಂತರ ಶಿಶುಗಳಿಗೆ ಆಂಟಿ ನ್ಯುಮೋನಿಯಾ ಲಸಿಕೆ ನೀಡಲಾಗುತ್ತದೆ. ಲಸಿಕೆ ಹಾಕಿದ ಶಿಶುಗಳು ಬ್ಯಾಕ್ಟೀರಿಯಾದ ಸೋಂಕಿನಿಂದ ಪಾರಾಗಬಹುದು. ಕಳೆದ ವರ್ಷ ಪಂಜಾಬ್ ಪ್ರಾಂತ್ಯದಲ್ಲೂ 990 ಮಕ್ಕಳು ನ್ಯುಮೋನಿಯಾದಿಂದ ಸಾವನ್ನಪ್ಪಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News