Viral Video: ಕಾಗೆ ದಾಳಿಯಿಂದ ಫಜೀತಿಗೊಳಗಾದ ಯುವಕ, ಅಷ್ಟಕ್ಕೂ ಆತ ಮಾಡಿದ್ದೇನು? ವಿಡಿಯೋ ನೋಡಿ...

Trending Video: ಈ ವಿಡಿಯೋದಲ್ಲಿ ಯುವಕನೊಬ್ಬ ಕಾಗೆಯ ದಾಳಿಯಿಂದ ಭಾರಿ ತೊಂದರೆಗೊಳಗಾಗಿದ್ದಾನೆ. ಕಾಗೆ ಆತನಿಗೆ ಎಷ್ಟೊಂದು ಕಾಟ ಕೊಡುತ್ತಿದೆ ಎಂದರೆ, ಯುವಕನಿಗೆ ತನ್ನ ಪ್ರಾಣ ರಕ್ಷಿಸಿಕೊಳ್ಳಲು ಎಲ್ಲಿಗೆ ಹೋಗಬೇಕು ಎಂಬುದೇ ಅರ್ಥವಾಗುತ್ತಿಲ್ಲ.  

Written by - Nitin Tabib | Last Updated : Mar 19, 2023, 05:42 PM IST
  • ಈ ವೀಡಿಯೊವನ್ನು ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
  • ಇದುವರೆಗೆ ಐದು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ.
  • ವಿಡಿಯೋಗೆ 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
Viral Video: ಕಾಗೆ ದಾಳಿಯಿಂದ ಫಜೀತಿಗೊಳಗಾದ ಯುವಕ, ಅಷ್ಟಕ್ಕೂ ಆತ ಮಾಡಿದ್ದೇನು? ವಿಡಿಯೋ ನೋಡಿ... title=
ಯುವಕನ ಮೇಲೆ ದಾಳಿ ಇಟ್ಟ ಕಾಗೆ!

Shocking Video: ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುವ ಕೆಲ ವಿಡಿಯೋಗಳನ್ನು ನೋಡಿದರೆ ಭಾರಿ ಅಚ್ಚರಿಯುಂಟಾಗುತ್ತದೆ. ಕೆಲವು ವೀಡಿಯೊಗಳನ್ನು ನೋಡಿದ ನಂತರ, ನಿಜವಾಗಿಯೂ ಈ ರೀತಿ ಸಂಭವಿಸುತ್ತಾ? ಎಂಬ ಪ್ರಶ್ನೆ ನೋಡುಗರ ಮನಸ್ಸಿನಲ್ಲಿ ಮೂಡುತ್ತದೆ. ಪ್ರಸ್ತುತ ಭಾರಿ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ, ಕಾಗೆಯೊಂದು ನಡೆಸುತ್ತಿರುವ ದಾಳಿಗೆ  ಯುವಕನೊಬ್ಬ ಭಾರಿ ತೊಂದರೆಗೊಳಗಾಗಿದ್ದಾನೆ. ಕಾಗೆ ಆತನಿಗೆ ಅಷ್ಟೊಂದು ತೊಂದರೆ ನೀಡುತ್ತಿದೆ ಎಂದರೆ ಯುವಕ ಪ್ರಾಣ ಉಳಿಸಿಕೊಳ್ಳಲು ಅತ್ತಿಂದಿತ್ತ ಓಡಾಡುತ್ತಿದ್ದಾನೆ ಮಾತು ಕಾಗೆ ಆತನಿಗೆ ಯೋಚನೆ ಮಾಡುವುದಕ್ಕೂ ಕೂಡ ಸಮಯ ನೀಡುತ್ತಿಲ್ಲ. ನಾವು ತಮಾಷೆ ಮಾಡುತ್ತಿರಬೇಕು ಎಂದು ನೀವು ಯೋಚಿಸುತ್ತಿದ್ದರೆ, ವಾಸ್ತವ ನಿಮ್ಮ ಕಣ್ಣ ಮುಂದೆಯೇ ಇದೆ.  ಈ ವೀಡಿಯೊ ಅದಕ್ಕೆ ಸಾಕ್ಷಿಯಾಗಿದೆ ಮತ್ತು ಅದು ನಿಮ್ಮ ಎಲ್ಲಾ ಗೊಂದಳಗಳನ್ನು ನಿವಾರಿಸಲಿದೆ. 

ಇದನ್ನೂ ಓದಿ-Viral Video: ವೇಗವಾಗಿ ಚಲಿಸುತ್ತಿದ್ದ ಆಟೋಮೋಡ್ ಕಾರಲ್ಲಿ ಪತಿ-ಪತ್ನಿಯ ಸರಸ... ವಿಡಿಯೋ ನೋಡಿ!

ಯುವಕನಿಗೆ ಭಾರಿ ತೊಂದರೆ ಕೊಡುತ್ತಿರುವ ಕಾಗೆ
ಈ ವಿಡಿಯೋದಲ್ಲಿ ಯುವಕನೊಬ್ಬ ಬ್ಯಾಗ್‌ ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಯುವಕನ ಕೈಯಲ್ಲಿ ಏನೋ ಇದೆ. ಅವನು ಎಲ್ಲೋ ಹೋಗುತ್ತಿರುವಾಗ ಕಾಗೆ ಅವನನ್ನು ಹಿಂಬಾಲಿಸುತ್ತದೆ. ಅವನು ಕಾಗೆಯಿಂದ ತನ್ನನ್ನು ತಾನು  ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾನೆ, ಆದರೆ ಕಾಗೆಯು ಯುವಕನ ತಲೆಯ ಮೇಲೆ ನಿರಂತರವಾಗಿ ಸುಳಿದಾಡುತ್ತಿದೆ. ಕಾಗೆ ಕೈಯಿಂದ ತಪ್ಪಿಸಿಕೊಳ್ಳಲು ಯುವಕ ಒದ್ದಾಡುತ್ತಿರುವುದನ್ನು ನೀವು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಅವನು ಬೀದಿಗೆ ಓಡುತ್ತಾನೆ ಮತ್ತು ಮಾಲ್ ಒಳಗೆ ಹೊಕ್ಕುತ್ತಾನೆ. ಆದರೂ ಕೂಡ ಕಾಗೆ ಅವನನ್ನು ಬಿಡುವುದಿಲ್ಲ. ಯುವಕ ಒಳಗೆ ಹೋಗಿ ಕಂಬದ ಹಿಂದೆ ಅಡಗಿಕೊಳ್ಳುತ್ತಾನೆ, ಇದಾದ ಬಳಿಕವೂ ಕೂಡ  ಕಾಗೆ ಯುವಕನನ್ನು ಹಿಂಬಾಲಿಸುವುದನ್ನು ಬಿಡುವುದಿಲ್ಲ. ಯುವಕನು ಕಂಬವನ್ನು ಸುತ್ತಿದಾಗ, ಕಾಗೆ ಕೂಡ ಸುತ್ತಲು ಪ್ರಾರಂಭಿಸುತ್ತದೆ. ಒಂದು ನಿಮಿಷದ ಈ ವೀಡಿಯೋದಲ್ಲಿ ಕಾಗೆ ಒಂದು ಕ್ಷಣವೂ ಯುವಕನಿಂದ ದೂರವಾಗುವುದಿಲ್ಲ.

ಇದನ್ನೂ ಓದಿ-Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!

5 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ
ಈ ವೀಡಿಯೊವನ್ನು ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ ಐದು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ವಿಡಿಯೋಗೆ 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಈ ರೀತಿಯ ವೀಡಿಯೋವನ್ನು ನೀವು ಈ ಹಿಂದೆ ನೋಡಿರಲಿಕ್ಕಿಲ್ಲ. ಈ ವಿಡಿಯೋ ತನ್ನಷ್ಟಕ್ಕೆ ತಾನೇ ಭಾರಿ ಅಚ್ಚರಿ ಮೂಡಿಸಿದೆ. ಈ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News