Skin Cancer: ಚರ್ಮದ ಕ್ಯಾನ್ಸರ್ ಬಗ್ಗೆ ನಿಮ್ಮ ಸ್ಮಾರ್ಟ್ಫೋನ್ ಸಹ ನೀಡುತ್ತೆ ಎಚ್ಚರಿಕೆ

Skin Cancer: ಇತ್ತೀಚಿನ ದಿನಗಳಲ್ಲಿ ಚರ್ಮದ ಕ್ಯಾನ್ಸರ್ ಕೂಡ ಒಂದು ಗಂಭೀರ ಕಾಯಿಲೆಯ ಸ್ವರೂಪವನ್ನು ಪಡೆಯುತ್ತಿದೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸಮಸ್ಯೆ ಉಲ್ಬಣಿಸಬಹುದು. 

Written by - Yashaswini V | Last Updated : Jun 20, 2023, 12:45 PM IST
  • ಮೆಲ್ಬೋರ್ನ್ ವಿಶ್ವವಿದ್ಯಾನಿಲಯದ ಸಂಶೋಧಕರು ಕ್ಯಾಮೆರಾ ಲೆನ್ಸ್ ಅನ್ನು ಕಂಡು ಹಿಡಿದಿದೆ
  • ಈ ಕ್ಯಾಮೆರಾ ಲೆನ್ಸ್ ಜನ್ಮ ಗುರುತು ಅಥವಾ ಚರ್ಮದ ಮೇಲೆ ಮೂಡಿದ ಯಾವುದೇ ರೀತಿಯ ಗುರುತುಗಳ ವಿವರವಾದ ಫೋಟೋವನ್ನು ತೆಗೆದುಕೊಳ್ಳುತ್ತದೆ.
  • ಈ ಛಾಯಾಚಿತ್ರಗಳ ಮೂಲಕ ಜೈವಿಕ ಕೋಶಗಳನ್ನು ಪರೀಕ್ಷಸಿ ಚರ್ಮದ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು ಎನ್ನಲಾಗಿದೆ.
Skin Cancer: ಚರ್ಮದ ಕ್ಯಾನ್ಸರ್ ಬಗ್ಗೆ ನಿಮ್ಮ ಸ್ಮಾರ್ಟ್ಫೋನ್ ಸಹ ನೀಡುತ್ತೆ ಎಚ್ಚರಿಕೆ  title=

Skin Cancer Treatment: ಈ ತಂತ್ರಜ್ಞಾನ ಯುಗದಲ್ಲಿ ಹೃದಯ ಬಡಿತ, ಆಮ್ಲಜನಕದ ಮಟ್ಟ ಎಲ್ಲವನ್ನೂ ನಮ್ಮ ಕೈನಲ್ಲಿರುವ ಸ್ಮಾರ್ಟ್ಫೋನ್ ಸಹಾಯದಿಂದ ಸುಲಭವಾಗಿ ನೋಡಬಹುದು ಎಂದು ನಿಮಗೆ ತಿಳಿದೇ ಇದೆ. ಆದರೆ, ಇದೀಗ ಚರ್ಮದ ಕ್ಯಾನ್ಸರ್ ಬಗ್ಗೆಯೂ ಸಹ ಸ್ಮಾರ್ಟ್ಫೋನ್ ಮಾಹಿತಿ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ? 

ಹೌದು, ಆಸ್ಟ್ರೇಲಿಯಾದ ಸಂಶೋಧಕರು ನ್ಯಾನೊತಂತ್ರಜ್ಞಾನದೊಂದಿಗೆ ಚರ್ಮದ ಕ್ಯಾನ್ಸರ್ ಅನ್ನು ಗುರುತಿಸಲು ಕ್ಯಾಮರಾ ಲೆನ್ಸ್ ಅನ್ನು ಸಿದ್ಧಪಡಿಸಿದ್ದಾರೆ. ಮಾತ್ರವಲ್ಲ, ಇದರೊಂದಿಗೆ ನಮ್ಮ ಭಾರತೀಯ ಸಂಶೋಧಕರು ಅಂತಹ ಒಂದು ಬ್ಯಾಂಡೇಜ್ ಅನ್ನು ಸಿದ್ಧಪಡಿಸಿದ್ದು  ಇದರ ಸಹಾಯದಿಂದ ಚರ್ಮದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ನಿರ್ಮೂಲನೆ ಮಾಡಬಹುದು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಟಾಪ್ 10 ಸೂಪರ್‌ಫುಡ್

ವಾಸ್ತವವಾಗಿ, ಮೆಲ್ಬೋರ್ನ್ ವಿಶ್ವವಿದ್ಯಾನಿಲಯದ ಸಂಶೋಧಕರು ಕ್ಯಾಮೆರಾ ಲೆನ್ಸ್ ಅನ್ನು ಕಂಡು ಹಿಡಿದಿದ್ದು, ಈ ಕ್ಯಾಮೆರಾ ಲೆನ್ಸ್ ಜನ್ಮ ಗುರುತು ಅಥವಾ ಚರ್ಮದ ಮೇಲೆ ಮೂಡಿದ ಯಾವುದೇ ರೀತಿಯ ಗುರುತುಗಳ ವಿವರವಾದ ಫೋಟೋವನ್ನು ತೆಗೆದುಕೊಳ್ಳುತ್ತದೆ. ಈ ಛಾಯಾಚಿತ್ರಗಳ ಮೂಲಕ ಜೈವಿಕ ಕೋಶಗಳನ್ನು ಪರೀಕ್ಷಸಿ ಚರ್ಮದ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು ಎನ್ನಲಾಗಿದೆ. 

ಕೇವಲ ಚರ್ಮದ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಮಾತ್ರವಲ್ಲದೆ ಯಾವುದೇ ರೀತಿಯ ರೋಗವನ್ನು ಕಂಡು ಹಿಡಿಯಲು, ಆಪ್ಟಿಕಲ್ ಮೈಕ್ರೋಸ್ಕೋಪ್ ಮೂಲಕ ಜೈವಿಕ ಕೋಶಗಳ ಪರೀಕ್ಷೆಯು ಅತ್ಯಂತ ಮುಖ್ಯವಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Weight Loss Tipes: ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕೆ ಹಾಗಿದ್ದರೆ ಇಲ್ಲಿದೆ ಸಿಂಪಲ್‌ ಟಿಪ್ಸ್..!

ಭಾರತೀಯ ಸಂಶೋಧಕರು ತಯಾರಿಸಿದ ಈ ಸಣ್ಣ ಬ್ಯಾಂಡೇಜ್ ನಿಂದ ಸಿಗುತ್ತೆ ಚಿಕಿತ್ಸೆ :
ಸ್ಮಾರ್ಟ್ಫೋನ್ ಬಳಕೆಯಿಂದ ಚರ್ಮದ ಕ್ಯಾನ್ಸರ್ ಪತ್ತೆ ಹಚ್ಚುವುದು ಮಾತ್ರವಲ್ಲ, ಭಾರತೀಯ ಸಂಶೋಧಕರು ತಯಾರಿಸಿರುವ ಸಣ್ಣ ಬ್ಯಾಂಡೇಜ್ ಸಹಾಯದಿಂದ ಆರಂಭಿಕ ಹಂತದಲ್ಲಿಯೇ  ಚರ್ಮದ ಕ್ಯಾನ್ಸರ್ ಅನ್ನು ಗುಣಪಡಿಸಬಹುದು. ಇದನ್ನು ಮ್ಯಾಗ್ನೆಟಿಕ್ ನ್ಯಾನೊಫೈಬರ್‌ನಿಂದ ತಯಾರಿಸಲಾಗಿದ್ದು ಇದು ಶಾಖವನ್ನು ನೀಡುವ ಮೂಲಕ ಚರ್ಮದ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ. ಬ್ಯಾಂಡೇಜ್ ಕಬ್ಬಿಣದ ಆಕ್ಸಿಡೀಕೃತ ನ್ಯಾನೊಪರ್ಟಿಕಲ್ಸ್ ಮತ್ತು ಜೈವಿಕ ವಿಘಟನೀಯ ಪಾಲಿಮರ್ ಅನ್ನು ಹೊಂದಿರುತ್ತದೆ, ಇದನ್ನು ಶಸ್ತ್ರಚಿಕಿತ್ಸೆಯ ಟೇಪ್ನಲ್ಲಿ ಅಪ್ಪ್ಲೈ ಮಾಡಲಾಗುವುದು. ಈ ಟೇಪ್ ಕಾಂತೀಯ ಕ್ಷೇತ್ರವನ್ನು ಪಡೆಯುತ್ತದೆ. ಹಾಗಾಗಿ, ಇದರಲ್ಲಿರುವ ವಸ್ತುಗಳು ಒಟ್ಟಾಗಿ ಶಾಖವನ್ನು ನೀಡುತ್ತವೆ ಮತ್ತು ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಕೆಲಸ ಮಾಡುತ್ತವೆ ಎಂದು ತಿಳಿದುಬಂದಿದೆ. 

ಚರ್ಮದ ಕ್ಯಾನ್ಸರ್ ವಿಧಗಳು: 
ಸೂರ್ಯನಿಂದ ಹೊರಹೊಮ್ಮುವ ನೇರಳಾತೀತ ಕಿರಣಗಳೇ ಚರ್ಮದ ಕ್ಯಾನ್ಸರ್ಗೆ ಪ್ರಮುಖ ಕಾರಣಗಳು.  ಚರ್ಮದ ಕ್ಯಾನ್ಸರ್ ನಲ್ಲಿ ಎರಡು ವಿಧಗಳಿವೆ. ಇದು ಮೆಲನೋಮ ಮತ್ತು ನಾನ್-ಮೆಲನೋಮವನ್ನು ಒಳಗೊಂಡಿದೆ. ಮೆಲನೋಮ ಎಂಬ ಚರ್ಮದ ಕ್ಯಾನ್ಸರ್ ಮಾರಣಾಂತಿಕವೂ ಆಗಬಹುದು. ಇದು ಕಪ್ಪು ಎಳ್ಳಿನಂತಿರುತ್ತದೆ. ಅಂತರಾಷ್ಟ್ರೀಯ ಏಜೆನ್ಸಿಯ ಪ್ರಕಾರ, 2020 ರಲ್ಲಿ, ವಿಶ್ವದಾದ್ಯಂತ 32.5 ಮಿಲಿಯನ್ ಚರ್ಮದ ಕ್ಯಾನ್ಸರ್ ರೋಗಿಗಳು ಪತ್ತೆಯಾಗಿದ್ದು ಅವರಲ್ಲಿ 5,700 ಜನರು ಸಾವನ್ನಪ್ಪಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News