Yevgeny Prigozhin ಯಾರು? ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನೇರ ಚಾಲೆಂಜ್!

Who is Yevgeny Prigozhin : ರಷ್ಯಾದಲ್ಲಿ, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಸೈನ್ಯದ ವಿರುದ್ಧ ಬಂಡಾಯವೆದ್ದಿದ್ದಾರೆ. ಪುಟಿನ್‌ಗೆ ಸವಾಲೆಸೆದ ಅವರು, ಶೀಘ್ರದಲ್ಲೇ ರಷ್ಯಾಕ್ಕೆ ಹೊಸ ಅಧ್ಯಕ್ಷರು ಸಿಗುತ್ತಾರೆ ಎಂದು ಹೇಳಿದ್ದಾರೆ.  

Written by - Nitin Tabib | Last Updated : Jun 24, 2023, 06:46 PM IST
  • ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಘೋಷಿಸಿದ ಯೆವ್ಗೆನಿ ಪ್ರಿಗೊಜಿನ್ ವ್ಯಾಗ್ನರ್ ಖಾಸಗಿ ಸೈನ್ಯದ ಮುಖ್ಯಸ್ಥರಾಗಿದ್ದಾರೆ.
  • ಈ ಖಾಸಗೆ ಸೇನೆ ರಷ್ಯಾವನ್ನು ಅನೇಕ ರಂಗಗಳಲ್ಲಿ ಸುತ್ತುವರೆದಿದೆ ಮತ್ತು ಪ್ರಿಗೊಜಿನ್ ಸೈನ್ಯವು ಮಾಸ್ಕೋ ಕಡೆಗೆ ಚಲಿಸುತ್ತಿದೆ ಎಂದು ಹೇಳಲಾಗಿದೆ.
  • ಹಲವೆಡೆ ರಷ್ಯಾದ ಸೇನೆ ಮತ್ತು ವ್ಯಾಗ್ನರ್ ಯೋಧರ ನಡುವೆ ಭೀಕರ ಕಾಳಗ ನಡೆಯುತ್ತಿದೆ.
Yevgeny Prigozhin ಯಾರು? ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನೇರ ಚಾಲೆಂಜ್! title=

Who is Yevgeny Prigozhin: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಒಂದು ಕಾಲದಲ್ಲಿ ತುಂಬಾ ಆಪ್ತವಾಗಿದ್ದ ಖಾಸಗಿ ಸೇನಾ ಗುಂಪು ವ್ಯಾಗ್ನರ್ ಸೇನೆ ಪುಟಿನ್ ವಿರುದ್ಧ ಬಂಡಾಯ ಘೋಷಿಸಿದೆ. ಒಂದು ಕಾಲದಲ್ಲಿ ಪುಟಿನ್ ಅವರ ಮಾತಿಗೆ ತಕ್ಕಂತೆ ಕುಣಿದಾಡುತ್ತಿದ್ದ ವ್ಯಾಗ್ನರ್ ಈಗ ನೇರವಾಗಿ ಪುಟಿನ್ ಗೆ ಸವಾಲೆಸಗಿದೆ.  ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ರಷ್ಯಾ ಶೀಘ್ರದಲ್ಲೇ ಹೊಸ ಅಧ್ಯಕ್ಷರನ್ನು ಪಡೆಯಲಿದೆ  ಎಂದು ಹೇಳಿದ್ದಾರೆ. ಯೆವ್ಗೆನಿ ಪ್ರಿಗೊಜಿನ್ ಯಾರು ಮತ್ತು ಅವರ ಇತಿಹಾಸ ಏನು ಪುಟಿನ್‌ಗೆ ನೇರವಾಗಿ ಸವಾಲು ಹಾಕಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹಿಡಿಯಲು ಪ್ರಯತ್ನಿಸೋಣ ಬನ್ನಿ

ಅಧ್ಯಕ್ಷ ಪುಟಿನ್ ವಿರುದ್ಧ ದಂಗೆ ಘೋಷಿಸಿದ ಯೆವ್ಗೆನಿ ಪ್ರಿಗೊಜಿನ್ ವ್ಯಾಗ್ನರ್ ಖಾಸಗಿ ಸೈನ್ಯದ ಮುಖ್ಯಸ್ಥರಾಗಿದ್ದಾರೆ. ಈ ಖಾಸಗೆ ಸೇನೆ ರಷ್ಯಾವನ್ನು ಅನೇಕ ರಂಗಗಳಲ್ಲಿ ಸುತ್ತುವರೆದಿದೆ ಮತ್ತು ಪ್ರಿಗೊಜಿನ್ ಸೈನ್ಯವು ಮಾಸ್ಕೋ ಕಡೆಗೆ ಚಲಿಸುತ್ತಿದೆ ಎಂದು ಹೇಳಲಾಗಿದೆ. ಹಲವೆಡೆ ರಷ್ಯಾದ ಸೇನೆ ಮತ್ತು ವ್ಯಾಗ್ನರ್ ಯೋಧರ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಬಂಡುಕೋರರು ರಷ್ಯಾದ ರೊಸ್ಟೊವ್ ನಗರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ವ್ಯಾಗ್ನರ್ ಗ್ರೂಪ್ ರಷ್ಯಾದ ಖಾಸಗಿ ಸೈನ್ಯ ಎಂದು ಹೇಳಲಾಗುತ್ತದೆ. ಅದು ರಷ್ಯಾದ ಸೈನ್ಯದೊಂದಿಗೆ ಸೇರಿ ಉಕ್ರೇನ್‌ನಲ್ಲಿ ಯುದ್ಧವನ್ನೂ ಕೂಡ ನಡೆಸಿದೆ.

ಬಾಲ್ಯದಿಂದಲೂ ಅಪರಾಧಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನೇರ ಸವಾಲು ಎಸಗಿದೆ ಯೆವ್ಗೆನಿ ಪ್ರಿಗೊಝಿನ್ 1961 ರಲ್ಲಿ ಲೆನಿನ್ಗ್ರಾಡ್ನಲ್ಲಿ ಜನಿಸಿದ್ದಾರೆ. ಪ್ರಿಗೋಜಿನ್ ಅವರ ತಂದೆ ಬಾಲ್ಯದಲ್ಲಿ ನಿಧನರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಯೆವ್ಗೆನಿ ಪ್ರಿಗೊಜಿನ್ ಅವರ ತಾಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಯ ಸಮಯದಲ್ಲಿ, ಪ್ರಿಗೋಜಿನ್ ಕ್ರೀಡಾ ಅಕಾಡೆಮಿಗೆ ಸೇರಿದ್ದರು, ಕಠಿಣ ಪರಿಶ್ರಮದ ಹೊರತಾಗಿಯೂ, ಅವರು ಕ್ರೀಡಾಪಟುಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ಸಣ್ಣ ಅಪರಾಧಗಳನ್ನು ಮಾಡಲು ಪ್ರಾರಂಭಿಸಿದರು. ಅಪರಾಧದ ಕಾರಣಕ್ಕಾಗಿ ಅವರು ಜೈಲಿಗೆ ಹೋದರು. ದರೋಡೆ ಮತ್ತು ಡಕಾಯಿತಿ ಆರೋಪದ ಮೇಲೆ 13 ವರ್ಷಗಳ ಕಾಲ ಜೈಲಿನಲ್ಲಿದ್ದರು. ಸೋವಿಯತ್ ಒಕ್ಕೂಟದ ವಿಸರ್ಜನೆಯ ಸಮಯದಲ್ಲಿ ಅವರು 1990 ರಲ್ಲಿ ಜೈಲಿನಿಂದ ಬಿಡುಗಡೆಯಾದರು.

ಪುಟಿನ್ ಅವರನ್ನು ರೆಸ್ಟೋರೆಂಟ್‌ನಲ್ಲಿ ಭೇಟಿಯಾದರು
ಪ್ರಿಗೋಜಿನ್ ಜೈಲಿನಿಂದ ಹೊರಬಂದ ನಂತರ, ಅವರು ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಅನ್ನು ಸಹ ತೆರೆದರು. ಆ ವೇಳೆ ಉಪಮೇಯರ್ ಆಗಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಆ ರೆಸ್ಟೋರೆಂಟ್ ಗೆ ಬರುತ್ತಿದ್ದರು ಎನ್ನಲಾಗಿದೆ. ದೇಶದ ದೊಡ್ಡ ಉದ್ಯಮಿಗಳು, ಮುಖಂಡರು ಕೂಡ ರೆಸ್ಟೋರೆಂಟ್ ಗೆ ಬರುತ್ತಿದ್ದರು. ರೆಸ್ಟೋರೆಂಟ್‌ನಲ್ಲಿಯೇ ಪುಟಿನ್ ಮೊದಲ ಬಾರಿಗೆ ಪ್ರಿಗೋಜಿನ್ ಅವರನ್ನು ಭೇಟಿಯಾದರು ಎನ್ನಲಾಗುತ್ತದೆ, ಇದರ ನಂತರ ಪುಟಿನ್ ಮತ್ತು ಪ್ರಿಗೋಜಿನ್ ಅವರ ಸ್ನೇಹ ನಿಧಾನವಾಗಿ ಬೆಳೆಯಲು ಪ್ರಾರಂಭಿಸಿತು. ರಷ್ಯಾದಲ್ಲಿ, ಅಧಿಕೃತ ಅತಿಥಿಗಳಿಗೆ ಆಹಾರಕ್ಕಾಗಿ ಒಪ್ಪಂದಗಳನ್ನು ಪ್ರಿಗೋಜಿನ್ಗೆ ನೀಡಲಾಯಿತು.

ಪ್ರಿಗೋಜಿನ್ ಹಣದ ಹಿಂದೆ ಓಡುತ್ತಾರೆ
ಪ್ರಿಗೋಜಿನ್ ಹಣದ ಹಿಂದೆ ಓಡುವ ವ್ಯಕ್ತಿ ಎಂದು ಹೇಳಲಾಗುತ್ತದೆ. ಅವರು ಖಾಸಗಿ ಸೈನ್ಯವನ್ನು ರಚಿಸುವ ಮೂಲಕ ತೊಂದರೆಗೊಳಗಾದ ಪ್ರದೇಶಗಳಲ್ಲಿ ರಷ್ಯಾದ ಸೈನ್ಯಕ್ಕೆ ನಾಯಕರಿಗೆ ಸಹಾಯ ಮಾಡುತ್ತಾರೆ. ಹಿಟ್ಲರನ ಸಂಗೀತ ಸಂಯೋಜಕ ರಿಚರ್ಡ್ ವ್ಯಾಗ್ನರ್ ಪ್ರಿಗೋಜಿನ್ ಅವರ ಆದರ್ಶ. ಅದಕ್ಕಾಗಿಯೇ ಅವರು ತನ್ನ ಖಾಸಗಿ ಸೈನ್ಯವನ್ನು ವ್ಯಾಗ್ನರ್ ಎಂದು ಹೆಸರಿಸಿದ್ದಾರೆ .

ಇದನ್ನೂ ಓದಿ-Wagner Group Mutiny: ವ್ಯಾಗನರ್ ಗುಂಪಿನ ದಂಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಷ್ಯಾ, ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ಎಂದ ಪುಟಿನ್

ಯೆವ್ಗೆನಿ ಪ್ರಿಗೋಜಿನ್ ಅವರನ್ನು ಬಂಧಿಸಲು ಆದೇಶ
ಮತ್ತೊಂದೆಡೆ, ರಷ್ಯಾದಲ್ಲಿ ಖಾಸಗಿ ಮಿಲಿಟರಿ ಗುಂಪಿನ ವ್ಯಾಗ್ನರ್ ಗ್ರೂಪ್‌ನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಅವರನ್ನು ಬಂಧಿಸಲು ಕ್ರೆಮ್ಲಿನ್ ಆದೇಶಿಸಿದೆ. ರಷ್ಯಾದ ಗುಪ್ತಚರ ವಿಭಾಗ ಅವರು ಸಶಸ್ತ್ರ ದಂಗೆಗೆ ಕರೆ ನೀಡಿದ್ದಾರೆ ಎಂದು ಆರೋಪಿಸಿದೆ. ವಾಗ್ನರ್ ಶಿಬಿರಗಳ ಮೇಲೆ  ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ ಅವರು ಕ್ರೆಮ್ಲಿನ್ ಅನ್ನು ದೂಷಿಸುತ್ತಿದ್ದಾರೆ ಮತ್ತು ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದಾರೆ. ಇದರ ನಂತರ, ಶುಕ್ರವಾರ ತಡರಾತ್ರಿ, ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ವ್ಯಾಗ್ನರ್ ಗುಂಪಿನ ಸೈನಿಕರನ್ನು ತಮ್ಮ ನಾಯಕನನ್ನು ಬಂಧಿಸುವಂತೆ ಒತ್ತಾಯಿಸಿದೆ.

ಇದನ್ನೂ ಓದಿ-Ginger Ale: ಯಾವ ಪಾನೀಯ ಕೈಯಲ್ಲಿ ಹಿಡಿದು ಪ್ರಧಾನಿ ಮೋದಿ ಬೀಡೆನ್ ಗೆ ಚಿಯರ್ಸ್ ಹೇಳಿದ್ರು?

ನ್ಯಾಯಕ್ಕಾಗಿ ಹೋರಾಟಕ್ಕೆ ಕರೆ ನೀಡಿದ್ದಾರೆ
ರಷ್ಯಾದ ಮಿಲಿಟರಿ ನಾಯಕತ್ವ ಮಾಡುವ ದುಷ್ಟತನವನ್ನು ನಿಲ್ಲಿಸಬೇಕು, ಯಾರು ವಿರೋಧಿಸಿದರೂ ನಾವು ಅದನ್ನು ಬೆದರಿಕೆ ಎಂದು ಪರಿಗಣಿಸುತ್ತೇವೆ ಮತ್ತು ಅದನ್ನು ತಕ್ಷಣವೇ ನಾಶಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ನಾವು ಈ ಸಮಸ್ಯೆಗೆ ಅಂತ್ಯ ಹಾಡಬೇಕಿದೆ.  ಇದು ಮಿಲಿಟರಿ ದಂಗೆಯಲ್ಲ, ಆದರೆ ನ್ಯಾಯದ ಹೋರಾಟ. ಕ್ರೆಮ್ಲಿನ್ ಪ್ರಕಾರ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಿಸ್ಥಿತಿಯ ಬಗ್ಗೆ ತಿಳಿದಿದ್ದಾರೆ ಮತ್ತು ಆಗಾಗ್ಗೆ ಅಪ್ಡೇಟ್ ಗಳನ್ನು ಕರಿಸುತ್ತಿದ್ದಾರೆ. ಫೆಬ್ರವರಿ 2022 ರಲ್ಲಿ ರಷ್ಯಾ ಉಕ್ರೇನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ, ಪ್ರಿಗೋಜಿನ್ ಮತ್ತು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ನಡುವೆ ಅಧಿಕಾರದ ಹೋರಾಟವಿದೆ ಎಂದು ಮಾಧ್ಯಮ ವರದಿಗಳು ವರದಿ  ಮಾಡಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News