WhatsApp Favorite Feature: ವಾಟ್ಸ್ ಆಪ್ ನಲ್ಲಿ ಶೀಘ್ರದಲ್ಲೇ ಬರಲಿದೆ ನಿಮ್ಮ ನೆಚ್ಚಿನ ವೈಶಿಷ್ಟ್ಯ, ಇಲ್ಲಿದೆ ಡೀಟೈಲ್ಸ!

WhatsApp New Feature: ಶೀಘ್ರದಲ್ಲಿಯೇ ವಾಟ್ಸ್ ಆಪ್ ಬಳಕೆದಾರರಿಗೆ ಅವರ ನೆಚ್ಚಿನ ವೈಶಿಷ್ಟ್ಯ ಸಿಗಲಿದೆ. ಇದರಿಂದ ಅವರು ತಮ್ಮ ನೆಚ್ಚಿನ ಸಂಪರ್ಕಗಳಿಗೆ ತ್ವರಿತ ಮತ್ತು ಸುಲಭ  ಕರೆಗಳನ್ನು ಮಾಡಲು ಸಾಧ್ಯವಾಗಲಿದೆ. ಅರ್ಥಾತ್ ಬಳಕೆದಾರರಿಗೆ Favorite Feature ಸಿಗಲಿದೆ. (Technology News In Kannada)  

Written by - Nitin Tabib | Last Updated : Mar 5, 2024, 05:02 PM IST
  • ಈಗ ಇತ್ತೀಚಿನ ವರದಿಯು ಕಂಪನಿಯು ಈ ವೈಶಿಷ್ಟ್ಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಿದೆ.
  • ಹೆಚ್ಚುವರಿಯಾಗಿ, ಆಯ್ಕೆ ಮಾಡಿದ ನೆಚ್ಚಿನ ಸಂಪರ್ಕಗಳನ್ನು ನಿರ್ವಹಿಸುವ ಸೌಲಭ್ಯವನ್ನು ಬಳಕೆದಾರರಿಗೆ ನೀಡಲಾಗುವುದು.
  • ವರದಿಯಲ್ಲಿ ಸ್ಕ್ರೀನ್‌ಶಾಟ್ ನೀಡಲಾಗಿದೆ. ಈ ವೈಶಿಷ್ಟ್ಯವು ಅದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
WhatsApp Favorite Feature: ವಾಟ್ಸ್ ಆಪ್ ನಲ್ಲಿ ಶೀಘ್ರದಲ್ಲೇ ಬರಲಿದೆ ನಿಮ್ಮ ನೆಚ್ಚಿನ ವೈಶಿಷ್ಟ್ಯ, ಇಲ್ಲಿದೆ ಡೀಟೈಲ್ಸ! title=

WhatsApp ತನ್ನ ಅಪ್ಲಿಕೇಶನ್ ಬಳಕೆದಾರರ ಸ್ನೇಹಿಯಾಗಿಸಲು ಹಲವು ಹೊಸ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಕಮ್ಯೂನಿಟಿಯಿಂದ ಹಿಡಿದು ಚಾನೆಲ್ ಗಳ ವರೆಗೆ  ಎಲ್ಲರಿಗಾಗಿ ಹೊಸ ವೈಶಿಷ್ಟ್ಯಗಳನ್ನು ತರಲು ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ಭವಿಷ್ಯದ ಅಪ್ಡೇಟ್ ಗಳೊಂದಿಗೆ ಇವುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದಲ್ಲದೆ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಕರೆ ಮಾಡುವ ವೈಶಿಷ್ಟ್ಯವನ್ನು ಮತ್ತಷ್ಟು ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿಸಲು ಫೇವರೇಟ್ ಸಂಪರ್ಕಗಳನ್ನು ಆಯ್ಕೆ ಮಾಡುವ ವೈಶಿಷ್ಟ್ಯವನ್ನು ಜಾರಿಗೆ ತರುವುದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಈ ವೈಶಿಷ್ಟ್ಯದ ಕುರಿತು ವಿಸ್ತೃತ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ, (Technology News In Kannada)

WhatsApp Favorite Feature ಮೇಲೆ ಕಾರ್ಯನಿರ್ವಹಿಸುತ್ತಿದೆ
WhatsApp ನ ಮುಂಬರುವ ವೈಶಿಷ್ಟ್ಯಗಳ ಮೇಲೆ ಕಣ್ಣಿಡುವ WABetainfo ವೆಬ್‌ಸೈಟ್‌ನ ಇತ್ತೀಚಿನ ವರದಿಯು ನೆಚ್ಚಿನ ಸಂಪರ್ಕಗಳನ್ನು ಆಯ್ಕೆ ಮಾಡುವ ಮತ್ತು ನಿರ್ವಹಿಸುವ ಸೌಲಭ್ಯವನ್ನು ಒದಗಿಸುವುದರ ಮೇಲೆ WhatsApp ಕಾರ್ಯನಿರ್ವಹಿಸುತ್ತಿದೆ ಎಂದು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.24.5.5 ಅಪ್‌ಡೇಟ್‌ಗಾಗಿ WhatsApp ಬೀಟಾ ಕಂಪನಿಯು ನೆಚ್ಚಿನ ಸಂಪರ್ಕಗಳನ್ನು ಆಯ್ಕೆ ಮಾಡುವ ಜೊತೆಗೆ ಅವುಗಳನ್ನು ನಿರ್ವಹಿಸುವ ಸೌಲಭ್ಯವನ್ನು ಒದಗಿಸುತ್ತದೆ ಎಂದು ಬಹಿರಂಗಪಡಿಸಿದೆ.

ವಾಟ್ಸಾಪ್ ತನ್ನ ಬಳಕೆದಾರರಿಗೆ ಅವರ ನೆಚ್ಚಿನ ಸಂಪರ್ಕಗಳನ್ನು ಪಟ್ಟಿ ಮಾಡುವ  ಸೌಲಭ್ಯವನ್ನು ನೀಡುವುದರ ಮೇಲೆ ಕಾರ್ಯನಿರ್ವಹಿಸುತ್ತಿದೆ  ಎಂದು ಈ ಹಿಂದೆ ವರದಿಯಲ್ಲಿ ಹೇಳಲಾಗಿತ್ತು. ಇದರೊಂದಿಗೆ, ಅವರು ತಮ್ಮ ನೆಚ್ಚಿನ ಸಂಪರ್ಕಗಳಿಗೆ ಸುಲಭವಾಗಿ ಮತ್ತು ತ್ವರಿತವಾಗಿ ಕರೆ ಮಾಡಲು ಸಾಧ್ಯವಾಗಲಿದೆ.

ನೆಚ್ಚಿನ ಸಂಪರ್ಕಗಳ ಪಟ್ಟಿಯನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗಲಿದೆ
ಈಗ ಇತ್ತೀಚಿನ ವರದಿಯು ಕಂಪನಿಯು ಈ ವೈಶಿಷ್ಟ್ಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಿದೆ. ಹೆಚ್ಚುವರಿಯಾಗಿ, ಆಯ್ಕೆ ಮಾಡಿದ ನೆಚ್ಚಿನ ಸಂಪರ್ಕಗಳನ್ನು ನಿರ್ವಹಿಸುವ ಸೌಲಭ್ಯವನ್ನು ಬಳಕೆದಾರರಿಗೆ ನೀಡಲಾಗುವುದು. ವರದಿಯಲ್ಲಿ ಸ್ಕ್ರೀನ್‌ಶಾಟ್ ನೀಡಲಾಗಿದೆ. ಈ ವೈಶಿಷ್ಟ್ಯವು ಅದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಇದನ್ನೂ ಓದಿ-Tips For Safety Driving: ನೀವೂ ಚಪ್ಪಲ್ ಧರಿಸಿ ಕಾರು ಒಡಸ್ತಿರಾ? ಎಚ್ಚರ..! ಕಾರಣ ಇಲ್ಲಿದೆ

ಸ್ಕ್ರೀನ್‌ಶಾಟ್‌ನ ಪ್ರಕಾರ, ಬಳಕೆದಾರರು ಆಯ್ಕೆ ಮಾಡಿದ ನೆಚ್ಚಿನ ಸಂಪರ್ಕಗಳು ಮತ್ತು ಗುಂಪುಗಳು ಈ favorite ವಿಭಾಗದಲ್ಲಿ ಕಂಡುಬರಲಿವೆ. ಈ ವಿಭಾಗಕ್ಕೆ ಹೋಗುವ ಮೂಲಕ, ಬಳಕೆದಾರರು ತಮ್ಮ ನೆಚ್ಚಿನ ಸಂಪರ್ಕಗಳು ಮತ್ತು ಗುಂಪುಗಳಿಗೆ ಸುಲಭವಾಗಿ ಕರೆ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೇ ವಾಟ್ಸಾಪ್ ಬಳಕೆದಾರರಿಗೆ ಡ್ರ್ಯಾಗ್ ಅಂಡ್ ಡ್ರಾಪ್ ಸೌಲಭ್ಯವನ್ನೂ ಒದಗಿಸಲಿದೆ. ಇದರೊಂದಿಗೆ ನೀವು ಪಟ್ಟಿಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ-iPhone 14 Plus Offer: ಶೇ.25 ರಷ್ಟು ರಿಯಾಯಿತಿ ಬೆಲೆಗೆ ಸಿಗುತ್ತಿದೆ ಐಫೋನ್ 14, ತ್ವರೆ ಮಾಡಿ!

WhatsApp ನ ಈ ವೈಶಿಷ್ಟ್ಯವು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಭವಿಷ್ಯದ ನವೀಕರಣಗಳೊಂದಿಗೆ ಪರೀಕ್ಷಾ ಆಯ್ಕೆಯಾಗಿ ಇದನ್ನು ಮೊದಲು ಬೀಟಾ ಬಳಕೆದಾರರಿಗೆ ಜಾರಿಗೆ ತರಲಾಗುತ್ತಿದೆ. ಅದರ ನಂತರ ಎಲ್ಲಾ ಬಳಕೆದಾರರಿಗೆ ವೈಶಿಷ್ಟ್ಯವನ್ನು ಜಾರಿಗೊಳಿಸಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News